ಸಿನಿಮಾ ಸುದ್ದಿ

ಶಿವಣ್ಣ ಅಭಿನಯದ 'ಘೋಸ್ಟ್' ಚಿತ್ರದ ಆಡಿಯೋ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟ!

ಡಾ. ಶಿವರಾಜಕುಮಾರ್ ಅಭಿನಯದ ಘೋಸ್ಟ್ ಚಿತ್ರದ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಪಡೆದುಕೊಂಡಿದೆ.

ಶಿವಣ್ಣ ಅಭಿನಯದ 'ಘೋಸ್ಟ್' ಚಿತ್ರದ ಆಡಿಯೋ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟ!
ಶಿವಣ್ಣ-ಜಯರಾಮ್
Published On :

ಡಾ. ಶಿವರಾಜಕುಮಾರ್ ಅಭಿನಯದ ಘೋಸ್ಟ್ ಚಿತ್ರದ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಪಡೆದುಕೊಂಡಿದೆ. 

ಶ್ರೀನಿ ನಿರ್ದೇಶನದ ಘೋಸ್ಟ್ ಸಂದೇಶ್ ಪ್ರೊಡಕ್ಷನ್‌ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಇನ್ನು ಆಡಿಯೊ ಹಕ್ಕುಗಳನ್ನು 'ಅಸಾಧಾರಣ' ಬೆಲೆಗೆ ಮಾರಾಟ ಮಾಡಲಾಗಿದೆ ಎಂದು ನಿರ್ಮಾಪಕರು ಬಹಿರಂಗಪಡಿಸಿದ್ದಾರೆ.

ಚಲನಚಿತ್ರವು ಮೋಷನ್ ಪೋಸ್ಟರ್‌ ಸಾಕಷ್ಟು ಕ್ರೇಜ್ ಹುಟ್ಟು ಹಾಕಿದೆ. VFX ಅನ್ನು ಟೆಹ್ರಾನ್ ಮೂಲದ ಕಂಪನಿ ASOO ಸೃಷ್ಟಿಸಿದೆ. ಇದನ್ನು ಭಾರತೀಯ ಗ್ರಾಫಿಕ್ ಕಲಾವಿದರಾದ ಮೋನಿಶ್ ಮತ್ತು ರುದ್ರೇಶ್ ಒಲಮಾಟಾ ಜೊತೆಗೆ ಮಾಡಲಾಗಿದೆ. 'ವಾಸ್ತವವಾಗಿ, ಈ ಮೋಷನ್ ಪೋಸ್ಟರ್ ಆಡಿಯೋ ಲೇಬಲ್‌ನ ಗಮನವನ್ನು ಸೆಳೆದಿದೆ ಎಂದು ನಿರ್ದೇಶಕ ಶ್ರೀನಿ ಹೇಳುತ್ತಾರೆ.

Story image

ಈ ಚಿತ್ರದ ಮೂಲಕ ಖ್ಯಾತ ನಟ ಜಯರಾಮ್ ಅವರು ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಲು ನಿರ್ದೇಶಿಕರು ಯೋಜಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ಘೋಸ್ಟ್ ಚಿತ್ರಕ್ಕೆ ಟಗರು ಡಿಒಪಿ ಮಹೇಂದ್ರ ಸಿಂಹ ಅವರ ಛಾಯಾಗ್ರಹಣವಿದೆ.

ಕೊನೆಯದಾಗಿ ವೇದದಲ್ಲಿ ಕಾಣಿಸಿಕೊಂಡಿದ್ದ ಶಿವಣ್ಣ, ಯೋಗರಾಜ್ ಭಟ್-ರಾಕ್‌ಲೈನ್ ವೆಂಕಟೇಶ್ ಅವರ ಕರಟಕ ಧಮಾನಕ ಚಿತ್ರದ ಚಿತ್ರೀಕರಣದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.