ಸಿನಿಮಾ ಸುದ್ದಿ

ಶಿವರಾಜ್ ಕುಮಾರ್ 125 ನೇ ಸಿನಿಮಾ 'ವೇದ' ಟೀಸರ್ ನವೆಂಬರ್ 11 ರಂದು ರಿಲೀಸ್!

ಶಿವರಾಜ್ ಕುಮಾರ್ ನಟನೆಯ ವೇದ ಸಿನಿಮಾ ಡಿಸೆಂಬರ್ 23 ರಂದು ಬಿಡುಗಡೆಯಾಗಲಿದೆ, ಶಿವರಾಜಕುಮಾರ್ ಅವರ 125 ನೇ ಚಿತ್ರದ ನಿರ್ದೇಶಕರು ನವೆಂಬರ್ 11 ರಂದು ಮೊದಲ ಟೀಸರ್‌ನೊಂದಿಗೆ ಬರುತ್ತಿದ್ದಾರೆ.

ಶಿವರಾಜ್ ಕುಮಾರ್ 125 ನೇ ಸಿನಿಮಾ 'ವೇದ' ಟೀಸರ್ ನವೆಂಬರ್ 11 ರಂದು ರಿಲೀಸ್!
ವೇದ ಸಿನಿಮಾ ಸ್ಟಿಲ್
Published On :

ಶಿವರಾಜ್ ಕುಮಾರ್ ನಟನೆಯ ವೇದ ಸಿನಿಮಾ ಡಿಸೆಂಬರ್ 23 ರಂದು ಬಿಡುಗಡೆಯಾಗಲಿದೆ,  ಶಿವರಾಜಕುಮಾರ್ ಅವರ 125 ನೇ ಚಿತ್ರದ ನಿರ್ದೇಶಕರು ನವೆಂಬರ್ 11 ರಂದು ಮೊದಲ ಟೀಸರ್‌ನೊಂದಿಗೆ ಬರುತ್ತಿದ್ದಾರೆ.

ನವೆಂಬರ್ 11ಕ್ಕೆ ವೆಪೆನ್ಸ್ ಆಫ್ 'ವೇದ' ಟೀಸರ್ ರಿಲೀಸ್ ಆಗಲಿದೆ. ಚಿತ್ರದಲ್ಲಿ ಶಿವಣ್ಣನ ಕೈಗೆ ನಿರ್ದೇಶಕ ಹರ್ಷ ಮಚ್ಚು ಕೊಟ್ಟಿದ್ದಾರೆ. ಇದೇ ರೀತಿ ಚಿತ್ರದ ಕಲಾವಿದರು ಬೇರೆ ಬೇರೆ ಆಯುಧಗಳನ್ನು ಹಿಡಿದು ಅಬ್ಬರಿಸಲಿದ್ದಾರೆ. ಚಿತ್ರದಲ್ಲಿ ಯಾವೆಲ್ಲಾ ಆಯುಧಗಳು ಇರುತ್ತೆ ಎನ್ನುವುದನ್ನು ಸ್ಪೆಷಲ್ ಟೀಸರ್ ಮೂಲಕ ಪರಿಚಯಿಸಲು ಚಿತ್ರತಂಡ ನಿರ್ಧರಿಸಿದೆ.

ನಿರ್ದೇಶಕ ಹರ್ಷ ಈ ಚಿತ್ರದ ಪ್ರಚಾರಕ್ಕಾಗಿ ಒಂದು ವಿಶಿಷ್ಟವಾದ ಮಾರ್ಗವನ್ನು ಯೋಜಿಸಿದ್ದಾರೆ. ವೇದ ಚಿತ್ರದ ಮೊದಲ ಟೀಸರ್ ಮೂಲಕ ವಿವಿಧ ರೀತಿಯ ಅಸ್ತ್ರಗಳನ್ನು ಹೈಲೈಟ್ ಮಾಡುತ್ತದೆ ಎಂದು ಹೇಳುತ್ತಾರೆ.

