ಪ್ರಾಜೆಕ್ಟ್ K' ಗೆ ಇದೀಗ 'ಕಲ್ಕಿ 2898 AD' ಎಂಬ ಟೈಟಲ್, ಫಸ್ಟ್ ಲುಕ್ ರಿವೀಲ್!
ಜನಪ್ರಿಯ ತೆಲುಗು ನಟ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ನಾಗ್ ಅಶ್ವಿನ್ ನಿರ್ದೇಶನದ ವೈಜ್ಞಾನಿಕ ಚಿತ್ರ ಪ್ರಾಜೆಕ್ಟ್ K ಗೆ ಇದೀಗ 'ಕಲ್ಕಿ 2898-AD' ಎಂದು ಟೈಟಲ್ ಇಡಲಾಗಿದೆ. ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ನಲ್ಲಿ ಚಿತ್ರತಂಡ ಈ ಟೈಟಲ್ ಘೋಷಿಸಿದರು.

ಸ್ಯಾನ್ ಡಿಯಾಗೋ: ಜನಪ್ರಿಯ ತೆಲುಗು ನಟ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ನಾಗ್ ಅಶ್ವಿನ್ ನಿರ್ದೇಶನದ ವೈಜ್ಞಾನಿಕ ಚಿತ್ರ ಪ್ರಾಜೆಕ್ಟ್ K ಗೆ ಇದೀಗ 'ಕಲ್ಕಿ 2898-AD' ಎಂದು ಟೈಟಲ್ ಇಡಲಾಗಿದೆ. ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ನಲ್ಲಿ ಚಿತ್ರತಂಡ ಈ ಟೈಟಲ್ ಘೋಷಿಸಿದರು.
ಬಹು ನಿರೀಕ್ಷಿತ ಚಿತ್ರದ ಪ್ರಭಾಸ್ ಹಾಗೂ ಹಿರಿಯ ನಟ ಕಮಲ್ ಹಾಸನ್ ಅವರ ಫಸ್ಟ್ ಲುಕ್ ನ್ನು ನಿರ್ಮಾಪಕರಾದ ವೈಜಯಂತಿ ಮೂವೀಸ್ ಅವರು ಎಸ್ ಡಿಸಿಸಿಯಲ್ಲಿ ಹಂಚಿಕೊಂಡಿದ್ದಾರೆ. ಕಲ್ಕಿ 2898-AD ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ನೋಡಿರದ ಜಗತ್ತಿಗೆ ಪ್ರೇಕ್ಷಕರನ್ನು ಸಾಗಿಸುವ ಭರವಸೆ ನೀಡುತ್ತದೆ. ಈ ಚಲನಚಿತ್ರವು 2898 ADಗೆ ಹೊಂದಿಕೊಂಡಂತಿದ್ದು, ವಿಶಿಷ್ಟ ಅನುಭವ ನೀಡುತ್ತದೆ ಎಂದು ಚಿತ್ರ ನಿರ್ಮಾಪಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


