ನೀವು ಈ ಸವಾಲನ್ನೂ ಜಯಿಸುತ್ತೀರಿ: ಸಂಕಷ್ಟದಲ್ಲಿರುವ ನಟಿ ಸಮಂತಾಗೆ ಮೆಗಾಸ್ಟಾರ್, ಸಾಯಿಪಲ್ಲವಿ ಹಾರೈಕೆ
ನಟಿ ಸಮಂತಾ ಅವರು ಮೈಯೋಸಿಟಿಸ್ ಎಂದು ಕರೆಯಲ್ಪಡುವ ಆಟೋಇಮ್ಯೂನ್ ಡಿಸಾರ್ಡರ್ಗೆ ಒಳಗಾಗಿರುವ ಪೋಸ್ಟ್ಗೆ ಮೆಗಾ ಸ್ಟಾರ್ ಚಿರಂಜೀವಿ ಭಾನುವಾರ ಪ್ರತಿಕ್ರಿಯಿಸಿದ್ದಾರೆ. ಸಮಂತಾ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ ಮತ್ತು ಅವರು ಈ ಸವಾಲನ್ನೂ ಸಹ ಜಯಿಸಲಿದ್ದಾರೆ ಎಂದು ಹೇಳಿದ್ದಾರೆ.

ಚೆನ್ನೈ: ನಟಿ ಸಮಂತಾ ಅವರು ಮೈಯೋಸಿಟಿಸ್ ಎಂದು ಕರೆಯಲ್ಪಡುವ ಆಟೋಇಮ್ಯೂನ್ ಡಿಸಾರ್ಡರ್ಗೆ ಒಳಗಾಗಿರುವ ಪೋಸ್ಟ್ಗೆ ಮೆಗಾ ಸ್ಟಾರ್ ಚಿರಂಜೀವಿ ಭಾನುವಾರ ಪ್ರತಿಕ್ರಿಯಿಸಿದ್ದಾರೆ. ಸಮಂತಾ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ ಮತ್ತು ಅವರು ಈ ಸವಾಲನ್ನೂ ಸಹ ಜಯಿಸಲಿದ್ದಾರೆ ಎಂದು ಹೇಳಿದ್ದಾರೆ.
ಭಾನುವಾರ ಟ್ವೀಟ್ ಮಾಡಿರುವ ಚಿರಂಜೀವಿ ಹೀಗೆ ಬರೆದಿದ್ದಾರೆ, 'ಆತ್ಮೀಯ ಸ್ಯಾಮ್, ಕಾಲಕಾಲಕ್ಕೆ ಸವಾಲುಗಳು ನಮ್ಮ ಜೀವನದಲ್ಲಿ ಬರುತ್ತವೆ. ಬಹುಶಃ ಇವುಗಳು ನಮ್ಮ ಆಂತರಿಕ ಶಕ್ತಿಯನ್ನು ಕಂಡುಹಿಡಿಯಲು ನಮಗೆ ಅವಕಾಶ ಮಾಡಿಕೊಡುತ್ತವೆ. ನೀವು ಇನ್ನೂ ಹೆಚ್ಚಿನ ಆಂತರಿಕ ಶಕ್ತಿಯನ್ನು ಹೊಂದಿರುವ ಅದ್ಭುತ ಹುಡುಗಿ. ನೀವು ಈ ಸವಾಲನ್ನು ಅತಿ ಶೀಘ್ರದಲ್ಲಿ ಜಯಿಸುತ್ತೀರಿ ಎಂದು ನನಗೆ ಖಾತ್ರಿಯಿದೆ' ಎಂದಿದ್ದಾರೆ.
'ನಿಮಗೆ ಎಲ್ಲಾ ರೀತಿಯ ಧೈರ್ಯ ಮತ್ತು ದೃಢತೆ ಸಿಗಲೆಂದು ಹಾರೈಸುತ್ತೇನೆ. ಶಕ್ತಿಯು ನಿಮ್ಮೊಂದಿಗೆ ಇರಲಿ' ಎನ್ನುವ ಮೂಲಕ ಸಮಂತಾ ಶೀಘ್ರ ಗುಣಮುಖರಾಗಲಿ ಎಂದು ಮೆಗಾ ಸ್ಟಾರ್ ಕೂಡ ಹಾರೈಸಿದ್ದಾರೆ.
ಇನ್ನು ಸಮಂತಾ ಅವರಿಗೆ ಜೂನಿಯರ್ ಎನ್ಟಿಆರ್ ಕೂಡ ಪ್ರತಿಕ್ರಿಯಿಸಿದ್ದು, ಶೀಘ್ರವೇ ಗುಣಮುಖರಾಗಿ. ನಿಮಗೆ ಎಲ್ಲಾ ಶಕ್ತಿಯೂ ಲಭ್ಯವಾಗಲಿ' ಎಂದಿದ್ದಾರೆ.
