ಸಿನಿಮಾ ಸುದ್ದಿ

'ನಮ್ ನಾನಿ ಮದ್ವೆ ಪ್ರಸಂಗ' ಚಿತ್ರೀಕರಣ ಪೂರ್ಣಗೊಳಿಸಿದ ಹೇಮಂತ್ ಹೆಗಡೆ

ಹೌಸ್‌ಫುಲ್ ಮತ್ತು ನಿಂಬೆಹುಲಿ ಚಿತ್ರಗಳ ನಿರ್ದೇಶಕ ಹೇಮಂತ್ ಹೆಗಡೆ ತಮ್ಮ ಮುಂದಿನ ಚಿತ್ರ ನಮ್ ನಾನಿ ಮದ್ವೆ ಪ್ರಸಂಗ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಚಿತ್ರದ ಕೆಲವು ಸ್ಟಿಲ್ ಗಳನ್ನು ಹಂಚಿಕೊಂಡಿದ್ದಾರೆ.

'ನಮ್ ನಾನಿ ಮದ್ವೆ ಪ್ರಸಂಗ' ಚಿತ್ರೀಕರಣ ಪೂರ್ಣಗೊಳಿಸಿದ ಹೇಮಂತ್ ಹೆಗಡೆ
ಹೇಮಂತ್ ಹೆಗಡೆ
Published On :

ಹೌಸ್‌ಫುಲ್ ಮತ್ತು ನಿಂಬೆಹುಲಿ ಚಿತ್ರಗಳ ನಿರ್ದೇಶಕ ಹೇಮಂತ್ ಹೆಗಡೆ ತಮ್ಮ ಮುಂದಿನ ಚಿತ್ರ ನಮ್ ನಾನಿ ಮದ್ವೆ ಪ್ರಸಂಗ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಚಿತ್ರದ ಕೆಲವು ಸ್ಟಿಲ್ ಗಳನ್ನು ಹಂಚಿಕೊಂಡಿದ್ದಾರೆ.

ನಮ್ ನಾನಿ ಮದ್ವೆ ಪ್ರಸಂಗ ಕಾಮಿಡಿ ಡ್ರಾಮಾ ಚಿತ್ರವಾಗಿದೆ. ಉತ್ತರ ಕನ್ನಡದ ಸ್ಥಳೀಯತೆಯನ್ನು ಹೊರತಂದಿರುವ ಮೊದಲ ಕನ್ನಡ ಚಿತ್ರ ಇದಾಗಿದ್ದು, ಯಕ್ಷಗಾನದಂತಹ ಸ್ಥಳೀಯ ಕಲೆಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ವಿವಾಹಕ್ಕೆ ಯುವತಿಯರ ಹುಡುಕಲು ಇಲ್ಲಿನ ರೈತರು ಇಂದಿಗೂ ಸಂಕಷ್ಟ ಪಡುತ್ತಿದ್ದು, ಅದನ್ನೂ ಚಿತ್ರದಲ್ಲಿ ವಿವರಿಸಲಾಗಿದೆ. ಕೆಲ ನೈಜ ಘಟನೆಗಳನ್ನು ಕಾಮಿಡಿ ರೀತಿಯಲ್ಲಿ ಜನರ ಮನಸ್ಸು ತಟ್ಟುವಂತೆ ಮಾಡಲಾಗಿದೆ ಎಂದು ಹೇಮಂತ್ ಹೇಳಿದ್ದಾರೆ.

ಚಿತ್ರ ನಿರ್ದೇಶನದ ಜೊತೆಗೆ ಹೇಮಂತ್ ಹೆಗಡೆಯವರು ಗೀತಾಂಜಲಿ ಮಂಗಲ್, ಶ್ರುತಿ ನಂದೀಶ್, ಪದ್ಮಜಾ ರಾವ್, ರಾಜೇಶ್ ನಟರಂಗ, ಗಿರಿ ಶಿವಪ್ಪ ಮತ್ತು ಮಧು ಹೆಗಡೆ ಜೊತೆಯಲ್ಲಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಕೃಷ್ಣ ಭಂಜನ್ ಅವರ ಛಾಯಾಗ್ರಹಣವಿದ್ದು, ವಿ ಮನೋಹರ್ ಮತ್ತು ರವಿ ಮುರೂರ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.