ನಯನತಾರಾ-ವಿಘ್ನೇಶ್ ಅವಳಿ ಮಕ್ಕಳ ವಿವಾದಕ್ಕೆ ಹೊಸ ಟ್ವಿಸ್ಟ್ : ಆರು ವರ್ಷದ ಹಿಂದೆಯೇ ತಾರಾ ಜೋಡಿ ವಿವಾಹ?
ನಯನತಾರಾ–ವಿಘ್ನೇಶ್ ದಂಪತಿಗೆ ಬಾಡಿಗೆ ತಾಯ್ತನದಿಂದ ಜನಿಸಿದ ಮಕ್ಕಳ ವಿವಾದಕ್ಕೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಇಬ್ಬರೂ 6 ವರ್ಷಗಳ ಹಿಂದೆಯೇ ಮದುವೆಯಾಗಿದ್ದರು ಎಂಬ ಅಚ್ಚರಿಯ ಮಾಹಿತಿ ಅವರು ಆರೋಗ್ಯ ಇಲಾಖೆಗೆ ಸಲ್ಲಿಸಿರುವ ಪ್ರಮಾಣಪತ್ರದಿಂದ ಬಹಿರಂಗಗೊಂಡಿದೆ.

ದಕ್ಷಿಣ ಭಾರತದ ಖ್ಯಾತ ನಟಿ ನಯನತಾರ-ವಿಘ್ನೇಶ್ ಶಿವನ್ ದಂಪತಿ ಭಾರತೀಯ ಬಾಡಿಗೆ ತಾಯ್ತನ ಕಾನೂನು ಉಲ್ಲಂಘನೆ ಮಾಡಿ ಅವಳಿ ಮಕ್ಕಳನ್ನ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆದರೆ ಈಗ ಈ ಪ್ರಕರಣ ತಿರುವು ಪಡೆದುಕೊಂಡಿದ್ದು, ಕಾನೂನು ರೀತಿಯಲ್ಲೇ ಮಕ್ಕಳನ್ನ ಪಡೆದಿದ್ದಾರೆ ಎಂದು ದಾಖಲೆಗಳನ್ನ ಸಲ್ಲಿಕೆ ಮಾಡಲಾಗಿದೆಯಂತೆ.
ನಯನತಾರಾ–ವಿಘ್ನೇಶ್ ದಂಪತಿಗೆ ಬಾಡಿಗೆ ತಾಯ್ತನದಿಂದ ಜನಿಸಿದ ಮಕ್ಕಳ ವಿವಾದಕ್ಕೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಇಬ್ಬರೂ 6 ವರ್ಷಗಳ ಹಿಂದೆಯೇ ಮದುವೆಯಾಗಿದ್ದರು ಎಂಬ ಅಚ್ಚರಿಯ ಮಾಹಿತಿ ಅವರು ಆರೋಗ್ಯ ಇಲಾಖೆಗೆ ಸಲ್ಲಿಸಿರುವ ಪ್ರಮಾಣಪತ್ರದಿಂದ ಬಹಿರಂಗಗೊಂಡಿದೆ.
ಕಳೆದ ಭಾನುವಾರ ನಯನತಾರಾ ಹಾಗೂ ವಿಘ್ನೇಶ್ ದಂಪತಿ ಬಾಡಿಗೆ ತಾಯ್ತನದಿಂದ ಅವಳಿ ಮಕ್ಕಳನ್ನು ಪಡೆದಿರುವುದಾಗಿ ಹೇಳಿಕೊಂಡಿದ್ದರು. ಆದರೆ ಮದುವೆಯಾಗಿ 4 ತಿಂಗಳಿನೊಳಗೆ ಹೇಗೆ ಇವರು ಮಕ್ಕಳನ್ನು ಪಡೆದರು ಎಂಬ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿತ್ತು. ಇದರಿಂದ ಎಚ್ಚೆತ್ತ ತಮಿಳುನಾಡು ಸರ್ಕಾರ ಮಕ್ಕಳನ್ನು ಪಡೆದ ಬಾಡಿಗೆ ತಾಯ್ತನದ ಪ್ರಕ್ರಿಯೆ ಕುರಿತು ಪ್ರಶ್ನೆಗಳನ್ನು ಕೇಳಿ, ವಿಚಾರಣೆ ನಡೆಸುವುದಾಗಿ ಹೇಳಿತ್ತು.
ಇದೀಗ ಈ ದಂಪತಿ ತಮಿಳುನಾಡು ಆರೋಗ್ಯ ಇಲಾಖೆಗೆ ಈ ಸಂಬಂಧ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಈ ಇಬ್ಬರು 6 ವರ್ಷಗಳ ಹಿಂದೆಯೇ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಅದರ ದಾಖಲೆಗಳನ್ನೀಗ ಆರೋಗ್ಯ ಇಲಾಖೆಗೆ ಸಲ್ಲಿಸಿದ್ದಾರೆ.
ಕಳೆದ ಜೂನ್ 9 ರಂದು ನಯನತಾರ ಮತ್ತು ವಿಘ್ನೇಶ್ ಶಿವನ್ ಸಂಪ್ರದಾಯವಾಗಿ ಗುರು-ಹಿರಿಯರ ಆಶೀರ್ವಾದೊಂದಿಗೆ ಮದುವೆಯಾಗಿದ್ದರು. ಮದುವೆಯಾಗಿ ನಾಲ್ಕು ತಿಂಗಳು ಕಳೆದಿದ್ದು, 6 ದಿನಗಳ ಹಿಂದೆಯಷ್ಟೇ ಅವಳಿ ಮಕ್ಕಳಿಗೆ ತಂದೆ-ತಾಯಿ ಆಗಿದ್ದೇವೆ ಎಂದು ವಿಘ್ನೇಶ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿದ್ದರು. ನಾಲ್ಕು ತಿಂಗಳಲ್ಲಿ ಮಕ್ಕಳನ್ನ ಪಡೆದರು ಎನ್ನುವ ವಿಚಾರ ಹೊರಬೀಳುತ್ತಿದ್ದಂತೆ ನಯನತಾರ ದಂಪತಿ ವಿರುದ್ಧ ಬಲವಾದ ಆರೋಪಗಳು ಕೇಳಿಬಂದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


