ಸಿನಿಮಾ ಸುದ್ದಿ

ನೀಲಿ ಚಿತ್ರಗಳಲ್ಲಿ ನಟಿಸುತ್ತೀರಾ ಎಂದ ಯೂಟ್ಯೂಬರ್ ವಿರುದ್ಧ 'ಪೆಂಟಗನ್' ನಟಿ ತನಿಷಾ ಕುಪ್ಪಂಡ ದೂರು ದಾಖಲು

ಸಂದರ್ಶನದ ವೇಳೆ 'ಅಶ್ಲೀಲ ಚಿತ್ರಗಳಲ್ಲಿ ನಟಿಸುತ್ತೀರಾ' ಎಂದು ಕೇಳಿದ್ದಕ್ಕಾಗಿ ಯೂಟ್ಯೂಬರ್ ವಿರುದ್ಧ ನಟಿ ತನಿಷಾ ಕುಪ್ಪಂಡ ದೂರು ದಾಖಲಿಸಿದ್ದಾರೆ ಮತ್ತು ಅವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ನೀಲಿ ಚಿತ್ರಗಳಲ್ಲಿ ನಟಿಸುತ್ತೀರಾ ಎಂದ ಯೂಟ್ಯೂಬರ್ ವಿರುದ್ಧ 'ಪೆಂಟಗನ್' ನಟಿ ತನಿಷಾ ಕುಪ್ಪಂಡ ದೂರು ದಾಖಲು
ನಟಿ ತನಿಷಾ ಕುಪ್ಪಂಡ
Published On :

ಬೆಂಗಳೂರು: ಸಂದರ್ಶನದ ವೇಳೆ 'ಅಶ್ಲೀಲ ಚಿತ್ರಗಳಲ್ಲಿ ನಟಿಸುತ್ತೀರಾ' ಎಂದು ಕೇಳಿದ್ದಕ್ಕಾಗಿ ಯೂಟ್ಯೂಬರ್ ವಿರುದ್ಧ ನಟಿ ತನಿಷಾ ಕುಪ್ಪಂಡ ದೂರು ದಾಖಲಿಸಿದ್ದಾರೆ ಮತ್ತು ಅವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಯೂಟ್ಯೂಬರ್ ಅನ್ನು ಸುಶಾನ್ ಎಂದು ಗುರುತಿಸಲಾಗಿದೆ. ಅಂತಹ ಪ್ರಶ್ನೆಗಳನ್ನು ಕೇಳಲು ಸಂದರ್ಶಕರಿಗೆ ಸ್ವಾತಂತ್ರ್ಯವು ಪರವಾನಗಿ ನೀಡಿರುವುದಿಲ್ಲ ಎಂದು ನಟಿ ಹೇಳಿದ್ದಾರೆ.

'ನೀವು ನಗ್ನ ಚಿತ್ರಗಳಲ್ಲಿ ನಟಿಸುತ್ತೇನೆಯೇ ಎಂದು ಸುಶಾನ್ ನನ್ನನ್ನು ಕೇಳಿದರು. ಹೋರಾಟದಿಂದಲೇ ನನ್ನ ವೃತ್ತಿಯನ್ನು ಕಟ್ಟಿಕೊಂಡಿದ್ದೇನೆ. ನಾನು ಇಲ್ಲಿಯವರೆಗೆ ಸಣ್ಣ ಪಾತ್ರಗಳಲ್ಲಿ ನಟಿಸಿದ್ದೇನೆ ಮತ್ತು 'ಪೆಂಟಗನ್' ಕನ್ನಡ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ಪಡೆದುಕೊಂಡಿದ್ದೇನೆ' ಎಂದು ಅವರು ಹೇಳಿದರು.

ಸಂದರ್ಶನದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರೋಪಿಯು ಆಕೆಗೆ ಮುಜುಗರದ ಪ್ರಶ್ನೆಯನ್ನು ಕೇಳಿದ ನಂತರ ನಟಿ, ʻನೀಲಿ ಚಿತ್ರಗಳನ್ನು ಮಾಡುವುದು ಪೋರ್ನ್ ಸ್ಟಾರ್‌ಗಳು. ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಮಾತ್ರಕ್ಕೆ ನೀಲಿ ಚಿತ್ರ ಮಾಡಲಿಕ್ಕೆ ಆಗುತ್ತಾ?. ನಾನು ನೀಲಿ ಚಿತ್ರ ತಾರೆಯಲ್ಲ ಮತ್ತು ನೀವು ಇಂತಹ ಪ್ರಶ್ನೆಯನ್ನು ಏಕೆ ಕೇಳುತ್ತಿದ್ದೀರಿ. ಕನ್ನಡ ಚಿತ್ರರಂಗದಲ್ಲಿ ಯಾರು ನಗ್ನ ಚಿತ್ರಗಳನ್ನು ಮಾಡುತ್ತಿದ್ದಾರೆ?' ಎಂದು ನಟಿ ಆಕ್ರೋಶ ವ್ಯಕ್ತಪಡಿಸುತ್ತಾರೆ ಮತ್ತು ಸಂದರ್ಶನವನ್ನು ಕೊನೆಗೊಳಿಸುತ್ತಾರೆ.

ಜನಪ್ರಿಯ ಟಿವಿ ಧಾರಾವಾಹಿಯ ನಟಿ ಪೆಂಟಗನ್ ಚಿತ್ರದಲ್ಲಿ ನಟಿಸಿದ್ದು, ಚಿತ್ರತಂಡ ಆಕೆಯನ್ನು ಒಳಗೊಂಡ ಹಾಡನ್ನು ಬಿಡುಗಡೆ ಮಾಡಿದೆ. ಹಾಡಿನಲ್ಲಿ ನಟಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಸಿನಿ ಪ್ರೇಕ್ಷಕರಿಂದ ಸಾಕಷ್ಟು ಗಮನ ಸೆಳೆಯುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಆರೋಪಿ ಯೂಟ್ಯೂಬರ್ ತನಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡಿದ್ದಾನೆ ಎಂದೂ ಆಕೆ ಆರೋಪಿಸಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.