ಸಿನಿಮಾ ಸುದ್ದಿ

ಪುಷ್ಪ -2 ಸಿನಿಮಾದಿಂದ ರಶ್ಮಿಕಾ ಮಂದಣ್ಣ ಔಟ್: ಈ ಬಗ್ಗೆ 'ಕಿರಿಕ್' ಬೆಡಗಿ ಹೇಳಿದ್ದೇನು?

ಇಂಡಿಯಾ ಟುಡೇ ಜೊತೆ ಮಾತಾನಾಡಿರುವ ಅವರು ʼಮುಂದಿನ ತಿಂಗಳು ಶೂಟಿಂಗ್‌ ನಲ್ಲಿ ಭಾಗಿಯಾಗಲಿದ್ದೇನೆ. ಪುಷ್ಪ-2 ನಲ್ಲಿ ಏನೆಲ್ಲಾ ಇದೆ ಎನ್ನುವುದನ್ನು ನೋಡಲು ತುಂಬಾ ಉತ್ಸುಕಳಾಗಿದ್ದೇನೆ ಎಂದಿದ್ದಾರೆ.

ಪುಷ್ಪ -2 ಸಿನಿಮಾದಿಂದ ರಶ್ಮಿಕಾ ಮಂದಣ್ಣ ಔಟ್: ಈ ಬಗ್ಗೆ 'ಕಿರಿಕ್' ಬೆಡಗಿ ಹೇಳಿದ್ದೇನು?
ರಶ್ನಿಕಾ ಮಂದಣ್ಣ
Published On :

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ವರ್ಷದ ಆರಂಭದಲ್ಲೇ 'ವಾರಿಸುʼ ಮೂಲಕ ಬ್ರೇಕ್‌ ಪಡೆದುಕೊಂಡಿದ್ದಾರೆ. ಸದ್ಯ ಸಿದ್ದಾರ್ಥ್‌ ಮಲ್ಹೋತ್ರ ಅವರೊಂದಿಗೆ ನಟಿಸಿರುವ ' ಮಿಷನ್‌ ಮಜ್ನುʼ ಸಿನಿಮಾದ ಪ್ರಚಾರದಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ.

ಜ.20 ರಂದು ನೆಟ್‌ ಫ್ಲಿಕ್ಸ್‌ ನಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದೆ. ಟಾಲಿವುಡ್‌ ನ ಸ್ಟೈಲಿಸ್ಟ್‌ ಸ್ಟಾರ್‌ ಅಲ್ಲು ಅರ್ಜುನ್‌ ಅವರ ಪುಷ್ಪ ಪಾರ್ಟ್‌ -1 ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ದೊಡ್ಡ ಹಿಟ್‌ ಆಗಿತ್ತು. ಶ್ರೀವಲ್ಲಿಯಾಗಿ ರಶ್ಮಿಕಾ ಪ್ರೇಕ್ಷಕರ ಮನ ಗೆದ್ದಿದ್ದರು. ಸುಕುಮಾರ್‌ ಅವರ ʼಪುಷ್ಪ-2ʼ ಸಿನಿಮಾ ಬಹು ನಿರೀಕ್ಷೆಯನ್ನು ಹುಟ್ಟಿಸಿದೆ.

ಈಗಾಗಲೇ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಇತ್ತೀಚೆಗೆ ಪುಷ್ಪ ಸೀಕ್ವೆಲ್‌  ನಿಂದ ರಶ್ಮಿಕಾ ಮಂದಣ್ಣ ಅವರನ್ನು ತೆಗೆದಯ ಹಾಕಲಾಗಿದೆ ಎನ್ನುವ ಸುದ್ದಿ ಹೊರಬಿದ್ದಿತ್ತು. ಸಾಯಿ ಪಲ್ಲವಿ ರಶ್ಮಿಕಾ ಜಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವದಂತಿ ಹಬ್ಬಿತ್ತು.

ಆದರೆ ಈ ಎಲ್ಲದಕ್ಕೂ ರಶ್ಮಿಕಾ ಅವರು ಒಂದೇ ಮಾತಿನಲ್ಲಿ ಉತ್ತರಿಸಿದ್ದಾರೆ. ಇಂಡಿಯಾ ಟುಡೇ  ಜೊತೆ ಮಾತಾನಾಡಿರುವ ಅವರು ʼಮುಂದಿನ ತಿಂಗಳು ಶೂಟಿಂಗ್‌ ನಲ್ಲಿ ಭಾಗಿಯಾಗಲಿದ್ದೇನೆ. ಪುಷ್ಪ-2 ನಲ್ಲಿ ಏನೆಲ್ಲಾ ಇದೆ ಎನ್ನುವುದನ್ನು ನೋಡಲು ತುಂಬಾ ಉತ್ಸುಕಳಾಗಿದ್ದೇನೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.