ಸಿನಿಮಾ ಸುದ್ದಿ

ನಂದ ಕಿಶೋರ್ ನಿರ್ದೇಶನದ 'ವೃಷಭ' ಮಾಸಾಂತ್ಯಕ್ಕೆ ಚಿತ್ರೀಕರಣ ಆರಂಭ, ಬಹುಭಾಷಾ ತಾರೆಯರ ಸಮಾಗಮ!

ರನ್ನ, ಮುಕುಂದ ಮುರಾರಿ ಚಿತ್ರದ ನಿರ್ದೇಶಕ ನಂದ ಕಿಶೋರ್ ತಮ್ಮ ಮುಂದಿನ ಮಹತ್ವಾಕಾಂಕ್ಷೆಯ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರ ಸ್ಟಾರ್-ಸ್ಟಡ್ ಎಂಟರ್ಟೈನರ್ ಆಗುವ ಲಕ್ಷಣಗಳು ಗೋಚರಿಸುತ್ತಿವೆ.

ನಂದ ಕಿಶೋರ್ ನಿರ್ದೇಶನದ 'ವೃಷಭ' ಮಾಸಾಂತ್ಯಕ್ಕೆ ಚಿತ್ರೀಕರಣ ಆರಂಭ, ಬಹುಭಾಷಾ ತಾರೆಯರ ಸಮಾಗಮ!
ವೃಷಭ ಚಿತ್ರದ ನಾಯಕ ಮೋಹನ್ ಲಾಲ್, ನಂದಕಿಶೋರ್ ಮತ್ತಿತರರು
Published On :

ರನ್ನ, ಮುಕುಂದ ಮುರಾರಿ ಚಿತ್ರದ ನಿರ್ದೇಶಕ ನಂದ ಕಿಶೋರ್ ತಮ್ಮ ಮುಂದಿನ ಮಹತ್ವಾಕಾಂಕ್ಷೆಯ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರ ಸ್ಟಾರ್-ಸ್ಟಡ್ ಎಂಟರ್ಟೈನರ್ ಆಗುವ ಲಕ್ಷಣಗಳು ಗೋಚರಿಸುತ್ತಿವೆ.ಮೆಗಾಸ್ಟಾರ್ ಮೋಹನ್ ಲಾಲ್ ನಾಯಕರಾಗಿರುವ ಬಹು ನಿರೀಕ್ಷಿತ  ಈ ಚಿತ್ರವನ್ನು ಕನೆಕ್ಟ್ ಮೀಡಿಯಾ ಮತ್ತು ಎವಿಎಸ್ ಸ್ಟುಡಿಯೋಸ್ ಸಹಯೋಗದೊಂದಿಗೆ ಬಾಲಾಜಿ ಟೆಲಿಫಿಲ್ಮ್ಸ್‌ನ ಏಕ್ತಾ ಕಪೂರ್ ನಿರ್ಮಿಸುತ್ತಿದ್ದಾರೆ. 

ವೃಷಭ ಶಿವ ಅಥವಾ ನಂದಿಗೆ ಸಮಾನಾರ್ಥಕವಾಗಿದ್ದು, ತಂದೆ-ಮಗನ ಸಂಬಂಧದ ಜಟಿಲತೆಗಳ ಸುತ್ತ ಕಥೆ ಸಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಮೋಹನ್ ಲಾಲ್ ಜೊತೆಗೆ  ತೆಲುಗು ನಟ ರೋಷನ್ ಮೇಕಾ, ಮೆಗಾಸ್ಟಾರ್ ಮೋಹನ್ ಲಾಲ ಸಂಜಯ್ ಕಪೂರ್ ಅವರ ಪುತ್ರಿ ಶನಯಾ ಕಪೂರ್ ಕಾಣಿಸಿಕೊಳ್ಳಲಿದ್ದಾರೆ. ಕೆಜಿಎಫ್ ಖ್ಯಾತಿಯ ಗರುಡ ರಾಮ್ ಮತ್ತು ನಟ ರವಿಶಂಕರ್ ಕೂಡ ನಟಿಸುತ್ತಿದ್ದಾರೆ. 

ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಮತ್ತು ಕ್ರಿಶ್ ಮತ್ತು ಕುಚ್ ಕುಚ್ ಹೋತಾ ಹೈ ಖ್ಯಾತಿಯ ಸಂತೋಷ್ ತುಂಡಿಲ್ ಅವರ ಛಾಯಾಗ್ರಹಣವಿದೆ. ಚಿತ್ರಕ್ಕೆ ಮೋಹನ್ ಬಿ ಕೆರೆ ಕಲಾ ನಿರ್ದೇಶನವಿದ್ದು, ಕೆ ಎಂ ಪ್ರಕಾಶ್ ಸಂಕಲನವಿದೆ.

ಸಿನಿ ಎಕ್ಸ್ ಪ್ರೆಸ್ ಸಂದರ್ಶನದಲ್ಲಿ ಮಾತನಾಡಿದ ನಂದ ಕಿಶೋರ್, ಕಳೆದ ಐದು ವರ್ಷಗಳಿಂದ ವೃಷಭದಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು. ಮೋಹನ್‌ಲಾಲ್ ಮತ್ತಿತರ ಪ್ರತಿಭಾವಂತರೊಂದಿಗೆ ಚಿತ್ರ ಮಾಡಬೇಕೆಂಬ ಕನಸು ನನಸಾಗಿದೆ ಎಂದು ಹೇಳಿದರು. ಚಿತ್ರ ತಯಾರಿಯ ಅಂತಿಮ ಹಂತ ಪ್ರವೇಶಿಸುತ್ತಿದ್ದಂತೆ, ಈ ದೊಡ್ಡ-ಬಜೆಟ್ ಮಲ್ಟಿಸ್ಟಾರರ್ ಚಿತ್ರದಲ್ಲಿ ಮತಷ್ಟು ಮಂದಿ ಅಭಿನಯಿಸುವ ಸಾಧ್ಯತೆಯಿದೆ. ಈ ತಿಂಗಳ ಅಂತ್ಯದ ವೇಳೆಗೆ ಚಿತ್ರೀಕರಣ ಆರಂಭಿಸಲು ನಿರ್ದೇಶಕರು ಯೋಜಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.