'ಜೇಮ್ಸ್' ಖ್ಯಾತಿಯ ಚೇತನ್ ಕುಮಾರ್ ಹೊಸ ಸಿನಿಮಾ ಘೋಷಣೆ :'ರೇಮೊ' ಇಶಾನ್‌ಗೆ ಆ್ಯಕ್ಷನ್ ಕಟ್!
ಬಹದ್ದೂರ್, ಭರ್ಜರಿ, ಮತ್ತು ಪುನೀತ್ ರಾಜ್‌ಕುಮಾರ್ ಅವರ ಜೇಮ್ಸ್‌ನಂತಹ ಹಿಟ್ ಚಿತ್ರಗಳ ನಿರ್ದೇಶಕ ಚೇತನ್ ಕುಮಾರ್ ಈಗ ರೆಮೋ ಹೀರೋ ಇಶಾನ್ ಜೊತೆ ರೊಮ್ಯಾಂಟಿಕ್ ಸಿನಿಮಾ ಘೋಷಿಸಿದ್ದಾರೆ.

ಬಹದ್ದೂರ್, ಭರ್ಜರಿ, ಮತ್ತು ಪುನೀತ್ ರಾಜ್‌ಕುಮಾರ್ ಅವರ ಜೇಮ್ಸ್‌ನಂತಹ ಹಿಟ್ ಚಿತ್ರಗಳ ನಿರ್ದೇಶಕ ಚೇತನ್ ಕುಮಾರ್ ಈಗ ರೆಮೋ ಹೀರೋ ಇಶಾನ್ ಜೊತೆ ರೊಮ್ಯಾಂಟಿಕ್ ಸಿನಿಮಾ ಘೋಷಿಸಿದ್ದಾರೆ.
ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಸಿನಿಮಾ 'ಜೇಮ್ಸ್'ಗೆ ನಿರ್ದೇಶನ ಮಾಡಿದ್ದವರು ಚೇತನ್ ಕುಮಾರ್. ಸ್ಯಾಂಡಲ್‌ವುಡ್‌ನಲ್ಲಿ ಬಹದ್ದೂರ್, ಭರ್ಜರಿಯಂತಹ ಮಾಸ್ ಕಮರ್ಷಿಯಲ್ ಸಿನಿಮಾ ಮಾಡಿ ಖ್ಯಾತಿ ಪಡೆದಿರುವ ಚೇತನ್, 'ಜೇಮ್ಸ್' ನಂತರ ಯಾವ ಸಿನಿಮಾವನ್ನೂ ಘೋಷಣೆ ಮಾಡಿರಲಿಲ್ಲ. ಆದರೆ ಈಗ ಹೊಸ ಸಿನಿಮಾವನ್ನು ಚೇತನ್ ಕುಮಾರ್ ಘೋಷಣೆ ಮಾಡಿದ್ದಾರೆ.

ಪುರಿ ಜಗನ್ನಾಥ್ ನಿರ್ದೇಶನದ 'ರೋಗ್' ಸಿನಿಮಾದ ಮೂಲಕ ಕನ್ನಡ ಮತ್ತು ತೆಲುಗು ಚಿತ್ರರಂಗಕ್ಕೆ ಏಕಕಾಲಕ್ಕೆ ಎಂಟ್ರಿ ನೀಡಿದ ಸ್ಯಾಂಡಲ್‌ವುಡ್ ನಟ ಇಶಾನ್, ಆನಂತರ ಪವನ್ ಒಡೆಯರ್ ನಿರ್ದೇಶದನ 'ರೇಮೊ' ಸಿನಿಮಾದಲ್ಲೂ ನಟಿಸಿದ್ದಾರೆ. ಮ್ಯೂಸಿಕಲ್ ಲವ್ ಸ್ಟೋರಿ ಹೊಂದಿರುವ ಆ ಸಿನಿಮಾ ಇನ್ನಷ್ಟೇ ತೆರೆಗೆ ಬರಬೇಕಿದೆ. ಈ ಮಧ್ಯೆ 'ಬಹದ್ದೂರ್' ಚೇತನ್ ಅವರ ಹೊಸ ಸಿನಿಮಾಗೂ ಇಶಾನ್ ಆಯ್ಕೆಯಾಗಿದ್ದಾರೆ.
ಜುಲೈ 17ರಂದು 'ಜೇಮ್ಸ್' ಸಿನಿಮಾವು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಕೂಡ ಆಯಿತು. ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಮಾರ್ಚ್ 17ರಂದು 'ಜೇಮ್ಸ್' ಸಿನಿಮಾ ತೆರೆಕಂಡಿತ್ತು. ಆದರೆ ಆ ಸಿನಿಮಾ ರಿಲೀಸ್ ಆಗಿ 4 ತಿಂಗಳು ಕಳೆದರೂ, ಹೊಸ ಸಿನಿಮಾವನ್ನು ಚೇತನ್ ಕುಮಾರ್ ಯಾರೊಂದಿಗೆ ಮಾಡಲಿದ್ದಾರೆ ಎಂಬ ಬಗ್ಗೆ ಮಾಹಿತಿ ಹೊರಬಿದ್ದಿರಲಿಲ್ಲ. ಇಶಾನ್-ಚೇತನ್ ಚಿತ್ರದ ಹೆಚ್ಚಿನ ವಿವರಗಳು ಶೀಘ್ರದಲ್ಲೇ ಬಹಿರಂಗಗೊಳ್ಳಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


