ನನಗೆ ಸಿಗುವ ಎಲ್ಲಾ ಪಾತ್ರಗಳನ್ನು ಖುಷಿಯಿಂದ ಮಾಡುತ್ತೇನೆ: ಪಾವನಾ ಗೌಡ
ಪಾವನಾ ಗೌಡ ಅವರ ಸಿನಿಮಾದ ಪಟ್ಟಿ ನೋಡಿದರೆ, ಆಕೆ ಸಾಂಪ್ರದಾಯಿಕ ನಾಯಕ ನಟಿಯಂತೆ ತೋರುವುದಿಲ್ಲ. ಆಕೆಯ ಪಾತ್ರ ಸಿನಿಮಾದ ಮೌಲ್ಯ ಹೆಚ್ಚಿಸುವ ವಿಷಯದಲ್ಲಿ ಪಾವನಾ ಗೌಡ ಬಹಳ ವಿಶೇಷ ಗಮನ ನೀಡುತ್ತಾರೆ.

ಪಾವನಾ ಗೌಡ ಅವರ ಸಿನಿಮಾದ ಪಟ್ಟಿ ನೋಡಿದರೆ, ಆಕೆ ಸಾಂಪ್ರದಾಯಿಕ ನಾಯಕ ನಟಿಯಂತೆ ತೋರುವುದಿಲ್ಲ. ಆಕೆಯ ಪಾತ್ರ ಸಿನಿಮಾದ ಮೌಲ್ಯ ಹೆಚ್ಚಿಸುವ ವಿಷಯದಲ್ಲಿ ಪಾವನಾ ಗೌಡ ಬಹಳ ವಿಶೇಷ ಗಮನ ನೀಡುತ್ತಾರೆ.
ತೂತು ಮಡಿಕೆ ಸಿನಿಮಾದ ನಟಿಯ ಮುಂದಿನ ಸಿನಿಮಾ ಗೌಳಿ ಆಗಿದ್ದು, ಶ್ರೀನಗರ ಕಿಟ್ಟಿ ನಾಯಕನಟನಾಗಿ ಅಭಿನಯಿಸಿದ್ದಾರೆ.
ಚೊಚ್ಚಲ ನಿರ್ದೇಶನ ಮಾಡುತ್ತಿರುವ ಸೂರ ಅವರ ಬಲವಾದ ನಿರೂಪಣೆಯನ್ನು ಕೇಳಿದ ನಂತರ ಪಾವನಾ ಗೌಳಿ ಚಿತ್ರದಲ್ಲಿ ನಟಿಸಲು ನಿರ್ಧರಿಸಿದರು.
ಗೌಳಿ ಸೂರ ಅವರ ಮೊದಲ ನಿರ್ದೇಶನದ ಸಿನಿಮಾ ಆಗಿರಬಹುದು ಆದರೆ ಅವರು ಸಿನಿಮಾವನ್ನು ಅರ್ಥ ಮಾಡಿಕೊಂಡಿದ್ದಾರೆ. ಸೂರ ಎಂದಿಗೂ ಸ್ಕ್ರಿಪ್ಟ್ನ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತಿದ್ದರು ಹಾಗೂ ಚಿತ್ರಕಥೆಯನ್ನು ಹೇಗೆ ಉನ್ನತೀಕರಿಸಬಹುದು ಎಂಬ ಬಗ್ಗೆ ಮಾತನಾಡುತ್ತಿದ್ದರು. ಅವರು ಚಿತ್ರಕಥೆ ಹೇಳುತ್ತಿದ್ದಾಗ, ಅದು ನಿಜ ಜೀವನದ ಕಥೆ ಎಂದು ಹೇಳಿದ್ದರು. ಗೌಳಿ ಸಮುದಾಯದೊಂದಿಗೆ ನಿಕಟ ಸಂಪರ್ಕ ಹೊಂದಿರುವುದರಿಂದ ಚಲನಚಿತ್ರ ಮತ್ತು ವಿವಿಧ ಪಾತ್ರಗಳ ಬಗ್ಗೆ ಅವರ ಚರ್ಚೆಯು ಬಲವಾದ ಅಂಶವಾಗಿತ್ತು. ಅವರ ಸ್ಕ್ರಿಪ್ಟ್ ಬಗ್ಗೆ ನನಗೆ ವಿಶ್ವಾಸವಿತ್ತು ಎನ್ನುತ್ತಾರೆ ಪಾವನ.
