ಶಶಾಂಕ್ ನಿರ್ದೇಶನದ ಪ್ರೇಮಕಥೆ 'ಲವ್ 360' ಆಗಸ್ಟ್ 19ರಂದು ತೆರೆಗೆ
ನಿರ್ದೇಶಕ ಶಶಾಂಕ್ ಅವರು ನಿರ್ದೇಶಿಸಿದ್ದ ಯಶ್, ರಾಧಿಕಾ ಪಂಡಿತ್, ಶುಭಾ ಪೂಂಜಾ ಅಭಿನಯದ ಲವ್ ಸ್ಟೋರಿ 'ಮೊಗ್ಗಿನ ಮನಸ್ಸು' ಬಿಡುಗಡೆಯಾಗಿ 14 ವರ್ಷಗಳು ಕಳೆದಿವೆ. ಇದೀಗ ನಿರ್ದೇಶಕರು ಮತ್ತೊಂದು ಪ್ರೇಮಕಥೆ ಚಿತ್ರ 'ಲವ್ 360' ಬಿಡುಗಡೆಗೆ ಕಾತರರಾಗಿದ್ದಾರೆ. ಮುಂದಿನ ತಿಂಗಳು ಆಗಸ್ಟ್ 19ರಂದು ತೆರೆಗೆ ಬರಲಿದೆ.

ಬೆಂಗಳೂರು: ನಿರ್ದೇಶಕ ಶಶಾಂಕ್ ಅವರು ನಿರ್ದೇಶಿಸಿದ್ದ ಯಶ್, ರಾಧಿಕಾ ಪಂಡಿತ್, ಶುಭಾ ಪೂಂಜಾ ಅಭಿನಯದ ಲವ್ ಸ್ಟೋರಿ 'ಮೊಗ್ಗಿನ ಮನಸ್ಸು' ಬಿಡುಗಡೆಯಾಗಿ 14 ವರ್ಷಗಳು ಕಳೆದಿವೆ. ಇದೀಗ ನಿರ್ದೇಶಕರು ಮತ್ತೊಂದು ಪ್ರೇಮಕಥೆ ಚಿತ್ರ 'ಲವ್ 360' ಬಿಡುಗಡೆಗೆ ಕಾತರರಾಗಿದ್ದಾರೆ. ಮುಂದಿನ ತಿಂಗಳು ಆಗಸ್ಟ್ 19ರಂದು ತೆರೆಗೆ ಬರಲಿದೆ.
ಧನಂಜಯ್-ರಚಿತಾ ರಾಮ್ ಅವರ ಮಾನ್ಸೂನ್ ರಾಗ ಚಿತ್ರ ಬಿಡುಗಡೆ ದಿನವೇ ಈ ಚಿತ್ರ ಕೂಡ ತೆರೆಗೆ ಬರುತ್ತಿದೆ. ಹೊಸ ನಾಯಕ-ಪ್ರವೀಣ್ ಮತ್ತು ಲವ್ ಮಾಕ್ಟೇಲ್ ಖ್ಯಾತಿಯ ರಚನಾ ಇಂದರ್ ನಾಯಕಿಯಾಗಿ ನಟಿಸಿದ್ದಾರೆ, ಲವ್ 360 ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರವಾಗಿದೆ.
ಇದನ್ನೂ ಓದಿ: ಶಶಾಂಕ್ ಹೊಸ ಸಿನೆಮಾ 'ಲವ್ 360' ನಾಯಕಿ ರಚನಾ ಇಂದರ್
ನಿರ್ದೇಶಕ ಶಶಾಂಕ್ ಪ್ರಕಾರ, ಹುಡುಗ-ಹುಡುಗಿಯ ಪ್ರೇಮಕಥೆ ಇದಾಗಿದ್ದು, ಎಲ್ಲಾ ಸಂದರ್ಭಗಳಲ್ಲಿ ಹೇಗೆ ಪರಸ್ಪರ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬುದನ್ನು ಕಥೆ ಒಳಗೊಂಡಿದೆ. ಲವ್ 360 ಒಂದು ಕಾಲ್ಪನಿಕ ಕಥೆಯಾಗಿದೆ ಎಂದಷ್ಟೇ ಹೇಳಿದರು. ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಅಭಿಲಾಷ್ ಕಲಾತಿ ಅವರ ಛಾಯಾಗ್ರಹಣವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


