ಸಿನಿಮಾ ಸುದ್ದಿ

ಡಾಲಿ ಧನಂಜಯ್ ನಟನೆಯ 'ಹೊಯ್ಸಳ' ಚಿತ್ರೀಕರಣ ನವೆಂಬರ್ 7 ರಿಂದ ಪುನರಾರಂಭ

ಅಕ್ಟೋಬರ್ 21 ರಂದು ರಿಲೀಸ್ ಆದ ಹೆಡ್ ಬುಷ್ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿರುವುದರ ಜೊತೆಗೆ ವೀರಗಾಸೆ ಮತ್ತು ಕರಗದ ಚಿತ್ರಣಗಳಿಂದಾಗಿ ವಿವಾದಕ್ಕೆ ಗುರಿಯಾಗಿತ್ತು.

ಡಾಲಿ ಧನಂಜಯ್ ನಟನೆಯ 'ಹೊಯ್ಸಳ' ಚಿತ್ರೀಕರಣ ನವೆಂಬರ್ 7 ರಿಂದ ಪುನರಾರಂಭ
ಧನಂಜಯ್
Published On :

ಅಕ್ಟೋಬರ್ 21 ರಂದು ರಿಲೀಸ್ ಆದ  ಹೆಡ್ ಬುಷ್ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿರುವುದರ ಜೊತೆಗೆ ವೀರಗಾಸೆ ಮತ್ತು ಕರಗದ ಚಿತ್ರಣಗಳಿಂದಾಗಿ ವಿವಾದಕ್ಕೆ ಗುರಿಯಾಗಿತ್ತು.

ಹೆಡ್ ಬುಷ್ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ ಎಂದು ನಟ ಮತ್ತು ನಿರ್ಮಾಪಕರು ತಿಳಿಸಿದ್ದಾರೆ. ಜೊತೆಗೆ ತಮಗೆ ಸಿಕ್ಕಿರುವ ಬೆಂಬಲವನ್ನು ಹಾಗೂ ಟೀಕೆಗಳನ್ನು ಗಮನಿಸಿರುವುದಾಗಿ ಧನಂಜಯ್ ತಿಳಿಸಿದ್ದಾರೆ. ಪ್ರೇಕ್ಷಕರ ಬೆಂಬಲಕ್ಕಾಗಿ  ನಾನು ಋಣಿಯಾಗಿದ್ದೇನೆ, ಅವರಿಗೆಲ್ಲಾ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಇದೇ ವೇಳೆ ಡಾಲಿ ಧನಂಜಯ್ ತಮ್ಮ 25 ನೇ ಸಿನಿಮಾ ಹೊಯ್ಸಳ ಚಿತ್ರದ ಚಿತ್ರೀಕರಣವನ್ನು ನವೆಂಬರ್ 7 ರಿಂದ ಪುನಾರಂಭ ಮಾಡಲಿದ್ದಾರೆ. ವಿಜಯ್ ಕಿರಂಗದೂರು ನಿರ್ಮಾಣದ ಸಿನಿಮಾಗೆ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಸಹಯೋಗವಿದೆ. ಎನ್ ವಿಜಯ್ ನಿರ್ದೇಶನದ ಹೊಯ್ಸಳ ಸಿನಿಮಾ ಮಾರ್ಚ್ 2023ಕ್ಕೆ ರಿಲೀಸ್ ಆಗುವ ಸಾಧ್ಯತೆಯಿದೆ.

ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ , ತಮಿಳಿನ ಪಾಯುಮ್ ಒಲಿ ನೀ ಯೇನಕ್ಕು ಮತ್ತು ಮಜೈ ಪಿಡಿಕಾದ ಮನಿಥನ್ ಎಂಬ ಸಿನಿಮಾದಲ್ಲಿಯ ನಟಿಸುತ್ತಿದ್ದಾರೆ, ತೆಲುಗು ನಿರ್ದೇಶಕ ಈಶ್ವರ್ ಕಾರ್ತಿಕ್ ಅವರೊಂದಿಗೆ ಕನ್ನಡ-ತೆಲುಗು ದ್ವಿಭಾಷಾ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.