ವಜ್ರಕಾಯ, ಭಜರಂಗಿ, ಮತ್ತು ಭಜರಂಗಿ 2 ನಂತರ ಹರ್ಷ ಮತ್ತು ಶಿವರಾಜ್‌ಕುಮಾರ್ ಅವರ ನಾಲ್ಕನೇ ಸಹಯೋಗದಲ್ಲಿ ವೇದದ ಮೂಲಕ ಒಂದಾಗಿದ್ದಾರೆ. ಆಕ್ಷನ್ ಫ್ಯಾಂಟಸಿ ಡ್ರಾಮಾದಲ್ಲಿ ಸೆಂಚುರಿ ಸ್ಟಾರ್ ನಾಮಸೂಚಕ ಪಾತ್ರವನ್ನು ವೇದ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ದಶಕಗಳ ಹಿಂದಿನ ಕಥೆಯನ್ನು 'ವೇದ' ಚಿತ್ರದಲ್ಲಿ ಹೇಳಲಾಗುತ್ತಿದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನುವುದೇ ಚಿತ್ರದ ಕಥಾವಸ್ತು. 60 ವರ್ಷಗಳ ಹಿಂದಿನ ಕಥೆ ಆಗಿರುವುದರಿಂದ ಅಂದಿನ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಬಹಳ ಶ್ರಮಿಸಿದೆ. ಅದ್ಧೂರಿ ಸೆಟ್‌ಗಳನ್ನು ನಿರ್ಮಿಸಿ ಚಿತ್ರೀಕರಣ ನಡೆಸಲಾಗಿದೆ. ಗೀತಾ ಪಿಕ್ಚರ್ಸ್ ಜೊತೆಗೆ ಜೀ ಸಂಸ್ಥೆ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದೆ.

ಅರ್ಜುನ್ ಜನ್ಯಾ ಸಂಗೀತ, ಸ್ವಾಮಿ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ. ಅಪ್ಪು ಅಗಲಿಕೆಯ ಹಿನ್ನೆಲೆಯಲ್ಲಿ ಶಿವಣ್ಣ- ಹರ್ಷ ಜೋಡಿಯಾ 'ಭಜರಂಗಿ- 2' ಚಿತ್ರಕ್ಕೆ ಹಿನ್ನಡೆಯಾಗಿತ್ತು. ಆ ಸಿನಿಮಾ ರಿಲೀಸ್‌ಗೂ ಮೊದಲೇ ಇಬ್ಬರು ಸೇರಿ 'ವೇದ' ಸಿನಿಮಾ ಮಾಡಲು ತೀರ್ಮಾನಿಸಿದ್ದರು. ಈಗಾಗಲೇ ಚಿತ್ರೀಕರಣ ಮುಗಿದು ಪ್ರೀ ಪ್ರೊಡಕ್ಷನ್ ವರ್ಕ್ ಶುರುವಾಗಿದೆ. ಕ್ರಿಸ್‌ಮಸ್ ಹಬ್ಬದ ಸಂಭ್ರಮದಲ್ಲಿ ಡಿಸೆಂಬರ್ 23ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ.

ಮತ್ತೊಂದು ಕುತೂಹಲಕಾರಿ ಸುದ್ದಿಯೆಂದರೆ, ನಿರ್ದೇಶಕರು ಮತ್ತು ಸಂಗೀತ ಸಂಯೋಜಕರು ಹಾಡಿಗೆ  ಹಿನ್ನೆಲೆ ಧ್ವನಿ ನೀಡಲು ದೊಡ್ಡ ಕಲಾವಿದರೊಂದಿಗೆ ಚರ್ಚಿಸುತ್ತಿದ್ದಾರೆ, ಹಾಡಿನ ರೆಕಾರ್ಡಿಂಗ್ ಪೂರ್ಣಗೊಳಿಸಿದ ನಂತರ ಅದರ ವಿವರಗಳನ್ನು ಬಹಿರಂಗಪಡಿಸಲು ತಂಡವು ಯೋಜಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.