ಬಹುಭಾಷಾ ಪ್ರಾಜೆಕ್ಟ್‌ಗಾಗಿ ಜೊತೆಯಾಗುತ್ತಿದ್ದಾರೆ ನಿರ್ಮಾಪಕ ಮಂಜುನಾಥ್ ಗೌಡ- ನಾಗಶೇಖರ್!
ಅರಮನೆ, ಸಂಜು ವೆಡ್ಸ್ ಗೀತಾ, ಮೈನಾ ನಿರ್ದೇಶಕ ನಾಗಶೇಖರ್ ಹಾಗೂ ವಿಕ್ರಾಂತ್ ರೋಣ ನಿರ್ಮಾಪಕ ಮಂಜುನಾಥ್ ಗೌಡ ಹೊಸದೊಂದು ಸಿನಿಮಾಗೆ ಜೊತೆಯಾಗುತ್ತಿದ್ದಾರೆ. ಶುಕ್ರವಾರ ಸ್ಕ್ರಿಪ್ಟ್ ಪೂಜೆ ನಡೆದಿದೆ.

ಅರಮನೆ, ಸಂಜು ವೆಡ್ಸ್ ಗೀತಾ, ಮೈನಾ ನಿರ್ದೇಶಕ ನಾಗಶೇಖರ್ ಹಾಗೂ ವಿಕ್ರಾಂತ್ ರೋಣ ನಿರ್ಮಾಪಕ ಮಂಜುನಾಥ್ ಗೌಡ ಹೊಸದೊಂದು ಸಿನಿಮಾಗೆ ಜೊತೆಯಾಗುತ್ತಿದ್ದಾರೆ. ಶುಕ್ರವಾರ ಸ್ಕ್ರಿಪ್ಟ್ ಪೂಜೆ ನಡೆದಿದೆ.
ಈ ಬೆಳವಣಿಗೆಯನ್ನು ದೃಢಪಡಿಸಿದ ಜಾಕ್ ಮಂಜು, ನಾಗಶೇಖರ್ ಜೊತೆಗೆ ವಿವಿಧ ಹಿನ್ನೆಲೆಯ ಹೆಸರಾಂತ ವ್ಯಕ್ತಿಗಳು ಚಿತ್ರಕಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಸ್ಕ್ರಿಪ್ಟ್ ಲಾಕ್ ಆದ ನಂತರವೇ ತಾರಾಗಣ ಮತ್ತು ಸಿಬ್ಬಂದಿಯನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದ್ದಾರೆ.
"ನಾಗಶೇಖರ್ ಅವರು ನನಗೆ ತಂದ ಕಥೆ ನನಗೆ ಇಷ್ಟವಾಯಿತು. ಹಾಗಾಗಿ, ನಾವು ನಿರ್ದೇಶಕಿ ಸುಮನಾ ಕಿತ್ತೂರು, ಬಿಬಿ ಅಶೋಕ್ ಕುಮಾರ್ (ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ), ಚಕ್ರವರ್ತಿ ಚಂದ್ರಚೂಡ್ (ಲೇಖಕ ಮತ್ತು ಪತ್ರಕರ್ತ), ದಿಲೀಪ್ (ತಜ್ಞ ಕ್ರಿಮಿನಲ್ ವಕೀಲರು) ಸೇರಿದಂತೆ ಗಣ್ಯರ ಗುಂಪನ್ನು ಒಟ್ಟುಗೂಡಿಸಿದ್ದೇವೆ. ಛಾಯಾಗ್ರಾಹಕ ಸತ್ಯ ಹೆಗಡೆ ಮತ್ತು ಚಿತ್ರನಿರ್ಮಾಪಕ ರಘು ಕೋವಿ ಅವರು ಸ್ಕ್ರಿಪ್ಟ್‌ಗಾಗಿ ಕೆಲಸ ಮಾಡಲಿದ್ದಾರೆ" ಎಂದು ಜಾಕ್ ಮಂಜು ತಿಳಿಸಿದ್ದಾರೆ.
ಒಂದು ತಿಂಗಳಲ್ಲಿ ಚಿತ್ರಕಥೆಯನ್ನು ಪೂರ್ಣಗೊಳಿಸುವುದಾಗಿ ಹೇಳಿರುವ ನಾಗಶೇಖರ್ ಈ ಚಿತ್ರವು ರಾಷ್ಟ್ರೀಯ ಸಮಸ್ಯೆಯನ್ನು ಆಧರಿಸಿದ ಪ್ರೇಮಕಥೆಯಾಗಲಿದೆ ಎಂದು ತಿಳಿಸಿದ್ದಾರೆ.
ಅತಿ ಹೆಚ್ಚಿನ ಬಜೆಟ್ ನಲ್ಲಿ ತಯಾರಾಗುವ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ, ನನ್ನ ಮನಸ್ಸಿನಲ್ಲಿ ಕೆಲವು ನಟರಿದ್ದಾರೆ ಅವರುಗಳನ್ನು ಸಂಪರ್ಕಿಸಲು ಪ್ಲಾನ್ ಮಾಡಿದ್ದೇವೆ. ಭಾರತೀಯ ಕಲಾವಿದರಲ್ಲದೇ ಈ ಪ್ರಾಜೆಕ್ಟ್ ಗಾಗಿ ಹಾಲಿವುಡ್ ನಟರನ್ನು ಕರೆತರುವುದಾಗಿ ನಾಗಶೇಖರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


