'ಉಪ್ಪಿ' ಜನ್ಮದಿನಕ್ಕೆ ಕಬ್ಜ ಟೀಸರ್ ಔಟ್; ಕೇಕ್ ಕಟ್ಟಿಂಗ್ ಇಲ್ಲ, ಫೋಟೋಗೆ ಮಾತ್ರ ಅವಕಾಶ ಎಂದ ರಿಯಲ್ ಸ್ಟಾರ್!
ನಾಳೆ ಅಂದರೆ ಭಾನುವಾರ (18-09-2022)ನಟ ಉಪೇಂದ್ರ ಅವರ ಬರ್ತ್ ಡೇ. ಅವರ ಹುಟ್ಟುಹಬ್ಬದ ಒಂದು ದಿನ ಮುಂಚೆಯೇ ಅವರ ಅಭಿಮಾನಿಗಳಿಗೆ ಕಜ್ಬ ಚಿತ್ರತಂಡ ಗಿಫ್ಟ್ ನೀಡಿದೆ.

ಬೆಂಗಳೂರು: ನಾಳೆ ಅಂದರೆ ಭಾನುವಾರ (18-09-2022)ನಟ ಉಪೇಂದ್ರ ಅವರ ಬರ್ತ್ ಡೇ. ಅವರ ಹುಟ್ಟುಹಬ್ಬದ ಒಂದು ದಿನ ಮುಂಚೆಯೇ ಅವರ ಅಭಿಮಾನಿಗಳಿಗೆ ಕಜ್ಬ ಚಿತ್ರತಂಡ ಗಿಫ್ಟ್ ನೀಡಿದೆ.
ನಟ ಉಪೇಂದ್ರ ಮತ್ತು ಸುದೀಪ್ ನಟನೆಯ ಕಬ್ಜ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನಲ್ಲಿ ಸುದೀಪ್ ಅವರ ಲುಕ್ ಕೂಡ ರಿವೀಲ್ ಆಗಿದೆ. ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತಿದೆ. ಆರ್ ಚಂದ್ರ ನಿರ್ದೇಶನದ ಸಿನಿಮಾದಲ್ಲಿ ಶ್ರೀಯಾ ಶರಣ್ ನಟಿಸಿದ್ದಾರೆ. ಸಿನಿಮಾ ಬಿಗ್ ಬಜೆಟ್ ನಲ್ಲಿ ನಿರ್ಮಾಣವಾಗಿದ್ದು ಟೀಸರ್ ನಲ್ಲಿ ಅದ್ಧೂರಿತನ ಕಾಣುತ್ತಿದೆ. ಕನ್ನಡದ ಜೊತೆಗೆ ತೆಲುಗು, ಮಲಯಾಳಂ, ತಮಿಳು ಹಾಗೂ ಹಿಂದಿ ವರ್ಷನ್ನ ಟೀಸರ್ ರಿಲೀಸ್ ಮಾಡಲಾಗಿದೆ.
ಕೇಕ್ ಕಟ್ಟಿಂಗ್ ಇಲ್ಲ, ಫೋಟೋಗೆ ಮಾತ್ರ ಅವಕಾಶ
ಇದೇ ವೇಳೆ ಜನ್ಮ ದಿನಾಚರಣೆ ಕುರಿತು ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ನಟ ಉಪೇಂದ್ರ ತಮ್ಮ ಅಭಿಮಾವಿಗಳ ಬಳಿ ವಿಶೇಷ ಮನವಿ ಮಾಡಿದ್ದಾರೆ. ಕೇಕ್ ಕಟ್ಟಿಂಗ್ ಬೇಡ.. ಫೋಟೋಗೆ ಮಾತ್ರ ಅವಕಾಶವಿರುತ್ತದೆ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ನಾಳೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಉಪೇಂದ್ರ ಅಭಿಮಾವಿಗಳ ಬಳಿ ವಿಶೇಷ ಮನವಿ ಮಾಡಿದ್ದಾರೆ. ಅಭಿಮಾನಿಗಳ ದಿನದಂದು ಕೇಕ್ ಕಟಿಂಗ್, ಹಾರ, ಬೊಕ್ಕೆ ಗಿಫ್ಟ್ ಇತ್ಯಾದಿಗಳಿಗೆ ಅವಕಾಶವಿರುವುದಿಲ್ಲ. ಫೋಟೋಗೆ ಮಾತ್ರ ಅವಕಾಶವಿರುತ್ತದೆ. ದಯವಿಟ್ಟು ಸಹಕರಿಸಿ ಎಂದು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


