ಶಿವರಾಜ್ ಕುಮಾರ್ 'ಘೋಸ್ಟ್' ಸಿನಿಮಾದಲ್ಲಿ ತೆಲುಗು ನಟ ಜಯರಾಮ್!
ಸ್ಯಾಂಡಲ್ ವುಡ್ ನಲ್ಲಿ ಸದ್ಯ ಶಿವರಾಜ್ ಕುಮಾರ್ ತುಂಬಾ ಬ್ಯುಸಿಯೆಸ್ಟ್ ನಟ. ಶಿವಣ್ಣ ನಟನೆಯ 125ನೇ ಸಿನಿಮಾ ವೇದ ಚಿತ್ರ ಕೊನೆಯ ಹಂತದಲ್ಲಿದೆ.

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಶಿವರಾಜ್ ಕುಮಾರ್ ತುಂಬಾ ಬ್ಯುಸಿಯೆಸ್ಟ್ ನಟ. ಶಿವಣ್ಣ ನಟನೆಯ 125ನೇ ಸಿನಿಮಾ ವೇದ ಚಿತ್ರ ಕೊನೆಯ ಹಂತದಲ್ಲಿದೆ.
ಇದರ ಜೊತೆಗೆ ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ನಿರ್ಮಾಣ ವಾಗುತ್ತಿರುವ ಯೋಗರಾಜ್ ಭಟ್ ನಿರ್ದೇಶನದ ಕರಟಕ-ದಮನಕ ಶೂಟಿಂಗ್ ಕೂಡ ಶೆಡ್ಯೂಲ್ ಆಗಿದೆ.
ಇವುಗಳ ನಡುವೆ ಶಿವಣ್ಣ, ಸಂದೇಶ್ ಪ್ರೊಡಕ್ಷನ್ ನಲ್ಲಿ ಬರುತ್ತಿರುವ ಘೋಸ್ಟ್ ಸಿನಿಮಾಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಚಿತ್ರ ತಂಡ ಕಲಾವಿದರ ಆಯ್ಕೆ ಪೈನಲ್ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಲು ದಕ್ಷಿಣ ಭಾರತದ ಟಾಪ್ ನಟರಲ್ಲಿ ಒಬ್ಬರಾದ ಜಯರಾಮ್ ಅವರನ್ನು ನಿರ್ಮಾಪಕರು ಸಂಪರ್ಕಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ನಿರ್ದೇಶಕರು ಈಗಾಗಲೇ ಜಯರಾಮ್ ಅವರನ್ನು ಸಂಪರ್ಕಿಸಿದ್ದು, ಘೋಸ್ಟ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಜಯರಾಮ್ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.
ಜಯರಾಮ್ ಪ್ರಸ್ತುತ ನಿರ್ದೇಶಕ ಶಂಕರ್-ರಾಮ್ ಚರಣ್ ಅವರ ಆರ್ಸಿ 15 ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಅವರೊಂದಿಗೆ ಮಹೇಶ್ ಬಾಬು ಅವರ ಚಿತ್ರ ಸೇರಿದಂತೆ ಒಂದೆರಡು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಈಗಾಗಲೇ ಘೋಸ್ಟ್ ಚಿತ್ರತಂಡ ಬಹುಭಾಷಾ ನಟ ಪ್ರಶಾಂತ್ ನಾರಾಯಣನ್ ಅವರನ್ನು ಕರೆತಂದಿದ್ದಾರೆ. ಇಂಗ್ಲಿಷ್, ಹಿಂದಿ, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಪ್ರಧಾನವಾಗಿ ಕೆಲಸ ಮಾಡಿದ ನಟ, ಘೋಸ್ಟ್ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಲಿದ್ದಾರೆ.
ಅಚ್ಯುತ್ ಕುಮಾರ್, ದತ್ತಣ್ಣ ಮತ್ತು ಅವಿನಾಶ್ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಪ್ರಾಜೆಕ್ಟ್ಗಾಗಿ ತಯಾರಿ ಕಾರ್ಯಗಳು ನಡೆಯುತ್ತಿದ್ದು, ಹೆಚ್ಎಂಟಿ ಕಾರ್ಖಾನೆ ಮತ್ತು ಮಿನರ್ವ ಮಿಲ್ಸ್ನಲ್ಲಿ ತಂಡವು ಬೃಹತ್ ಸೆಟಪ್ನೊಂದಿಗೆ ಬರುತ್ತಿದೆ, ಶೇಕಡ 60 ರಷ್ಟು ಚಿತ್ರೀಕರಣ ಇಲ್ಲಿಯೇ ನಡೆಯಲಿದೆ..
ಔಟ್ ಡೋರ್ ಶೂಟಿಂಗ್ ಮೈಸೂರಿನಲ್ಲಿ ನಡೆಯಲಿದೆ, ಘೋಸ್ಟ್ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. ಟಗರು ಡಿಒಪಿ ಮಹೇಂದ್ರ ಸಿಂಹ ಈ ಚಿತ್ರಕ್ಕೆ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ಏತನ್ಮಧ್ಯೆ ಅವನೇ ಶ್ರೀಮನ್ನಾರಾಯಣ ನಿರ್ದೇಶಕ ಸಚಿನ್ ಅವರೊಂದಿಗಿನ ಶಿವರಾಜಕುಮಾರ್ ಹೊಸ ಸಿನಿಮಾ 2023 ರಲ್ಲಿ ಪ್ರಾರಂಭವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


