ಸಿನಿಮಾ ಸುದ್ದಿ

ದಿನಕರ್ ತೂಗುದೀಪ ನಿರ್ದೇಶನದ ವಿರಾಟ್ ಅಭಿನಯದ ಸಿನಿಮಾ ಟೈಟಲ್ 'ರಾಯಲ್'!

ನಿರ್ದೇಶಕ ದಿನಕರ್ ತೂಗುದೀಪ ಅವರ ಮುಂದಿನ ಸಿನಿಮಾದಲ್ಲಿ ವಿರಾಟ್ ಮತ್ತು ಸಂಜನಾ ಆನಂದ್ ನಟಿಸಿದ್ದಾರೆ. ಜಯಣ್ಣ ಫಿಲ್ಮ್ಸ್ ನಿರ್ಮಾಣದ ಚಿತ್ರಕ್ಕೆ ರಾಯಲ್ ಎಂದು ಹೆಸರಿಡಲಾಗಿದೆ.

ದಿನಕರ್ ತೂಗುದೀಪ ನಿರ್ದೇಶನದ ವಿರಾಟ್ ಅಭಿನಯದ ಸಿನಿಮಾ ಟೈಟಲ್ 'ರಾಯಲ್'!
ರಾಯಲ್ ಸಿನಿಮಾ ಸ್ಟಿಲ್
Published On :

ನಿರ್ದೇಶಕ ದಿನಕರ್ ತೂಗುದೀಪ ಅವರ ಮುಂದಿನ ಸಿನಿಮಾದಲ್ಲಿ ವಿರಾಟ್ ಮತ್ತು ಸಂಜನಾ ಆನಂದ್ ನಟಿಸಿದ್ದಾರೆ.  ಜಯಣ್ಣ ಫಿಲ್ಮ್ಸ್ ನಿರ್ಮಾಣದ ಚಿತ್ರಕ್ಕೆ ರಾಯಲ್ ಎಂದು ಹೆಸರಿಡಲಾಗಿದೆ.

ನಿರ್ಮಾಪಕರಾದ ವಿಜಯ್ ಕಿರಗಂದೂರು ಮತ್ತು ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಿನಿಮಾ ಟೈಟಲ್  ಬಿಡುಗಡೆ ಮಾಡಿದ್ದಾರೆ. ದಿನಕರ್‌ ನಿರ್ದೇಶನದ ಸಿನಿಮಾದ ಶೂಟಿಂಗ್ ಶೇ.80ರಷ್ಟು ಕಂಪ್ಲೀಟ್‌ ಮಾಡಿದ್ದಾರೆ.

ರಾಯಲ್‌ ಆಗಿ ಜೀವನ ಮಾಡಬೇಕು ಎಂಬುದು ಪ್ರತಿಯೊಬ್ಬರ ಕನಸು. ಅದರಂತೆ ಈ ಚಿತ್ರದ ನಾಯಕ ಹಾಗೆ ಜೀವನ ಮಾಡಬೇಕು ಎಂದು ಅಂದುಕೊಂಡಿರುತ್ತಾನೆ. ಇದೇ ಕಥೆಯಾಗಿದ್ದು, ಜನರಿಗೆ ಇಡೀ ಸಿನಿಮಾದಲ್ಲಿ ಎಂಟರ್‌ಟೇನ್‌ಮೆಂಟ್‌ ಸಿಗಲಿದೆ. ಎರಡೂವರೆ ಗಂಟೆ ನಮ್ಮನ್ನು ನಂಬಿ ಬಂದವರಿಗೆ ಮನರಂಜನೆ ನೀಡಲು ಈ ಚಿತ್ರ ಮಾಡುತ್ತಿದ್ದೇವೆ. ಈಗಾಗಲೇ ಪೋಸ್ಟರ್‌ ನೋಡಿದ ಹಲವರು ಇಷ್ಟಪಡುತ್ತಿದ್ದಾರೆ. ಸಿನಿಮಾವನ್ನು ಸಹ ಅವರೆಲ್ಲರೂ ಇಷ್ಟಪಡುವಂತೆ ಮಾಡುತ್ತಿದ್ದೇವೆ ಎಂಬ ನಂಬಿಕೆ ನನ್ನದು’ಎನ್ನುತ್ತಾರವರು.

