ಶುಭಾ ಪೂಂಜಾ ನಟನೆಯ 50ನೇ ಸಿನಿಮಾ 'ಅಂಬುಜಾ' ರಿಲೀಸ್ ಡೇಟ್ ಫಿಕ್ಸ್!
ನಟಿ ಶುಭಾ ಪೂಂಜಾ ಹಾಗು ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ರಜಿನಿ ಮುಖ್ಯಭೂಮಿಕೆಯಲ್ಲಿರೋ ಅಂಬುಜ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ನೈಜ ಘಟನೆ ಆಧಾರಿತ ಕುತೂಹಲ ಭರಿತ ಟ್ರೇಲರ್ ಹಾಗು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

ಸ್ಯಾಂಡಲ್ವುಡ್ನಲ್ಲಿ ಅದ್ಧೂರಿ ಮೇಕಿಂಗ್ ಚಿತ್ರಗಳ ಮಧ್ಯೆ ಮಹಿಳಾ ಪ್ರಧಾನ ಸಿನಿಮಾಗಳು ಸಿನಿ ಪ್ರೇಮಿಗಳನ್ನು ಎಂಟರ್ಟೈನ್ ಮಾಡ್ತಾ ಇವೆ. ಈ ಸಾಲಿಗೆ ಈಗ ಅಂಬುಜ ಸಿನಿಮಾ ಕೂಡ ಒಂದು.
ನಟಿ ಶುಭಾ ಪೂಂಜಾ ಹಾಗು ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ರಜಿನಿ ಮುಖ್ಯಭೂಮಿಕೆಯಲ್ಲಿರೋ ಅಂಬುಜ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ನೈಜ ಘಟನೆ ಆಧಾರಿತ ಕುತೂಹಲ ಭರಿತ ಟ್ರೇಲರ್ ಹಾಗು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.
ಅಂಬುಜಾ, ಕ್ರೈಮ್ ಥ್ರಿಲ್ಲರ್, ಹಾಸ್ಯ, ಪ್ರೇಮ, ಹಾರರ್, ಥ್ರಿಲ್ಲರ್, ಸಸ್ಪೆನ್ಸ್ ಮತ್ತು ಭಾವನೆಗಳ ಅಂಶಗಳನ್ನು ಮನಬಂದಂತೆ ಬೆರೆಸಿ ವಿಶಿಷ್ಟವಾದ ಅನುಭವ ಸೃಷ್ಟಿಸುತ್ತದೆ ಎಂದು ನಿರ್ದೇಶಕರು ಹೇಳುತ್ತಾರೆ, ತಮ್ಮ ಚಿತ್ರದ ಬಗ್ಗೆ ಕೆಲವು ಗಮನಾರ್ಹ ಹೈಲೈಟ್‌ಗಳನ್ನು ಹಂಚಿಕೊಂಡಿದ್ದಾರೆ.
ಬಳಿಕ ಶುಭಾ ಪೂಂಜಾ ಮಾತನಾಡಿ, ನನ್ನ ಪಾತ್ರ ಒಂದು ಕ್ರೈಂ ರಿಪೋರ್ಟರ್ ಪಾತ್ರ. ತುಂಬಾ ಶೇಡ್ ಇದೆ. ನನಗೆ ತುಂಬಾ ಇಷ್ಟವಾದ ಪಾತ್ರ. ಸಿನಿಮಾನ ನಾನು ನೋಡಿದ್ದೇನೆ. ತುಂಬಾ ಅದ್ಭುತವಾಗಿ ಮೂಡಿಬಂದಿದೆ. ಶ್ರೀನಿ ಜೊತೆಗೆ ಇದು ಎರಡನೇ ಸಿನಿಮಾ. ಕ್ರೈಮ್, ಹಾರರ್, ಸಸ್ಪೆನ್ಸ್, ಕಾಮಿಡಿ, ಸೆಂಟಿಮೆಂಟ್ ಎಲ್ಲ ಅಂಶವನ್ನು ಸಿನಿಮಾದಲ್ಲಿ ಇದೆ. ಫ್ಯಾಮಿಲಿ ಕುಳಿತು ನೋಡುವಂತಹ ಸಿನಿಮಾ ಎಂದು ಹೇಳಿದರು.
