ಶಿವಾಜಿ ಸುರತ್ಕಲ್-2: ದ್ವಿಪಾತ್ರದಲ್ಲಿ ರಮೇಶ್ ಅರವಿಂದ್? ಚಿರಯೌವನಿಗನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ
ಸೆಪ್ಟಂಬರ್ 10 ರಮೇಶ್ ಅರವಿಂದ್ ಅವರ ಜನ್ಮದಿನವಾಗಿದ್ದು, ಶಿವಾಜಿ ಸುರತ್ಕಲ್ 2 ರ ತಯಾರಕರು ಈ ಸಂದರ್ಭದಲ್ಲಿ ವಿಶೇಷ ಟೀಸರ್ ಅನಾವರಣಗೊಳಿಸಲು ಯೋಜಿಸಿದ್ದಾರೆ.

ರಮೇಶ್ ಅರವಿಂದ್ ಅವರು ಚಿತ್ರರಂಗದಲ್ಲಿ ಸುಮಾರು 35 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಕನ್ನಡದಲ್ಲೇ ಅವರು 100ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ ಅನ್ನೋದು ವಿಶೇಷ. ಅವರ ಹಲವು ಚಿತ್ರಗಳು ಐಕಾನಿಕ್ ಆಗಿದ್ದು, ಈಗಲೂ ಆ ಸಿನಿಮಾಗಳಿಗೆ ಬೇಡಿಕೆ ಇದೆ.
ಸೆಪ್ಟಂಬರ್ 10 ರಮೇಶ್ ಅರವಿಂದ್ ಅವರ ಜನ್ಮದಿನವಾಗಿದ್ದು, ಶಿವಾಜಿ ಸುರತ್ಕಲ್ 2 ರ ತಯಾರಕರು ಈ ಸಂದರ್ಭದಲ್ಲಿ ವಿಶೇಷ ಟೀಸರ್ ಅನಾವರಣಗೊಳಿಸಲು ಯೋಜಿಸಿದ್ದಾರೆ, ಫಸ್ಟ್ ಲುಕ್ ಟೀಸರ್ ಚಿತ್ರದ ವಿಷಯದ ಬಗ್ಗೆ ಸ್ನೀಕ್ ಪೀಕ್ ನೀಡುತ್ತದೆ.
ಚಿತ್ರದಲ್ಲಿ ರಮೇಶ್ ಅರವಿಂದ್ ಎರಡು ವಿಭಿನ್ನ ಪಾತ್ರಗಳಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ರಮೇಶ್ ಅರವಿಂದ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಒಂದು ಒಳ್ಳೆಯದಾದರೆ ಇನ್ನೊಂದು ಕೆಟ್ಟ ಪಾತ್ರ, ಅದನ್ನು ನಿರ್ಧರಿಸಿರುವುದು ಪ್ರೇಕ್ಷಕರಿಗೆ ಬಿಟ್ಟದ್ದು.
ರಮೇಶ್ ತಂದೆಯ ಪಾತ್ರದಲ್ಲಿ ಬಹುಭಾಷಾ ನಟ ನಾಸರ್ ಮತ್ತು ಪುತ್ರಿಯ ಪಾತ್ರದಲ್ಲಿ ಆರಾಧ್ಯ ನಟಿಸುತ್ತಿದ್ದಾರೆ. ಶಿವಾಜಿ ಸುರತ್ಕಲ್ ಭಾಗ 1ರಲ್ಲಿ ತಂದೆ, ಮಗಳು ಇರಲಿಲ್ಲ. ಈ ಸಿನಿಮಾದಲ್ಲಿ ಅವರಿಬ್ಬರ ಕತೆ ಬರಲಿದೆ. ಅದರೊಂದಿಗೆ ಕೇಸ್ ಮುಂದುವರೆಯುತ್ತದೆ. ರಮೇಶ್ ಮೂರು ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್-2: ಮೇಘನಾ ಗಾಂವ್ಕರ್ ಗೆ ದಕ್ಷ ಮಹಿಳಾ ಪೊಲೀಸ್ ಅಧಿಕಾರಿ ದೀಪಾ ಕಾಮತ್ ಪಾತ್ರ!
ಟೀಸರ್ ಕುರಿತಾಗಿ ಮಾತನಾಡಿರುವ ನಿರ್ದೇಶಕ ಆಕಾಶ್ ಶ್ರೀವತ್ಸ, ‘ಟ್ಯಾಗ್‌ಲೈನ್‌ನಲ್ಲಿ ಹೇಳಿರುವಂತೆ ಇದು ಮಾಯಾವಿಯನ್ನು ಕೊಲ್ಲುವ ಕತೆ. ಮಾಯಾವಿ ಅನ್ನುವುದು ನಮ್ಮೊಳಗೆ ಇರುವ ಕೆಟ್ಟತನವೂ ಆಗಿರಬಹುದು. ಈ ಥೀಮ್ ಅನ್ನು ಪ್ರಸ್ತುತಪಡಿಸುವ ಟೀಸರ್ ಬಿಡುಗಡೆಯಾಗುತ್ತಿದೆ.
ಶಿವಾಜಿ ಸುರತ್ಕಲ್ 2 ಜನವರಿ 2023 ರಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ರಾಕೇಶ್ ಮಯ್ಯಾ ಮತ್ತು ವಿನಾಯಕ್ ಜೋಶಿ ಪೋಲೀಸ್ ಪಾತ್ರದಲ್ಲಿ ನಟಿಸಿದ್ದಾರೆ, ತಾರಾಗಣದಲ್ಲಿ ರಘು ರಾಮನಕೊಪ್ಪ, ಶೋಭರಾಜ್, ಶ್ರೀನಿವಾಸ ಪ್ರಭು, ಸುಮಂತ್ ಭಟ್, ಸೃಷ್ಟಿ ಶೆಟ್ಟಿ ಮತ್ತು ಮಧುರಾ ಗೌಡ ಇದ್ದಾರೆ. ಶಿವಾಜಿ ಸುರತ್ಕಲ್ 2 ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ಮತ್ತು ದರ್ಶನ್ ಅಂಬಟ್ ಛಾಯಾಗ್ರಹಣವನ್ನು ನಿರ್ವಹಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