"ನಾವು ಆಕರ್ಷಕ ಹೆಸರನ್ನು ಹುಡುಕುತ್ತಿದ್ದೆವು, ಪ್ರೇಕ್ಷಕರ ಮನಸ್ಸಿನಲ್ಲಿ ಸುಲಭವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ರಾಯಲ್ ನಮ್ಮ ಅಗತ್ಯಗಳಿಗೆ ಎಲ್ಲಾ ರೀತಿಯಲ್ಲಿ ಸರಿಹೊಂದುತ್ತದೆ. ಯೂತ್‌ಫುಲ್ ಕಮರ್ಷಿಯಲ್ ಎಂಟರ್‌ಟೈನರ್‌ನಲ್ಲಿ ಭಾವನೆಗಳು, ಹಾಸ್ಯ ಮತ್ತು ಆಕ್ಷನ್ ಕೂಡ ಇದೆ ಎಂದು ನಿರ್ದೇಶಕ ದಿನಕರ್ ತೂಗುದೀಪ್ ಹೇಳಿದ್ದಾರೆ.

ಉಳಿದ ಭಾಗದ ಶೂಟಿಂಗ್ ಏಪ್ರಿಲ್ ಒಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ನಾನು ಚಿತ್ರದ ಎಡಿಟಿಂಗ್ ಅನ್ನು ಪ್ರಾರಂಭಿಸಿದ್ದೇನೆ ಮತ್ತು ಏಪ್ರಿಲ್‌ನಲ್ಲಿ ಡಬ್ಬಿಂಗ್ ಪ್ರಾರಂಭಿಸುವ ಭರವಸೆ ಇದೆ. ಅದರ ನಂತರ ಉಳಿದ ಭಾಗಗಳನ್ನು ಪೂರ್ಣಗೊಳಿಸುತ್ತೇವೆ' ಎನ್ನುತ್ತಾರೆ ದಿನಕರ್.

ಸಂಜನಾ ಆನಂದ್ ನಾಯಕಿಯಾಗಿ ಕಾಣಿಸಿಕೊಂಡಿರುವ ಚಿತ್ರದಲ್ಲಿ ರಘು ಮುಖರ್ಜಿ, ಛಾಯಾ ಸಿಂಗ್, ಅಚ್ಯುತ್ ಕುಮಾರ್, ರಂಗಾಯಣ ರಘು, ಪ್ರಮೋದ್ ಶೆಟ್ಟಿ, ಲವ್ ಮಾಕ್‌ಟೇಲ್ ಖ್ಯಾತಿಯ ಅಭಿಲಾಷ್ ಮತ್ತು ಯೂಟ್ಯೂಬರ್ ಗೌರೋವ್ ಶೆಟ್ಟಿ ಸಹ ನಟಿಸಿದ್ದಾರೆ. ರಾಯಲ್ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದು, ಸಂಕೇತ್ ಮೈಸ್ ಅವರ ಛಾಯಾಗ್ರಹಣವಿದೆ.

ರಾಯಲ್‌ ಒಂದು ಪಕ್ಕಾ ಕಮರ್ಷಿಯಲ್‌ ಜಾನರ್‌ನ ಸಿನಿಮಾ. ಇಲ್ಲಿ ಎಲ್ಲವೂ ಹದವಾಗಿ ಬೆರೆತಿದೆ. ವಿರಾಟ್‌ ಅವರು ತುಂಬ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಒಂದೊಳ್ಳೆ ತಂಡ ಒಳಗೊಂಡ ಈ ಸಿನಿಮಾವನ್ನು ಜನ ಮೆಚ್ಚುತ್ತಾರೆ" ಎಂದಿದ್ದಾರೆ ನಿರ್ದೇಶಕ ದಿನಕರ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.