ಚಂದ್ರ ಮೋಹನ್ ನಿರ್ದೇಶನದ ಕಾಮಿಡಿ ಥ್ರಿಲ್ಲರ್‌ನಲ್ಲಿ ನಟ ಅನೀಶ್, ಗುರುನಂದನ್, ಚಿಕ್ಕಣ್ಣ ನಟನೆ
ಸುಮನ್ ರಂಗನಾಥ್, ಚಿಕ್ಕಣ್ಣ ನಟಿಸಿದ್ದ ಡಬಲ್ ಎಂಜಿನ್ ಮತ್ತು ಸತೀಶ್ ನೀನಾಸಂ ನಟನೆಯ 'ಬ್ರಹ್ಮಚಾರಿ'ಯಂತಹ ಹಾಸ್ಯಮಯ ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಚಂದ್ರ ಮೋಹನ್ ಅವರು ತಮ್ಮ ಮೂರನೇ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ.

ಸುಮನ್ ರಂಗನಾಥ್, ಚಿಕ್ಕಣ್ಣ ನಟಿಸಿದ್ದ ಡಬಲ್ ಎಂಜಿನ್ ಮತ್ತು ಸತೀಶ್ ನೀನಾಸಂ ನಟನೆಯ 'ಬ್ರಹ್ಮಚಾರಿ'ಯಂತಹ ಹಾಸ್ಯಮಯ ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಚಂದ್ರ ಮೋಹನ್ ಅವರು ತಮ್ಮ ಮೂರನೇ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ. ಈ ಬಾರಿ, ನಿರ್ದೇಶಕರು ಮಲ್ಟಿಸ್ಟಾರರ್ ಸಿನಿಮಾ ನಿರ್ದೇಶಿಸುತ್ತಿದ್ದು, ಚಿತ್ರದಲ್ಲಿ ನಟ ಅನೀಶ್, ಗುರುನಂದನ್, ಚಿಕ್ಕಣ್ಣ ಮತ್ತು ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾಮಿಡಿ ಎಂಟರ್ಟೈನಿಂಗ್ ಥ್ರಿಲ್ಲರ್ ಆಗಿರುವ ಈ ಚಿತ್ರವು ಈಗಾಗಲೇ ತನ್ನ ಮೊದಲ ಹಂತದ ಚಿತ್ರೀಕರಣವನ್ನು ಇತ್ತೀಚೆಗೆ ಮಡಿಕೇರಿಯ ಸುಂದರವಾದ ಸ್ಥಳದಲ್ಲಿ ಪ್ರಾರಂಭಿಸಿದೆ.
ಎನ್‌ಎಂಕೆ ಸಿನಿಮಾಸ್‌ನ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ, ಎನ್‌ಎಂ ಕಾಂತರಾಜ್ ಅವರ ಬೆಂಬಲದೊಂದಿಗೆ ಈ ಚಿತ್ರದಲ್ಲಿ ಅರ್ಚನಾ ಕೊಟ್ಟಿಗೆ ನಾಯಕಿಯಾಗಿ ನಟಿಸಿದ್ದಾರೆ. ಇದಲ್ಲದೆ, ನಿರ್ದೇಶಕರು ಇನ್ನೂ ಒಂದೆರಡು ನಾಯಕಿಯರ ಆಯ್ಕೆ ಮಾಡುವ ಅಂತಿಮ ಹಂತದಲ್ಲಿದ್ದಾರೆ. ಚಿತ್ರಕ್ಕೆ ರವಿಕುಮಾರ್ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿದ್ದು, ನಿರ್ಮಾಪಕರು ಸಂಗೀತ ನಿರ್ದೇಶಕರನ್ನು ಖಚಿತಪಡಿಸುವ ಅಂಚಿನಲ್ಲಿದ್ದಾರೆ.
ಇತ್ತೀಚೆಗಷ್ಟೇ 'ಆರಾಮ್ ಅರವಿಂದ್ ಸ್ವಾಮಿ' ಚಿತ್ರದ ಶೂಟಿಂಗ್ ಮುಗಿಸಿರುವ ಅನೀಶ್, ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈಮಧ್ಯೆ, ಗುರುನಂದನ್ ತಮ್ಮ ಮುಂದಿನ 'ರಾಜು ಜೇಮ್ಸ್ ಬಾಂಡ್' ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಮತ್ತೊಂದೆಡೆ, ಅನಿಲ್ ಕುಮಾರ್ ನಿರ್ದೇಶನದ ಚಿಕ್ಕಣ್ಣ ಅವರು ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ ಚಿತ್ರ 'ಉಪಾಧ್ಯಕ್ಷ' ಚಿತ್ರೀಕರಣವನ್ನು ಪೂರ್ಣಗೊಳಿಸಿದೆ ಮತ್ತು ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


