ಸಿನಿಮಾ ಸುದ್ದಿ

ಯುವ ರಾಜಕುಮಾರ್ ಅಭಿನಯದ 'ಯುವ' ಸಿನಿಮಾ ಚಿತ್ರೀಕರಣ ಏಪ್ರಿಲ್ 9ಕ್ಕೆ ಆರಂಭ

ಯುವ ರಾಜ್‌ಕುಮಾರ್ ಅಭಿನಯದ ಹೊಂಬಾಳೆ ಫಿಲಂಸ್‌ ಲಾಂಚ್ ಮಾಡುತ್ತಿರುವ ಯುವ ಸಿನಿಮಾ ಅದರ ಘೋಷಣೆಯ ಸಮಯದಿಂದಲೂ ಸಾಕಷ್ಟು ನಿರೀಕ್ಷೆ ಸೃಷ್ಟಿಸುತ್ತಿದೆ. ಮಾರ್ಚ್ 3 ರಂದು ಟೀಸರ್ ಜೊತೆಗೆ ಚಿತ್ರದ ಶೀರ್ಷಿಕೆಯನ್ನು ಘೋಷಿಸಲಾಯಿತು. ಚಿತ್ರತಂಡದ ಹತ್ತಿರದ ಮೂಲಗಳ ಪ್ರಕಾರ, ಚಿತ್ರತಂಡವು ಏಪ್ರಿಲ್ 9 ರಂದು ಚಿತ್ರೀಕರಣವನ್ನು ಕಿಕ್‌ಸ್ಟಾರ್ಟ್ ಮಾಡಲು ಸಿದ್ಧವಾಗಿದೆ.

ಯುವ ರಾಜಕುಮಾರ್ ಅಭಿನಯದ 'ಯುವ' ಸಿನಿಮಾ ಚಿತ್ರೀಕರಣ ಏಪ್ರಿಲ್ 9ಕ್ಕೆ ಆರಂಭ
ಯುವ ಚಿತ್ರದ ಮೊದಲ ಪೋಸ್ಟರ್
Published On :

ಯುವ ರಾಜ್‌ಕುಮಾರ್ ಅಭಿನಯದ ಹೊಂಬಾಳೆ ಫಿಲಂಸ್‌ ಲಾಂಚ್ ಮಾಡುತ್ತಿರುವ ಯುವ ಸಿನಿಮಾ ಅದರ ಘೋಷಣೆಯ ಸಮಯದಿಂದಲೂ ಸಾಕಷ್ಟು ನಿರೀಕ್ಷೆ ಸೃಷ್ಟಿಸುತ್ತಿದೆ. ಮಾರ್ಚ್ 3 ರಂದು ಟೀಸರ್ ಜೊತೆಗೆ ಚಿತ್ರದ ಶೀರ್ಷಿಕೆಯನ್ನು ಘೋಷಿಸಲಾಯಿತು. ಚಿತ್ರತಂಡದ ಹತ್ತಿರದ ಮೂಲಗಳ ಪ್ರಕಾರ, ಚಿತ್ರತಂಡವು ಏಪ್ರಿಲ್ 9 ರಂದು ಚಿತ್ರೀಕರಣವನ್ನು ಕಿಕ್‌ಸ್ಟಾರ್ಟ್ ಮಾಡಲು ಸಿದ್ಧವಾಗಿದೆ.

ಯೂತ್‌ಫುಲ್ ಕಮರ್ಷಿಯಲ್ ಎಂಟರ್‌ಟೈನರ್ ಅನ್ನು ಸಂತೋಷ್ ಆನಂದ್‌ರಾಮ್ (ಮಿ ಮತ್ತು ಮಿಸಸ್ ರಾಮಾಚಾರಿ, ರಾಜಕುಮಾರ ಮತ್ತು ಯುವರತ್ನ) ನಿರ್ದೇಶಿಸಿದ್ದಾರೆ ಮತ್ತು ಚಿತ್ರತಂಡ ಬೆಂಗಳೂರಿನಲ್ಲಿ ದೊಡ್ಡ ಸೆಟ್‌ನೊಂದಿಗೆ ಚಿತ್ರೀಕರಣ ಮಾಡಲು ಮುಂದಾಗಿದ್ದಾರೆ.

ಒಂದೊಳ್ಳೆ ಉತ್ತಮ ಆ್ಯಕ್ಷನ್ ಮುಂದಿದೆ ಎನ್ನುತ್ತಾರೆ ನಿರ್ದೇಶಕರು. ಸ್ಟಂಟ್ ಸೀಕ್ವೆನ್ಸ್‌ನೊಂದಿಗೆ ಚಿತ್ರೀಕರಣ ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಚಿತ್ರದಲ್ಲಿ ಯುವರಾಜಕುಮಾರ್‌ಗೆ ಜೋಡಿಯಾಗಿ ಕಾಂತಾರ ನಾಯಕಿ ಸಪ್ತಮಿ ಗೌಡ ಕಾಣಿಸಿಕೊಳ್ಳಲಿದ್ದಾರೆ. ಈ ಇಬ್ಬರನ್ನು ಹೊರತುಪಡಿಸಿ, ಉಳಿದ ಪಾತ್ರವರ್ಗವನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ.

ಈ ಹಿಂದೆ ಕೆಜಿಎಫ್ ಮತ್ತು ಕಾಂತಾರಂತಹ ಪ್ಯಾನ್-ಇಂಡಿಯಾ ಚಲನಚಿತ್ರಗಳನ್ನು ನಿರ್ಮಿಸಿದ್ದ ವಿಜಯ್ ಕಿರಗಂದೂರು ಈ ಯೋಜನೆಗೆ ಬಂಡವಾಳ ಹೂಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಶ್ರೀಶಾ ಕುದುವಳ್ಳಿ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.