ಸಂತೋಷ್ ಕೊಡೆಂಕೇರಿ ನಿರ್ದೇಶನದ ಮುಂದಿನ ಚಿತ್ರಕ್ಕೆ 'ಬ್ರಹ್ಮಗಂಟು' ಗೀತಾ ಭಾರತಿ ಭಟ್ ನಾಯಕಿ!
ವಿಧಾತ, ಹೋಂಸ್ಟೇ, ಇನ್ನೂ ಬಿಡುಗಡೆಯಾಗಬೇಕಿರುವ ಒಂದನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಚಿತ್ರಗಳ ನಿರ್ದೇಶಕ ಸಂತೋಷ್ ಕೊಡೆಂಕೇರಿ ತಮ್ಮ ಮುಂದಿನ ಪ್ರಾಜೆಕ್ಟ್‌ನ ಚಿತ್ರೀಕರಣ ಆರಂಭಿಸಿದ್ದಾರೆ.

ವಿಧಾತ, ಹೋಂಸ್ಟೇ, ಇನ್ನೂ ಬಿಡುಗಡೆಯಾಗಬೇಕಿರುವ ಒಂದನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಚಿತ್ರಗಳ ನಿರ್ದೇಶಕ ಸಂತೋಷ್ ಕೊಡೆಂಕೇರಿ ತಮ್ಮ ಮುಂದಿನ ಪ್ರಾಜೆಕ್ಟ್‌ನ ಚಿತ್ರೀಕರಣ ಆರಂಭಿಸಿದ್ದಾರೆ.
ಕೌಟುಂಬಿಕ ಹಾಸ್ಯ ಕಥೆಯುಳ್ಳ ಈ ಸಿನಿಮಾದಲ್ಲಿ ಬಿಗ್ ಬಾಸ್ ಸ್ಪರ್ಧಿ ಗೀತಾ ಭಾರತಿ ಭಟ್ ನಟಿಸುತ್ತಿದ್ದಾರೆ. ಚಿತ್ರದ ಕಥೆ ಮತ್ತು ಸಂಭಾಷಣೆಯನ್ನು ನನ್ನ ಪತ್ನಿ ಪಾವನ ಸಂತೋಷ್ ಬರೆದಿದ್ದಾರೆ. ಇಡೀ ಚಿತ್ರವು ದಕ್ಷಿಣ ಕನ್ನಡದಲ್ಲಿ ಸೆಟ್ ಆಗಿದ್ದು, ಆ ಪ್ರದೇಶದ ಜೀವನಶೈಲಿ ಮತ್ತು ಸಂಸ್ಕೃತಿಯ ಬಗ್ಗೆ ಇರಲಿದೆ. ಇದು ಹಳ್ಳಿ ಹುಡುಗಿಯೊಬ್ಬಳು, ಒಬ್ಬ ಸುಂದರ ಹುಡುಗನನ್ನು ಹುಡುಕುತ್ತಿದ್ದಾಳೆ. NRI ಯುವಕನಿಂದ ಪ್ರಸ್ತಾಪ ಬರುತ್ತದೆ.
ಹುಡುಗನನ್ನು ಮೆಚ್ಚಿಸಲು ಅವಳು ತನ್ನದೆ ಆದ ದಾರಿಯಲ್ಲಿ ಹೋಗುತ್ತಾಳೆ, ಆದರೆ ಕೆಲವು ತಿರುವುಗಳ ನಂತರ ಚಲನಚಿತ್ರವು ನ್ಯಾಯಾಲಯಕ್ಕೆ ಶಿಫ್ಟ್ ಆಗುತ್ತದೆ. ಇದು ಹುಡುಗಿಯ ರೋಲರ್-ಕೋಸ್ಟರ್ ಪ್ರಯಾಣವಾಗಿದೆ, ಇದನ್ನು ಹೆಚ್ಚು ಕಾಮಿಕ್ ಶೈಲಿಯಲ್ಲಿ ಹೊರತರಲಾಗುವುದು ಎಂದು ನಿರ್ದೇಶಕರು ಸಂತೋಷ್ ಹೇಳಿದ್ದಾರೆ.
ದೃಷ್ಟಿ ಮೀಡಿಯಾ ಮತ್ತು ಪ್ರೊಡಕ್ಷನ್ಸ್‌ನ ಎರಡನೇ ಸಿನಿಮಾವಾಗಿದೆ. ಗೀತಾ ಭಟ್ ಜೊತೆಗೆ ಸುಮನ್ ರಂಗನಾಥ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ತಾರಾಗಣದಲ್ಲಿ ಕೃಷ್ಣಮೂರ್ತಿ ಕವತಾರ್, ಪದ್ಮಜಾ ರಾವ್, ಮೀನಾ, ಹನುಮಂತ ರಾವ್, ದರ್ಶಿನಿ, ಸಂಪತ್ ಮೈತ್ರೇಯ, ಭೀಮಾ ರಾವ್ ಮತ್ತು ರಘು ಪಾಂಡೇಶ್ವರ್ ಕೂಡ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


