ಕರುನಾಡಿನಲ್ಲಿ 'ಶ್ರೀಮಂತ' ರೈತನಾದ ನಟ ಸೋನು ಸೂದ್!
ದರ್ಶನ್ ಅವರ ಕುರುಕ್ಷೇತ್ರ (2019) ಚಿತ್ರದಲ್ಲಿ ಅರ್ಜುನ ಪಾತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಸೋನು ಸೂದ್, ಒಂದು ವಿರಾಮದ ನಂತರ ಮತ್ತೆ ಕನ್ನಡ ಸಿನಿಮಾಗೆ ಮರಳಿದ್ದಾರೆ.

ದರ್ಶನ್ ಅವರ ಕುರುಕ್ಷೇತ್ರ (2019) ಚಿತ್ರದಲ್ಲಿ ಅರ್ಜುನ ಪಾತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಸೋನು ಸೂದ್, ಒಂದು ವಿರಾಮದ ನಂತರ ಮತ್ತೆ ಕನ್ನಡ ಸಿನಿಮಾಗೆ ಮರಳಿದ್ದಾರೆ. ಹಾಸನ್ ರಮೇಶ್ ಅವರ ಚೊಚ್ಚಲ ನಿರ್ದೇಶನದ 'ಶ್ರೀಮಂತ' ಚಿತ್ರದಲ್ಲಿ ನಟಿಸಲು ಸಿದ್ಧರಾಗಿದ್ದಾರೆ.
ಬಾಲಿವುಡ್ ನಟ ಸೋನು ಸೂದ್ ನಾಯಕನಾಗಿ ಅಭಿನಯಿಸಿರುವ ಶ್ರೀಮಂತ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಪೋಸ್ಟರ್ ಹಾಗೂ ರೈತ ಗೀತೆಯ ಲಿರಿಕಲ್ ವಿಡಿಯೋ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ.
ಇಂದಿನ ದಿನಗಳಲ್ಲಿ ರೈತರ ಬದುಕಿನ ಮೇಲೆ ಬೆಳಕು ಚೆಲ್ಲುವ ಈ ಚಿತ್ರದ ಕುರಿತು ಮಾತನಾಡಿದ ಹಾಸನ್, ತಂತ್ರಜ್ಞಾನವು ಈ ಕ್ಷೇತ್ರವನ್ನು ಹೇಗೆ ನಿರ್ಲಕ್ಷಿಸಿದೆ ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ, ಈ ಸಿನಿಮಾದಲ್ಲಿ ಕಮರ್ಷಿಯಲ್ ಅಂಶಗಳೂ ಇವೆ.’’ ಮೊದಲ ಹಾಡು ಮಳೆ ಮುನಿದರೆ ಸಂತ ಇತ್ತೀಚೆಗೆ ಬಿಡುಗಡೆಯಾಗಿದೆ.
ಇದು ಕೇವಲ ರೈತರ ಸಿನಿಮಾ ಮಾತ್ರವಲ್ಲ. ಎಲ್ಲ ಅಂಶವನ್ನೊಳಗೊಂಡ ಸಿನಿಮಾ. ದೇಶದಲ್ಲಿ ಶೇ.80ರಷ್ಟು ರೈತರಿರುವ ಹಾಗೆ ಕಥೆ ಮಾಡಲಾಗಿದೆ. ಇದು ಸಂಗೀತಮಯ ಸಿನಿಮಾ. 8 ಗೀತೆಗಳ ಜೊತೆಗೆ ಒಗಟು, ಗಾದೆಗಳು ಇವೆ ಎಂದರು. ಮಳೆ ಮುನಿದರೆ ಸಂತ ಎಂಬ ಹಾಡನ್ನು ದಿವಂಗತ ಎಸ್.ಪಿ ಬಾಲಸುಬ್ರಮಣ್ಯಂ ಹಾಡಿದ್ದಾರೆ.
ಮರಾಠಿ ಬೆಡಗಿ ವೈಷ್ಣವಿ ಪಟವರ್ಧನ್, ವೈಷ್ಣವಿ ಚಂದ್ರನ್ ಮೆನನ್, ರಾಜು ತಾಳಿಕೋಟೆ, ಕಲ್ಯಾಣಿ, ರಮೇಶ್ ಭಟ್, ರವಿಶಂಕರ್ ಗೌಡ, ಸಾಧು ಕೋಕಿಲ, ಚರಣ್ ರಾಜ್, ಗಿರಿ, ಕುರಿಬಾಂಡ್ ರಂಗ, ಬ್ಯಾಂಕ್ ಮಂಜಣ್ಣ, ಬಸುರಾಜ್ ಹಾಸನ್ ಹಾಗೂ ಮುಂತಾದವರು ಅಭಿನಯಿಸಿದ್ದಾರೆ. ಹಂಸಲೇಖ ಸಂಗೀತ ಹಾಗೂ ಸಾಹಿತ್ಯ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


