ಸಿನಿಮಾ ಸುದ್ದಿ

ಹೊಸಬರ 'ಹೊಸ ದಿನಚರಿ' ಡಿಸೆಂಬರ್ 9 ರಂದು ತೆರೆಗೆ

ಹೊಸ ಚಿತ್ರತಂಡ ನಿರ್ಮಿಸಿದ ಹೊಸ ದಿನಚರಿ ಚಿತ್ರ ಡಿಸೆಂಬರ್ 9 ರಂದು ಬಿಡುಗಡೆಗೆ ಸಿದ್ಧವಾಗಿದೆ ಎಂದು ಚಿತ್ರದ ನಿರ್ದೇಶಕರು ಘೋಷಿಸಿದ್ದಾರೆ.

ಹೊಸಬರ 'ಹೊಸ ದಿನಚರಿ' ಡಿಸೆಂಬರ್ 9 ರಂದು ತೆರೆಗೆ
ಚಿತ್ರದ ಪೋಸ್ಟರ್
Published On :

ಬೆಂಗಳೂರು: ಹೊಸ ಚಿತ್ರತಂಡ ನಿರ್ಮಿಸಿದ ಹೊಸ ದಿನಚರಿ ಚಿತ್ರ ಡಿಸೆಂಬರ್ 9 ರಂದು ಬಿಡುಗಡೆಗೆ ಸಿದ್ಧವಾಗಿದೆ ಎಂದು ಚಿತ್ರದ ನಿರ್ದೇಶಕರು ಘೋಷಿಸಿದ್ದಾರೆ. 

ಕೀರ್ತಿ ಶೇಖರ್ ಮತ್ತು ವ್ಯೈಶಾಕ್ ಪುಷ್ಪಲತಾ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದ್ದು, ಜಂಟಿಯಾಗಿ ಚಿತ್ರದ ಕಥೆಯನ್ನು ಬರೆದಿದ್ದಾರೆ. ಎಲ್ಲರ ಜೀವನದಲ್ಲೂ ಪ್ರೀತಿ ಇದ್ದೇ ಇರುತ್ತದೆ. ಆದರೆ ಪ್ರೀತಿಸಿದ ವ್ಯಕ್ತಿ ಕೊನೆಯವರೆಗೂ ಇರುವುದಿಲ್ಲ. ಅವರ ಬದಲಿಗೆ ಬೇರೊಬ್ಬರು ಜೀವನದಲ್ಲಿ ಬಂದಾಗ ಏನಾಗುತ್ತದೆ? ಎಂಬುದೇ 'ಹೊಸ ದಿನಚರಿ'ಯ ಕಥಾಸಾರಾಂಶ.

ನೀವು ಯಾರನ್ನಾದರೂ ಎಷ್ಟು ಪ್ರೀತಿಸಿತ್ತೀರಿ, ಅವರು ನಿಮ್ಮನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದು ಮುಖ್ಯವಲ್ಲ. ನೀವು ಅವರಿಂದ ದೂರವಾಗಿ ಸಮಯ ಕಳೆಯಬೇಕಾದ ಸಂದರ್ಭಗಳು ಬಂದಾಗ ಪ್ರೀತಿಪಾತ್ರರಿಂದ ಬೇರ್ಪಟ್ಟು ಅಪರಿಚಿತರೊಂದಿಗೆ ಹೇಗೆ ಜೀವನ ನಡೆಸುವುದು ಎಂಬುದು ಹೊಸ ದಿನಚರಿಯ ತಿರುಳು ಎಂದು ಕೀರ್ತಿ ಶೇಖರ್ ಹೇಳಿದ್ದಾರೆ.

'ಹೊಸ ದಿನಚರಿ' ಚಿತ್ರದಲ್ಲಿ ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್, ದೀಪಕ್ ಸುಬ್ರಹ್ಮಣ್ಯ, ಮಂದಾರ, ವರ್ಷ, ಚೇತನ್ ವಿಕ್ಕಿ, ವಿವೇಕ್ ದೇವ್, ಶ್ರೀಪ್ರಿಯ, ಸುಪ್ರೀತಾ ಗೌಡ ಹಾಗೂ ಬೇಬಿ ಮಾನಿನಿ ಹಾಗೂ ಇನ್ನಿತರರು ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.