ಸಿನಿಮಾ ಸುದ್ದಿ

ಪುತ್ರಿ ಐಶ್ವರ್ಯಾ ನಿರ್ದೇಶನದ 'ಲಾಲ್ ಸಲಾಮ್' ಚಿತ್ರ; ವಿಶೇಷ ಪಾತ್ರದಲ್ಲಿ ನಟ ರಜಿನಿಕಾಂತ್

ತಮಿಳಿನ ಸೂಪರ್‌ಸ್ಟಾರ್ ರಜನಿಕಾಂತ್ ಅವರು ತಮ್ಮ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರ ಮುಂಬರುವ ಚಿತ್ರ 'ಲಾಲ್ ಸಲಾಮ್' ನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ಮಾಪಕರು ಶನಿವಾರ ಘೋಷಿಸಿದ್ದಾರೆ.

ಪುತ್ರಿ ಐಶ್ವರ್ಯಾ ನಿರ್ದೇಶನದ 'ಲಾಲ್ ಸಲಾಮ್' ಚಿತ್ರ; ವಿಶೇಷ ಪಾತ್ರದಲ್ಲಿ ನಟ ರಜಿನಿಕಾಂತ್
ಲಾಲ್ ಸಲಾಮ್ ಚಿತ್ರದ ಪೋಸ್ಟರ್ - ನಟ ರಜನಿಕಾಂತ್
Published On :

ಚೆನ್ನೈ: ತಮಿಳಿನ ಸೂಪರ್‌ಸ್ಟಾರ್ ರಜನಿಕಾಂತ್ ಅವರು ತಮ್ಮ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರ ಮುಂಬರುವ ಚಿತ್ರ 'ಲಾಲ್ ಸಲಾಮ್' ನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ಮಾಪಕರು ಶನಿವಾರ ಘೋಷಿಸಿದ್ದಾರೆ.

ಈ ಚಿತ್ರವನ್ನು ಪ್ರಸಿದ್ಧ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿದ್ದು, ನಟರಾದ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಕುರಿತು ಲೈಕಾ ಪ್ರೊಡಕ್ಷನ್ಸ್ ಟ್ವೀಟ್ ಮಾಡಿದ್ದು, 'ಇಲ್ಲಿರುವ ಎಲ್ಲರಿಗೂ 'ಲಾಲ್ ಸಲಾಮ್'! ನಮ್ಮ ಮುಂದಿನ ಸಿನಿಮಾವನ್ನು ಘೋಷಿಸಲು ನಾವು ತುಂಬಾ ಸಂತೋಷಪಡುತ್ತೇವೆ. ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟ ಸೂಪರ್‌ಸ್ಟಾರ್ ರಜನಿಕಾಂತ್ ಕಾಣಿಸಿಕೊಳ್ಳಲಿದ್ದಾರೆ!. ಚಿತ್ರವನ್ನು ಐಶ್ವರ್ಯಾ ರಜನಿಕಾಂತ್ ನಿರ್ದೇಶಿಸಿದ್ದಾರೆ ಮತ್ತು ವಿಶಾಲ್ ವಿಷ್ಣು ಮತ್ತು ವಿಕ್ರಾಂತ್ ನಾಯಕರಾಗಿದ್ದಾರೆ. ಚಿತ್ರಕ್ಕೆ ಎ. ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ' ಎಂದು ತಿಳಿಸಿದೆ.

ಈ ಹಿಂದೆ, ರಜನಿಕಾಂತ್ ಅವರು ಲೈಕಾ ಪ್ರೊಡಕ್ಷನ್ಸ್‌ನೊಂದಿಗೆ ಎರಡು ಚಿತ್ರಗಳ ಒಪ್ಪಂದವನ್ನು ಮಾಡಿಕೊಂಡಿದ್ದಾರೆ ಎಂದು ಐಎಎನ್‌ಎಸ್ ವರದಿ ಮಾಡಿತ್ತು. ಸೂಪರ್ ಸ್ಟಾರ್ ಸಹಿ ಮಾಡಿರುವ ಎರಡು ಚಿತ್ರಗಳಲ್ಲಿ 'ಲಾಲ್ ಸಲಾಮ್' ಕೂಡ ಒಂದು ಎನ್ನಲಾಗಿದೆ.

ಗಲಭೆಗಳು ಸಂಭವಿಸುತ್ತಿರುವ ಸ್ಥಳದಲ್ಲಿ ಕ್ರಿಕೆಟ್ ಹೆಲ್ಮೆಟ್ ಅನ್ನು ಮೇಲೆತ್ತಿರುವುದನ್ನು ತೋರಿಸುವ ಚಿತ್ರದ ಪೋಸ್ಟರ್ ಅನ್ನು ಸಹ ನಿರ್ಮಾಣ ಸಂಸ್ಥೆ ಬಿಡುಗಡೆ ಮಾಡಿದೆ.

ಕುತೂಹಲಕಾರಿ ವಿಚಾರವೆಂದರೆ, ಚಿತ್ರದಲ್ಲಿ ನಾಯಕರಾಗಿ ನಟಿಸಲು ಆಯ್ಕೆಯಾಗಿರುವ ನಟರಾದ ವಿಕ್ರಾಂತ್ ಮತ್ತು ವಿಷ್ಣು ವಿಶಾಲ್ ಉತ್ತಮ ಕ್ರಿಕೆಟಿಗರು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.