ವಿಕ್ರಾಂತ್ ರೋಣ: 'ಹೇ ಫಕೀರಾ' ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ
ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ 'ವಿಕ್ರಾಂತ್ ರೋಣ' ಚಿತ್ರದ ಮತ್ತೊಂದು ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ರಾ..ರಾ.. ರುಕ್ಕಮ್ಮ, ರಾಜಕುಮಾರಿ ಸಾಂಗ್ ನಂತರ ಇದೀಗ 'ಹೇ ಫಕೀರಾ ಲಿರಿಕಲ್ ವಿಡಿಯೋ ಸಾಂಗ್ ಇಂದು ಹೊರಗೆ ಬಂದಿದೆ.

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ 'ವಿಕ್ರಾಂತ್ ರೋಣ' ಚಿತ್ರದ ಮತ್ತೊಂದು ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ರಾ..ರಾ.. ರುಕ್ಕಮ್ಮ, ರಾಜಕುಮಾರಿ ಸಾಂಗ್ ನಂತರ ಇದೀಗ 'ಹೇ ಫಕೀರಾ ಲಿರಿಕಲ್ ವಿಡಿಯೋ ಸಾಂಗ್ ಇಂದು ಹೊರಗೆ ಬಂದಿದೆ.
Presenting the next track #HeyFakira from #VikrantRona.https://t.co/bxfQl8JwwD#VRonJuly28 @anupsbhandari @JackManjunath @AJANEESHB @nirupbhandari @Sanjheg @Chinmayi #VikrantRona pic.twitter.com/u815bdYwqU
ಈ ಸಾಂಗ್ ನಲ್ಲಿ ಮಾಲಾಶ್ರೀ ಕೂಡಾ ಕಾಣಿಸಿಕೊಂಡಿದ್ದು, ಅಭಿಮಾನಿಗಳ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅನೂಪ್ ಭಂಡಾರಿ ಸಾಹಿತ್ಯವಿರುವ ಈ ಸಾಂಗ್ ಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಶಾಲಿನಿ ಆರ್ಟ್ಸ್ ಬ್ಯಾನರ್ ಅಡಿ ಜಾಕ್ ಮಂಜು ಚಿತ್ರ ನಿರ್ಮಾಣ ಮಾಡಿದ್ದು, ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಪಕರಾಗಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾ ಜುಲೈ 28ರಂದು ತೆರೆಗೆ ಬರುತ್ತಿದೆ. ವಿಕ್ರಾಂತ್ ರೋಣ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಸುದೀಪ್, ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ, ನೀತಾ ಅಶೋಕ್ ನಟಿಸಿದ್ದು ವಿವಿಧ ಭಾಷೆಗಳಿಗೆ ಡಬ್ ಆಗಿದೆ. 3ಡಿ ಅವತರಣಿಕೆಯಲ್ಲಿ ಈ ಚಿತ್ರ ಮೂಡಿಬರುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


