'ಘೋಸ್ಟ್' ಮೋಷನ್ ಪೋಸ್ಟರ್ ಬಿಡುಗಡೆ: ರೆಟ್ರೋ ಅವತಾರದಲ್ಲಿ ಕಾಣಿಸಿಕೊಂಡ ನಟ ಶಿವರಾಜ್‌ಕುಮಾರ್
ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ಶಿವರಾಜ್‌ಕುಮಾರ್ ಅವರ ಮೊದಲ ಪ್ಯಾನ್-ಇಂಡಿಯಾ ಚಿತ್ರ 'ಘೋಸ್ಟ್' ಸ್ಫೋಟಕ ಆ್ಯಕ್ಷನ್ ಸಿನಿಮಾವಾಗಿ ರೂಪುಗೊಳ್ಳುತ್ತಿದೆ. ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾವನ್ನು 'ಬೀರ್‌ಬಲ್' ನಂತಹ ಬ್ಲಾಕ್ ಬಸ್ಟರ್ ಚಿತ್ರಗಳ ಮೂಲಕ ತಮ್ಮದೇ ಆದ ಕೀರ್ತಿಯನ್ನು ಗಳಿಸಿರುವ ಶ್ರೀನಿ ನಿರ್ದೇಶಿಸುತ್ತಿದ್ದಾರೆ.

ಬೆಂಗಳೂರು: ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ಶಿವರಾಜ್‌ಕುಮಾರ್ ಅವರ ಮೊದಲ ಪ್ಯಾನ್-ಇಂಡಿಯಾ ಚಿತ್ರ 'ಘೋಸ್ಟ್' ಸ್ಫೋಟಕ ಆ್ಯಕ್ಷನ್ ಸಿನಿಮಾವಾಗಿ ರೂಪುಗೊಳ್ಳುತ್ತಿದೆ. ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾವನ್ನು 'ಬೀರ್‌ಬಲ್' ನಂತಹ ಬ್ಲಾಕ್ ಬಸ್ಟರ್ ಚಿತ್ರಗಳ ಮೂಲಕ ತಮ್ಮದೇ ಆದ ಕೀರ್ತಿಯನ್ನು ಗಳಿಸಿರುವ ಶ್ರೀನಿ ನಿರ್ದೇಶಿಸುತ್ತಿದ್ದಾರೆ.
ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಮೋಷನ್ ಪೋಸ್ಟರ್ ಅನ್ನು ಹೊಸ ವರ್ಷದ ಮುನ್ನಾದಿನ ಚಿತ್ರತಂಡ ಅನಾವರಣಗೊಳಿಸಿದೆ.

ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಪ್ರಭಾವಶಾಲಿ ಸಾಹಿತ್ಯದಿಂದ ಮಿಡಿಯುವ ಹಿನ್ನೆಲೆಯಲ್ಲಿ ಪೂರಕವಾದ ತಂಪಾದ ಅನಿಮೇಷನ್ ಅನ್ನು ಮೋಷನ್ ಪೋಸ್ಟರ್ ಒಳಗೊಂಡಿದೆ. ಅಂತಿಮವಾಗಿ, ಶಿವಣ್ಣ ಅವರನ್ನು ಅವರ ವಿಂಟೇಜ್ ಅವತಾರದಲ್ಲಿ ಬಹಿರಂಗಪಡಿಸಲಾಗಿದೆ.
'ಘೋಸ್ಟ್' ಒಂದು ಆಕ್ಷನ್ ಹೀಸ್ಟ್ ಥ್ರಿಲ್ಲರ್ ಆಗಿದ್ದು, ಇದು ಇತ್ತೀಚೆಗೆ ತನ್ನ ಎರಡನೇ ಶೆಡ್ಯೂಲ್ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಮೈಸೂರಿನಲ್ಲಿ 6 ಕೋಟಿ ರೂಪಾಯಿ ಮೌಲ್ಯದ ಬೃಹತ್ ಜೈಲು ಒಳಾಂಗಣ ಸೆಟ್‌ನಲ್ಲಿ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. ಈ ಶೆಡ್ಯೂಲ್‌ನಲ್ಲಿ ಶಿವರಾಜಕುಮಾರ್, ಜಯರಾಮ್ ಮತ್ತು ಪ್ರಶಾಂತ್ ನಾರಾಯಣನ್ ಭಾಗವಹಿಸಿದ್ದರು.
ಮೂರನೇ ಶೆಡ್ಯೂಲ್ ಫೆಬ್ರುವರಿ ಮೊದಲ ವಾರದಿಂದ ಆರಂಭವಾಗಲಿದೆ. ಮೂರನೇ ಶೆಡ್ಯೂಲ್‌ನಲ್ಲಿ ಪರಿಚಯದ ಭಾಗಗಳು ಮತ್ತು ಕ್ಲೈಮ್ಯಾಕ್ಸ್ ಭಾಗಗಳನ್ನು ಚಿತ್ರೀಕರಿಸಲಾಗುತ್ತದೆ. ಈ ಸೀಕ್ವೆನ್ಸ್‌ಗಳಿಗಾಗಿ ಬೆಂಗಳೂರಿನಲ್ಲಿ ಅದ್ಧೂರಿ ಸೆಟ್ ಹಾಕಲಾಗುತ್ತಿದೆ.
ಡಾ. ಶಿವರಾಜಕುಮಾರ್ ಅಭಿನಯದ ಘೋಸ್ಟ್ ಚಿತ್ರದಲ್ಲಿ ಜಯರಾಮ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ, ಪ್ರಶಾಂತ್ ನಾರಾಯಣನ್, ಅಚ್ಯುತ್ ಕುಮಾರ್, ದತ್ತಣ್ಣ ಮತ್ತು ಅವಿನಾಶ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ನಿರ್ದೇಶಕ ಶ್ರೀನಿ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಮಾಸ್ತಿ ಹಾಗೂ ಪ್ರಸನ್ನ ಅವರದು. ಕೆಜಿಎಫ್ ಖ್ಯಾತಿಯ ಶಿವಕುಮಾರ್ ಅವರ ಕಲಾಕೃತಿ ಮತ್ತು ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಟಾಪ್ ಪ್ರೊಡಕ್ಷನ್ ಹೌಸ್ ಸಂದೇಶ್ ಪ್ರೊಡಕ್ಷನ್ಸ್ ನಿರ್ಮಿಸಿರುವ 'ಘೋಸ್ಟ್' ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