ಇದರೊಂದಿಗೆ ನಟಿ ಸಾಯಿಪಲ್ಲವಿ ಕೂಡ ಶುಭ ಹಾರೈಸಿದ್ದು, ನಾವು ನಿಮಗಾಗಿ ಪ್ರಾರ್ಥಿಸುತ್ತೇವೆ! ನಿಮಗೆ ಬಹಳಷ್ಟು ಪ್ರೀತಿಯನ್ನು ಕಳುಹಿಸುತ್ತಿದ್ದೇನೆ. ನೀವು ಶೀಘ್ರದಲ್ಲೇ ಗುಣಮುಖರಾಗುವಿರಿ ಮತ್ತು ಎಂದಿಗಿಂತಲೂ ಪ್ರಕಾಶಮಾನವಾಗಿ ಹೊಳೆಯುವಿರಿ ಎಂದಿದ್ದಾರೆ.
ನಟಿ ಸಾಯೇಶಾ ಸೈಗಲ್, ಕಾಜಲ್ ಅಗರ್ವಾಲ್ ಸೇರಿದಂತೆ ಹಲವಾರು ಜನ ಸೆಲೆಬ್ರಿಟಿಗಳು ಸಮಂತಾ ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದಾರೆ.
ಹಲವು ದಿನಗಳಿಂದ ಎದ್ದಿದ್ದ ಗಾಳಿ ಸುದ್ದಿಗಳಿಗೆ ಶನಿವಾರ ತೆರೆ ಎಳೆದಿದ್ದ ಸಮಂತಾ, ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಯಲ್ಲಿ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಮೈಯೋಸಿಟಿಸ್ ಎಂಬ ಆಟೋಇಮ್ಯೂನ್ ಡಿಸಾರ್ಡರ್ಗೆ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದರು.
ಸ್ನಾಯುಗಳು ದುರ್ಬಲ, ದಣಿದ ಮತ್ತು ನೋವಿನಿಂದ ಕೂಡಿದ ಅಪರೂಪದ ಪರಿಸ್ಥಿತಿಗಳ ಗುಂಪಿಗೆ ಮೈಯೋಸಿಟಿಸ್ ಹೆಸರು. ಇದು ಸಾಮಾನ್ಯವಾಗಿ ಪ್ರತಿರಕ್ಷಣಾ ವ್ಯವಸ್ಥೆಯ ಸಮಸ್ಯೆಯಿಂದ ಉಂಟಾಗುತ್ತದೆ. ಇದು ಆರೋಗ್ಯಕರ ಅಂಗಾಂಶವನ್ನು ಆಕ್ರಮಿಸುತ್ತದೆ.
35 ವರ್ಷದ ಸಮಂತಾ ಅವರು ಶೀಘ್ರವೇ ಸಂಪೂರ್ಣ ಗುಣಮುಖರಾಗುವ ವಿಶ್ವಾಸವಿದೆ ಎಂದು ವೈದ್ಯರು ಹೇಳಿದ್ದಾರೆ.
'ಯಶೋಧ' ಟ್ರೈಲರ್ಗೆ ನಿಮ್ಮ ಪ್ರತಿಕ್ರಿಯೆ ಅದ್ಭುತವಾಗಿದೆ. ನಾನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವ ಈ ಪ್ರೀತಿ ಮತ್ತು ಸಂಪರ್ಕವೇ ಜೀವನದಲ್ಲಿ ನನಗೆ ಎದುರಾಗುತ್ತಿರುವ ಅಂತ್ಯವಿಲ್ಲದ ಸವಾಲುಗಳನ್ನು ಎದುರಿಸಲು ನನಗೆ ಶಕ್ತಿಯನ್ನು ನೀಡುತ್ತದೆ. ಕೆಲವು ತಿಂಗಳ ಹಿಂದೆ ನನಗೆ ಮೈಯೋಸಿಟಿಸ್ ಎಂಬ ಆಟೋಇಮ್ಯೂನ್ ಸ್ಥಿತಿ ಇರುವುದು ಪತ್ತೆಯಾಯಿತು. ಚಿಕಿತ್ಸೆ ಪಡೆದ ನಂತರ ನಾನು ಈ ಬಗ್ಗೆ ಹಂಚಿಕೊಳ್ಳಲು ಆಶಿಸಿದ್ದೆ. ಆದರೆ, ನಾನು ನಿರೀಕ್ಷಿಸಿದ್ದಕ್ಕಿಂತ ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ' ಎಂದು ಆಸ್ಪತ್ರೆಯ ಫೋಟೋದೊಂದಿಗೆ ಸಮಂತಾ ಬರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