ಸಿನಿಮಾಗೆ ನಿರ್ದೇಶಕರು ನೈಜವಾದ ವಿಧಾನವನ್ನು ಅನುಸರಿಸಿದ್ದಾರೆ ಹಾಗೂ ಕೆಲವೊಂದು ನೈಜ ಘಟನೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಗೌಳಿಯ ಸೌಂದರ್ಯ ಅದರ ಗಾಢತೆಯಲ್ಲಿ ಅಡಗಿದೆ, ಪ್ರತಿಯೊಬ್ಬ ನಟನೂ ಅದನ್ನು ಮುನ್ನೆಲೆಗೆ ತಂದಿದ್ದಾರೆ ಎನ್ನುತ್ತಾರೆ ಪಾವನ.

ತನಗೆ ಸಿಗುವ ಪಾತ್ರಗಳನ್ನು ಹಾಗೂ ಅದರ ತಯಾರಿಯನ್ನು ಸಂಭ್ರಮಿಸುವುದಕ್ಕೆ ಇಷ್ಟಪಡುವುದಾಗಿ ಹೇಳುವ ಪಾವನಾ ಗೌಳಿ ಸಿನಿಮಾದಲ್ಲಿ ನಾಯಕ ಕಿಟ್ಟಿ ಅವರ ಪತ್ನಿ ಗಿರಿಜಾ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ.
ಇಡೀ ಚಿತ್ರಕಥೆಯನ್ನು ಗೌಳಿ ಹಾಗೂ ಆತನ ಪತ್ನಿ ಹಾಗೂ ಮಗುವಿನ ಸುತ್ತ ಹೆಣೆಯಲಾಗಿದೆ. ಗಿರಿಜಾ ಬಹಳಷ್ಟು ಮಂದಿ ನಡುವೆ ವಿದ್ಯಾವಂತೆಯಾಗಿದ್ದು ಸಾಮಾಜಿಕ ಜವಾಬ್ದಾರಿ ಹೊಂದಿರುವ ಸ್ವತಂತ್ರ ಮಹಿಳೆಯಾಗಿದ್ದಾಳೆ, ನನ್ನ ಪಾತ್ರ ಗೃಹಿಯನ್ನು ಪ್ರತಿನಿಧಿಸುತ್ತದೆ. ನೌಕರಿ ಮಾಡುವ ಮಹಿಳೆಯರಿಗೆ ಸಾಕಷ್ಟು ಕೀರ್ತಿ ಸಲ್ಲುತ್ತದೆಯಾದರೂ ಗೃಹಿಣಿಯರಿಗೆ ಸಮಾನವಾದ ಜವಾಬ್ದಾರಿಗಳೂ ಇರುತ್ತದೆ ಎನ್ನುತ್ತಾರೆ ಪಾವನ.
ನಿರ್ಮಾಪಕ ರಘು ಸಿಂಗಮ್ ಅವರ ಸೋಹನ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ನಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಶಶಾಂಕ್ ಶೇಷಗಿರಿ ಅವರ ಹಿನ್ನೆಲೆ ಸಂಗೀತವಿದೆ ಹಾಗೂ ಸಂದೀಪ್ ವಲ್ಲೂರಿ ಅವರ ಸಿನಿಮಾಟೋಗ್ರಫಿ ಇದೆ. ಶರತ್ ಲೋಹಿತಾಶ್ವ, ಗೋವಿಂದೇ ಗೌಡ, ಗೋಪಾಲಕೃಷ್ಣ ದೇಶಪಾಂಡೆ, ರಂಗಾಯಣ ರಘು, ನಮನ ಮುರೇದಾಯ, ರುದ್ರೇಶ್ ಸಿನಿಮಾದಲ್ಲಿ ಅಭಿನಯಿಸಿರುವ ಪ್ರಮುಖ ಕಲಾವಿದರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


