ಸಿನಿಮಾ ಸುದ್ದಿ

'ನೀ ಮಾಯೆಯೊಳಗೊ ಮಾಯೆ ನಿನ್ನೊಳಗೊ' ನವೆಂಬರ್ 4ಕ್ಕೆ ಬಿಡುಗಡೆ

ಸುನೀಲ್ ಕುಮಾರ್ ಬಸವಂತಪ್ಪ ಅವರ ಚೊಚ್ಚಲ ನಿರ್ದೇಶನದ 'ನೀ ಮಾಯೆಯೊಳಗೊ ಮಾಯೆ ನೀನೊಳಗೊ' ಚಿತ್ರ ನವೆಂಬರ್ 4 ರಂದು ಬಿಡುಗಡೆಯಾಗಲಿದೆ.

'ನೀ ಮಾಯೆಯೊಳಗೊ ಮಾಯೆ ನಿನ್ನೊಳಗೊ' ನವೆಂಬರ್ 4ಕ್ಕೆ ಬಿಡುಗಡೆ
ನಿರ್ದೇಶಕ ಸುನೀಲ್ ಕುಮಾರ್
Published On :

ಸುನೀಲ್ ಕುಮಾರ್ ಬಸವಂತಪ್ಪ ಅವರ ಚೊಚ್ಚಲ ನಿರ್ದೇಶನದ 'ನೀ ಮಾಯೆಯೊಳಗೊ ಮಾಯೆ ನೀನೊಳಗೊ' ಚಿತ್ರ ನವೆಂಬರ್ 4 ರಂದು ಬಿಡುಗಡೆಯಾಗಲಿದೆ.

ಚಿತ್ರವು ಚಿತ್ರ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಒಳಗೊಂಡಿದೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಜೊತೆಗೆ ಚೇತನ್ ಗಂದರ್ವ ಹಾಡಿರುವ ‘ಹೇ ಯಾ’ ಹಾಗೂ ಸಖತ್ ಸಿನಿಮಾ ಖ್ಯಾತಿಯ ಪಂಚಮ್ ಜೀವ ಹಾಡಿರುವ ‘ತಂದಾರಿ ನಾರೇ’ ಹಾಡುಗಳು ಬಿಡುಗಡೆಯಾಗಿ ಕೇಳುಗರ ಮನಸೂರೆ ಗೊಂಡಿವೆ.

ಈ ಎರಡೂ ಹಾಡುಗಳಿಗೆ ನಿರ್ದೇಶಕ ಸುನೀಲ್ ಕುಮಾರ್ ಬಸವಂತಪ್ಪ ಸಾಹಿತ್ಯ ಬರೆದಿದ್ದು, ಬಿಡುಗಡೆಗೂ ಮುನ್ನವೇ ಮೆಲ್ಬರ್ನ್ ಹಾಗೂ ಬೆಂಗಳೂರಿನಲ್ಲಿ ಪ್ರೀಮಿಯರ್ ಆಗಿರುವ ಈ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿ, ಚಿತ್ರತಂಡಕ್ಕೆ ಹೊಸ ಭರವಸೆ ನೀಡಿದೆ.

ಹೊಸ ಪ್ರತಿಭೆಗಳಿಂದ ಕೂಡಿರುವ ಈ ಚಿತ್ರವನ್ನು ಧ್ವನಿ ಸಿನಿ ಕ್ರಿಯೇಷನ್ನಡಿ ದರ್ಶನ್ ರಾಘವಯ್ಯ ನಿರ್ಮಾಣ ಮಾಡಿದ್ದು, ಮುಖ್ಯ ಪಾತ್ರದಲ್ಲಿಯೂ ನಟಿಸಿದ್ದಾರೆ.

ಉಳಿದಂತೆ ಬಾಲರಾಜ್ ವಾಡಿ, ಮನಸ್ ಗೇಬ್ರಿಯಲ್, ರೇವತಿ ಹೊಳ್ಳ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಂತ್ ಬದ್ರಿ ಛಾಯಾಗ್ರಹಣ, ಯತೀಶ್ ವೈಡಿ ಸಂಕಲನ, ಶ್ರೀಹರಿ ಸಂಗೀತ ಚಿತ್ರಕ್ಕಿದೆ. ಕಥೆ, ಚಿತ್ರಕಥೆ, ಸಾಹಿತ್ಯ ಸಂಭಾಷಣೆ ಬರೆದಿರುವ ನಿರ್ದೇಶಕ ಸುನೀಲ್ ಕುಮಾರ್ ಕೂಡ ಪ್ರಮುಖ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.