ಅಂಬುಜಾದಲ್ಲಿ ರಜನಿ ಪಾತ್ರದಲ್ಲಿ ಕೆಲವು ದೃಶ್ಯಗಳಿಗಾಗಿ ಸುಮಾರು 25 ಕೆಜಿ ತೂಕದ ಲಂಬಾಣಿ ವೇಷಭೂಷಣಗಳನ್ನು ಧರಿಸಿದ್ದಾರೆ ಎಂದು ಶ್ರೀನಿ ಹೇಳುತ್ತಾರೆ, ಶುಭಾ ತ್ರಿಪಾತ್ರಗಳಲ್ಲಿ ತಮ್ಮ ಬಹುಮುಖತೆಯನ್ನು ಪ್ರದರ್ಶಿಸುತ್ತಾರೆ, ಪ್ರತಿ ಅವತಾರದಲ್ಲಿ ಅತ್ಯುತ್ತಮವಾಗಿ ಹೊರಹೊಮ್ಮುತ್ತಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಇವರ ಜೊತೆ ಪದ್ಮಜಾರಾವ್, ಜಗದೀಶ್ ಹಲ್ಕುಡೆ, ಶರಣಯ್ಯ, ಕಾಮಿಡಿ ಕಿಲಾಡಿ ಗೋವಿಂದೇಗೌಡ, ಸಂದೇಶ್ ಶೆಟ್ಟಿ, ನಿಶಾ ಹೆಗಡೆ, ಆಶಾರಾಣಿ, ಗುರುದೇವ ನಾಗಾರಾಜ, ಬೇಬಿ ಆಕಾಂಕ್ಷ, ಮೋಹನ್ ಮಾಸ್ಟರ್, ಕ್ಯಾಮರಾಮನ್ ಮುರಳೀಧರ್, ಎಡಿಟರ್ ವಿಜಯ್ ಎಂ. ಕುಮಾರ್, ಹಿನ್ನೆಲೆ ಸಂಗೀತ ನಿರ್ದೇಶಕ ತ್ಯಾಗರಾಜ್ ಎಂ. ಎಸ್, ನೀಡಿದ್ದಾರೆ.
ಕ್ರೈಂ ಥ್ರಿಲ್ಲರ್ ಹಾರರ್ ಕಥಾಹಂದರ ಒಳಗೊಂಡ ಅಂಬುಜ ಸಿನಿಮಾಗೆ ಕಾಶಿನಾಥ್ ಡಿ ಮಡಿವಾಳರ್ ಬಂಡವಾಳ ಹೂಡಿದ್ದಾರೆ. ಮೊದಲ ಬಾರಿಗೆ ನಿರ್ಮಾಣಕ್ಕಿಳಿದಿರುವ ಇವರು, ಚಿತ್ರಕ್ಕೆ ಕಥೆ, ಸಾಹಿತ್ಯ ಕೂಡ ಬರೆದಿದ್ದಾರೆ. ಶ್ರೀನಿ ಹನುಂಮತರಾಜು ಎರಡನೇ ಸಿನಿಮಾ ಇದಾಗಿದೆ. ಪ್ರಸನ್ನ ಕುಮಾರ್ ಎಂ ಎಸ್ ಸಂಗೀತ ನಿರ್ದೇಶನ ಮಾಡಿದ್ದು, ಲಾಲಿ ಹಾಡನ್ನು ನಿರ್ಮಾಪಕ ಕಾಶಿನಾಥ್ ಮಗಳು, ಆಕಾಂಕ್ಷ ಅದ್ಭುತವಾಗಿ ಹಾಡಿದ್ದಾರೆ. ಚಿತ್ರದ ಸಹ ನಿರ್ಮಾಣದಲ್ಲಿ ಲೋಕೇಶ್ ಭೈರವ, ಶಿವಪ್ರಕಾಶ್ ಕೈ ಜೋಡಿಸಿದ್ದಾರೆ. ಟ್ರೇಲರ್ ಮೂಲಕ ಗಮನ ಸೆಳೆಯುತ್ತಿರುವ ಅಂಬುಜ ಜುಲೈ 21ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


