ಥಿಯೇಟರ್, ಒಟಿಟಿಯಲ್ಲಿ ಕಾಂತಾರ ಹಾಡು 'ವರಾಹ ರೂಪಂ' ಬಳಸದಂತೆ ಕೋರ್ಟ್ ಆದೇಶ
ಕನ್ನಡದ ಆಕ್ಷನ್-ಥ್ರಿಲ್ಲರ್ ಕಾಂತಾರ ಚಿತ್ರದ ವಿವಾದಾತ್ಮಕ 'ವರಾಹ ರೂಪಂ' ಹಾಡನ್ನು ಚಿತ್ರಮಂದಿರ, ಒಟಿಟಿ ಮತ್ತು ಮತ್ತು ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಸುವುದನ್ನು ನಿರ್ಬಂಧಿಸಿ ಕೇರಳದ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ.

ತಿರುವನಂತಪುರಂ: ಕನ್ನಡದ ಆಕ್ಷನ್-ಥ್ರಿಲ್ಲರ್ ಕಾಂತಾರ ಚಿತ್ರದ ವಿವಾದಾತ್ಮಕ 'ವರಾಹ ರೂಪಂ' ಹಾಡನ್ನು ಚಿತ್ರಮಂದಿರ, ಒಟಿಟಿ ಮತ್ತು ಮತ್ತು ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಸುವುದನ್ನು ನಿರ್ಬಂಧಿಸಿ ಕೇರಳದ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದು ಮೇಲ್ನೋಟಕ್ಕೆ ಕೃತಿಚೌರ್ಯ ಕಾಯ್ದೆ ಉಲ್ಲಂಘನೆ ಎಂದು ನ್ಯಾಯಾಲಯ ಹೇಳಿದೆ.
ಕಳೆದ ವರ್ಷ ಬಿಡುಗಡೆಯಾದ ಸೂಪರ್ ಹಿಟ್ ಚಿತ್ರ ‘ಕಾಂತಾರ’ ಗೀತೆ ವರಾಹ ರೂಪವನ್ನು ‘ನವರಸಂ’ ಗೀತೆಯಿಂದ ನಕಲು ಮಾಡಿರುವುದಕ್ಕೆ ಆ ಹಾಡಿನ ಹಕ್ಕುಸ್ವಾಮ್ಯ ಹೊಂದಿರುವ ಜನಪ್ರಿಯ ಮ್ಯೂಸಿಕ್ ಬ್ಯಾಂಡ್, ಥೈಕುಡಮ್ ಬ್ರಿಡ್ಜ್ ಮತ್ತು ಮಾತೃಭೂಮಿ ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಕಂಪನಿ ಲಿಮಿಟೆಡ್‌ಗೆ ಬಾಕಿ ಕ್ರೆಡಿಟ್ ನೀಡುವಂತೆ ಪ್ರಥಮ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಕೆ.ಇ. ಕೆ ಇ ಸಾಲಿಹ್ ನಿರ್ದೇಶಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ 30 ರಂದು ಕಾಂತಾರ ಬಿಡುಗಡೆಯಾದ ಕೆಲ ದಿನಗಳಲ್ಲಿಯೇ ಕಾನೂನು ಹೋರಾಟ ಆರಂಭಿಸಲಾಗಿತ್ತು. ವೈಯಕ್ತಿಕ ಶೈಲಿ, ಗತಿ ಮತ್ತು ಮಧುರವನ್ನು ಉಳಿಸಿಕೊಂಡು ಭಾರತೀಯ ಶಾಸ್ತ್ರೀಯ ಜೊತೆ ರಾಕ್ ಸಂಗೀತದ ಸಮ್ಮಿಳನಕ್ಕಾಗಿ ಜನಪ್ರಿಯವಾಗಿರುವ ಥೈಕ್ಕುಡಮ್ ಬ್ರಿಡ್ಜ್‌ನ ನವರಸಂ (2015) ನಿಂದ ಸ್ಫೂರ್ತಿ ಪಡೆದಿರುವುದಾಗಿ ಟ್ರ್ಯಾಕ್‌ನ ಸಂಗೀತ ನಿರ್ದೇಶಕರು ಸ್ವತಃ ಒಪ್ಪಿಕೊಂಡಿರುವುದನ್ನು ಗುರುವಾರ ಪರಿಗಣಿಸಿದ ನ್ಯಾಯಾಲಯ, ಈ ಹಾಡನ್ನು ಥಿಯೇಟರ್ ಹಾಗೂ ಓಟಿಟಿಯಲ್ಲಿ ಬಳಸದಂತೆ ಮಧ್ಯಂತರ ಆದೇಶ ನೀಡಿತು.
ನವರಸಂ ಹಾಡನ್ನು ನಕಲು ಮಾಡುವ ಮೂಲಕ ಹಕ್ಕುಸ್ವಾಮ್ಯ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಕೃತಿಸ್ವಾಮ್ಯ ಕಾಯ್ದೆ 1957 (ಹಕ್ಕುಸ್ವಾಮ್ಯ ಉಲ್ಲಂಘನೆ) ಸೆಕ್ಷನ್ 64 ರ ಅಡಿಯಲ್ಲಿ ಕೃತಿಚೌರ್ಯ ಹಾಡಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳುವಂತೆ ಕಳೆದ ವಾರ ಕೋಝಿಕ್ಕೋಡ್ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಪೊಲೀಸರಿಗೆ ಸೂಚನೆ ನೀಡಿತ್ತು.
ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂದು ಆರೋಪಿಸಿ ಮಾತೃಭೂಮಿ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಪ್ರಕರಣದ ಪ್ರಗತಿ ವರದಿಯನ್ನು ಮೇ 4 ರೊಳಗೆ ನ್ಯಾಯಾಲಯಕ್ಕೆ ನೀಡುವಂತೆ ಕೋಝಿಕ್ಕೋಡ್ ನ್ಯಾಯಾಲಯ ತನಿಖಾಧಿಕಾರಿಗೆ ಸೂಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


