ಸಿನಿಮಾ ಸುದ್ದಿ

'ಲಕ್ಕಿ ಮ್ಯಾನ್' ವಿತರಣೆ ಹಕ್ಕು ಪಡೆದ 'ವಿಕ್ರಾಂತ್ ರೋಣ' ನಿರ್ಮಾಪಕ ಜಾಕ್ ಮಂಜುನಾಥ್!

ವಿಕ್ರಾಂತ್ ರೋಣ ಸಿನಿಮಾ ನಿರ್ಮಾಪಕ ಮಂಜುನಾಥ್ ಗೌಡ (ಜಾಕ್ ಮಂಜು) ಲಕ್ಕಿ ಮ್ಯಾನ್‌ನ ಕರ್ನಾಟಕ ವಿತರಣಾ ಹಕ್ಕನ್ನು ಪಡೆದಿದ್ದಾರೆ. ತಮಿಳು ಚಿತ್ರ ಓಹ್ ಮೈ ಕಡವುಲೆ ಸಿನಿಮಾ ಸ್ಫೂರ್ತಿಯಿಂದ ಲಕ್ಕಿ ಮ್ಯಾನ್ ತಯಾರಿಸಲಾಗಿದೆ.

'ಲಕ್ಕಿ ಮ್ಯಾನ್' ವಿತರಣೆ ಹಕ್ಕು ಪಡೆದ 'ವಿಕ್ರಾಂತ್ ರೋಣ' ನಿರ್ಮಾಪಕ ಜಾಕ್ ಮಂಜುನಾಥ್!
ಲಕ್ಕಿ ಮ್ಯಾನ್ ಸ್ಟಿಲ್
Published On :

ನಾಗೇಂದ್ರ ಪ್ರಸಾದ್ ನಿರ್ದೇಶನದ ಲಕ್ಕಿ ಮ್ಯಾನ್ ಸೆಪ್ಟೆಂಬರ್ 9 ರಂದು ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಿದೆ.

ವಿಕ್ರಾಂತ್ ರೋಣ ಸಿನಿಮಾ ನಿರ್ಮಾಪಕ  ಮಂಜುನಾಥ್ ಗೌಡ (ಜಾಕ್ ಮಂಜು) ಲಕ್ಕಿ ಮ್ಯಾನ್‌ನ ಕರ್ನಾಟಕ ವಿತರಣಾ ಹಕ್ಕನ್ನು ಪಡೆದಿದ್ದಾರೆ. ತಮಿಳು ಚಿತ್ರ ಓಹ್ ಮೈ ಕಡವುಲೆ ಸಿನಿಮಾ ಸ್ಫೂರ್ತಿಯಿಂದ ಲಕ್ಕಿ ಮ್ಯಾನ್ ತಯಾರಿಸಲಾಗಿದೆ. ಲವ್ ಮಾಕ್‌ಟೇಲ್ ಹೀರೋ ಕೃಷ್ಣ ನಾಯಕನಾಗಿ ನಟಿಸಿದ್ದಾರೆ.

ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದೇವರ ಪಾತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಭುದೇವ ಕೂಡ ನಟಿಸಿದ್ದಾರೆ. ಪ್ರಭುದೇವ ಮತ್ತು ಪುನೀತ್ ಮೊದಲ ಬಾರಿಗೆ ಡ್ಯಾನ್ಸ್  ಸೀನ್ ನಲ್ಲಿ ಸ್ಕ್ರೀನ್  ಹಂಚಿಕೊಂಡಿದ್ದಾರೆಇದು ಲಕ್ಕಿ ಮ್ಯಾನ್‌ನ ಹೈಲೈಟ್‌ಗಳಲ್ಲಿ ಒಂದಾಗಿದೆ.

ಸಂಗೀತಾ ಶೃಂಗೇರಿ ಮತ್ತು ರೋಶನಿ ಪ್ರಕಾಶ್ ನಟಿಸಿರುವ ಈ ಚಿತ್ರವನ್ನು ಪಾರ್ಸಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪಿಆರ್ ಮೀನಾಕ್ಷಿ ಸುಂದರಂ ಮತ್ತು ಆರ್ ಸುಂದರ ಕಾಮರಾಜ್ ನಿರ್ಮಿಸಿದ್ದಾರೆ. ಲಕ್ಕಿ ಮ್ಯಾನ್‌ ಸಿನಿಮಾಗೆ ವಿ2 ವಿಜಯ್ ಮತ್ತು ವಿಕ್ಕಿ  ಸಂಗೀತ ಸಂಯೋಜಿಸಿದ್ದಾರೆ,  ಜೀವ ಶಂಕರ್ ಛಾಯಾಗ್ರಹಣ ಮತ್ತು ಜೆವಿ ಮಣಿಕಂದ ಬಾಲಾಜಿ  ಸಂಕಲನ ನಿರ್ವಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.