ಗ್ಯಾಂಗ್'ಸ್ಟರ್ ಡ್ರಾಮಾ 'ಮುಧೋಳ್'ನಲ್ಲಿ ವಿಕ್ರಮ್ ರವಿಚಂದ್ರನ್ ನಟನೆ
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ರವಿಚಂದ್ರನ್ ಅವರ ಎರಡನೇ ಚಿತ್ರಕ್ಕೆ 'ಮುಧೋಳ್' ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ರವಿಚಂದ್ರನ್ ಅವರ ಎರಡನೇ ಚಿತ್ರಕ್ಕೆ 'ಮುಧೋಳ್' ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ.
ಬೆಂಗಳೂರಿನ ನವರಂಗ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ನಡುವೆ ವಿಕ್ಕಿ ಹೊಸ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಯಿತು. ಇದರ ಜೊತೆಗೆ ಫಸ್ಟ್ ಲುಕ್'ನ್ನೂ ಬಿಡುಗಡೆ ಮಾಡಲಾಯಿತು.
ಚಿತ್ರ ತಂಡ ಈಗಾಗಲೇ 30 ದಿನಗಳ ಶೂಟಿಂಗ್'ನ್ನು ಪೂರ್ಣಗೊಳಿಸಿದ್ದು, ವಿಕ್ರಮ್ ರವಿಚಂದ್ರನ್ ಅವರು ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ಚಿತ್ರದ ಟೀಸರ್'ನ್ನು ಬಿಡುಗಡೆ ಮಾಡಲಾಗಿತ್ತು. ಟೀಸರ್ ನಲ್ಲಿ ವಿಕ್ರಮ್ ಕೈದಿಯಾಗಿ ಕಾಣಿಸಿಕೊಂಡಿದ್ದು, ಸಹ ಕೈದಿಗಳಿಗೆ ಊಟ ಸಿದ್ಧಪಡಿಸುತ್ತಿರುವ ಸಂದರ್ಭದಲ್ಲಿ ಗ್ಯಾಂಗ್ ವೊಂದು ಅವರ ಮೇಲೆ ದಾಳಿ ಮಾಡುತ್ತದೆ. ಈ ವೇಳೆ ನಾಯಿಯೊಂದು ವಿಕ್ರಮ್ ಅವರನ್ನು ರಕ್ಷಣೆ ಮಾಡುವುದು ಕಂಡು ಬಂದಿದೆ.
ಕರ್ನಾಟಕದಲ್ಲಿ ಮುಧೋಳ್ ಎಂಬ ಸ್ಥಳವಿದೆ. ನಾಯಿಯ ತಳಿ ಕೂಡ ಇದೆ. ನಮ್ಮ ಚಿತ್ರದಲ್ಲಿ ಮುದೋಳ ನಾಯಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ನಿರ್ದೇಶಕ ಕಾರ್ತಿಕ್ ರಾಜನ್ ಅವರು ಹೇಳಿದ್ದಾರೆ.
ಅಷ್ಟಕ್ಕೂ ಕ್ರೇಜಿಸ್ಟಾರ್ ಪುತ್ರನ ಚಿತ್ರಕ್ಕೆ ಮುಧೋಳ್ ಎಂಬ ಟೈಟಲ್ ಕೊಟ್ಟಿದ್ದೇ ವಿ. ರವಿಚಂದ್ರನ್ ಅವರಂತೆ. ಚಿತ್ರದ ಆಫರ್ ಬಂದಾಗ ವಿಕ್ರಮ್ ಅವರು ರವಿಚಂದ್ರನ್ ಅವರಿಗೆ ಚಿತ್ರದ ಕಥೆಯನ್ನು ಹೇಳಿದ್ದಾರೆ. ಈ ವೇಳೆ ಚಿತ್ರಕ್ಕೆ ರವಿಚಂದ್ರನ್ ಅವರು ಮುಧೋಳ್ ಎಂದು ಹೆಸರು ನೀಡಿದ್ದಾರೆಂದು ತಿಳಿದುಬಂದಿದೆ.
ಚಿತ್ರಕ್ಕೆ ರಕ್ಷಾ ಮತ್ತು ವಿಜಯ್ ಕುಮಾರ್ ಅವರು ನಿರ್ಮಾಪಕರಾಗಿದ್ದರೆ, ವಿಕ್ರಮ್ ರವಿಚಂದ್ರನ್ ಅವರ ಹೋಮ್ ಬ್ಯಾನರ್ ಈಶ್ವರಿ ಪ್ರೊಡಕ್ಷನ್ಸ್ ಚಿತ್ರವನ್ನು ಹೊರತರುತ್ತಿದೆ.
ಈ ನಡುವೆ ಚಿತ್ರದ ಮುಂದಿನ ಚಿತ್ರೀಕರಣವನ್ನು ಶಿವಮೊಗ್ಗ, ಮುಧೋಳ ಮತ್ತು ಬೆಂಗಳೂರಿನಲ್ಲಿ ನಡೆಸಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ನಿರ್ಮಾಪಕರು ಸಂಗೀತ ಸಂಯೋಜಕ ಯುವರಾಜ್ ಮತ್ತು ಸಂಕಲನಕಾರ ಪಿಕೆ ಅವರನ್ನು ಆಯ್ಕೆ ಮಾಡಿಕೊಂಡಿದ್ದರೆ, ಪಾತ್ರ ವರ್ಗ ಹಾಗೂ ಸಿಬ್ಬಂದಿಗಳ ಬಗ್ಗೆ ಚಿತ್ರತಂಡ ಮಾಹಿತಿಗಳನ್ನು ನೀಡಿಲ್ಲ.ಆದಾಗ್ಯೂ, ವಿಕ್ರಮ್ ರವಿಚಂದ್ರನ್ ಜೊತೆ ಸಂಜನಾ ಆನಂದ್ ನಾಯಕಿಯಾಗಿ ನಟಿಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


