ಸಿನಿಮಾ ಸುದ್ದಿ

ಸಮಂತಾ ಅಭಿನಯದ 'ಶಾಕುಂತಲಂ', ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್; ವಿಶ್ವದಾದ್ಯಂತ ರಿಲೀಸ್!

ನಟಿ ಸಮಂತಾ ರುತ್ ಪ್ರಭು ಅಭಿನಯದ ಬಹುನಿರೀಕ್ಷಿತ 'ಶಾಕುಂತಲಂ' ಸಿನಿಮಾ ವಿಶ್ವದಾದ್ಯಂತ ಫೆಬ್ರವರಿ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಸಮಂತಾ ಅಭಿನಯದ 'ಶಾಕುಂತಲಂ', ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್; ವಿಶ್ವದಾದ್ಯಂತ ರಿಲೀಸ್!
ಶಾಕುಂತಲಂ ಸಿನಿಮಾ ಪೋಸ್ಟರ್
Published On :

ಹೈದರಾಬಾದ್: ನಟಿ ಸಮಂತಾ ರುತ್ ಪ್ರಭು ಅಭಿನಯದ ಬಹುನಿರೀಕ್ಷಿತ 'ಶಾಕುಂತಲಂ' ಸಿನಿಮಾ ವಿಶ್ವದಾದ್ಯಂತ ಫೆಬ್ರವರಿ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ತೆಲುಗು ಸಿನಿಮಾವು ಈ ಹಿಂದೆ 2022ರ ನವೆಂಬರ್ 4ರಂದೇ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ, ವಿವಿಧ ಕಾರಣಗಳಿಗಾಗಿ ಬಿಡುಗಡೆಯು ವಿಳಂಬವಾಯಿತು. ಇದೀಗ ಪ್ರೇಕ್ಷಕರು ಸಿನಿಮಾವನ್ನು 3Dಯಲ್ಲಿ ವೀಕ್ಷಿಸಬಹುದಾಗಿದೆ.

ನಟಿ ಸಮಂತಾ, 'ಶಾಕುಂತಲಂ' ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಲು ಸೋಮವಾರ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, '2023ರ ಫೆಬ್ರವರಿ 17 ರಿಂದ  ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಎಪಿಕ್ ಲವ್ ಸ್ಟೋರಿಯಾದ ಶಾಕುಂತಲಂಗೆ ಸಾಕ್ಷಿಯಾಗಿರಿ! ಹಾಗೆಯೇ 3D ನಲ್ಲಿ ಬಿಡುಗಡೆಯಾಗಲಿದೆ' ಎಂದು ಅವರು ಬರೆದಿದ್ದಾರೆ.

ಕಾಳಿದಾಸನ ಮೆಚ್ಚುಗೆ ಪಡೆದ ಸಂಸ್ಕೃತ ನಾಟಕ 'ಅಭಿಜ್ಞಾನ ಶಾಕುಂತಲಂ' ಅನ್ನು ಆಧರಿಸಿದ, ಈ ಸಿನಿಮಾವನ್ನು ಪ್ರಶಸ್ತಿ ವಿಜೇತ ನಿರ್ದೇಶಕ ಗುಣಶೇಖರ್ (ರುದ್ರಮ್ಮದೇವಿ) ಬರೆದು ನಿರ್ದೇಶಿಸಿದ್ದಾರೆ.

'ಶಾಕುಂತಲಂ' ಸಿನಿಮಾ ಶಕುಂತಲಾ ಮತ್ತು ರಾಜ ದುಶ್ಯಂತ್ ಅವರ ಪ್ರೇಮಕಥೆಯ ಸುತ್ತ ಸುತ್ತುತ್ತದೆ. ಸಿನಿಮಾದಲ್ಲಿ ಸಮಂತಾ ಮತ್ತು 'ಸೂಫಿಯುಂ ಸುಜಾತಾಯುಂ' ಖ್ಯಾತಿಯ ದೇವ್ ಮೋಹನ್ ನಟಿಸಿದ್ದಾರೆ.

ಈ ಚಿತ್ರವನ್ನು ದಿಲ್ ರಾಜು ಅವರು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಮೂಲಕ ಗುಣಾ ಟೀಮ್‌ವರ್ಕ್ಸ್ ಸಹಯೋಗದೊಂದಿಗೆ ಪ್ರಸ್ತುತಪಡಿಸಿದ್ದು, ನೀಲಿಮಾ ಗುಣ ನಿರ್ಮಿಸಿದ್ದಾರೆ.

ಸಚಿನ್ ಖೇಡೇಕರ್, ಕಬೀರ್ ಬೇಡಿ, ಡಾ. ಎಂ ಮೋಹನ್ ಬಾಬು, ಪ್ರಕಾಶ್ ರಾಜ್, ಮಧುಬಾಲಾ, ಗೌತಮಿ, ಅದಿತಿ ಬಾಲನ್, ಅನನ್ಯ ನಾಗಲ್ಲ ಮತ್ತು ಜಿಶು ಸೇನ್‌ಗುಪ್ತ ಸೇರಿದಂತೆ ಇತರರು ನಟಿಸಿದ್ದಾರೆ.

'ಶಾಕುಂತಲಂ' ಸಿನಿಮಾ ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲೂ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.