'ಏಕೆ ಬಾಸ್ ಬಾಸ್ ಅಂತಾ ಒದ್ದಾಡ್ತೀರಾ, ಎಲ್ಲರಿಗೂ ಬಾಸ್ ಒಬ್ಬರೇ ಅದು ದೇವರು': ಶಿವರಾಜ್ ಕುಮಾರ್
ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರ ಅಭಿಮಾನಿಗಳು ಆಗಾಗ ಬಾಸ್ ವಿಚಾರದಲ್ಲಿ ಕಿತ್ತಾಡಿಕೊಳ್ಳುತ್ತಿರುತ್ತಾರೆ. ಸ್ಯಾಂಡಲ್ ವುಡ್ ನ ಬಾಸ್ ಯಾರು ಎಂಬ ವಿಷಯದಲ್ಲಿ ಆಗಾಗ ಫ್ಯಾನ್ಸ್ ವಾರ್ ನಡೆಯುತ್ತಿರುತ್ತದೆ. ಬಾಸ್ ಬಿರುದಿಗಾಗಿ ಅಭಿಮಾನಿಗಳ ಮಧ್ಯೆ ಕಿತ್ತಾಟ ನಡೆದೇ ಇದೆ.

ಮೈಸೂರು: ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರ ಅಭಿಮಾನಿಗಳು ಆಗಾಗ ಬಾಸ್ ವಿಚಾರದಲ್ಲಿ ಕಿತ್ತಾಡಿಕೊಳ್ಳುತ್ತಿರುತ್ತಾರೆ. ಸ್ಯಾಂಡಲ್ ವುಡ್ ನ ಬಾಸ್ ಯಾರು ಎಂಬ ವಿಷಯದಲ್ಲಿ ಆಗಾಗ ಫ್ಯಾನ್ಸ್ ವಾರ್ ನಡೆಯುತ್ತಿರುತ್ತದೆ. ಬಾಸ್ ಬಿರುದಿಗಾಗಿ ಅಭಿಮಾನಿಗಳ ಮಧ್ಯೆ ಕಿತ್ತಾಟ ನಡೆದೇ ಇದೆ.
ಇದಕ್ಕೆ ನಿನ್ನೆ ಮೈಸೂರಿನಲ್ಲಿ ನಟ ಶಿವರಾಜ್ಕುಮಾರ್ (Shivarajkumar) ನೇರವಾಗಿ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರದಲ್ಲಿ ಜಗಳ ಮಾಡಿಕೊಳ್ಳುವ ಅಭಿಮಾನಿಗಳಿಗೆ ಶಿವರಾಜ್ ಕುಮಾರ್ ಬುದ್ದಿವಾದ ಹೇಳಿದಂತಿದೆ ಅವರ ಮಾತುಗಳು.
ಮೈಸೂರಿನ ಇಟ್ಟಿಗೆಗೂಡು ಬಡಾವಣೆಯಲ್ಲಿ ನಿನ್ನೆ ಡಾ. ರಾಜ್ಕುಮಾರ್ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಅವರು ಬಾಸ್ ಶಬ್ದ ಪ್ರಸ್ತಾಪವಾಯಿತು. ‘ಎಲ್ಲರಿಗೂ ಬಾಸ್ ಒಬ್ಬರೇ ಅದು ದೇವರು. ಏಕೆ ಬಾಸ್ ಬಾಸ್ ಅಂತಾ ಒದ್ದಾಡ್ತೀರಾ? ಎಲ್ಲರ ಮನೆಯಲ್ಲೂ ಒಬ್ಬೊಬ್ಬ ಬಾಸ್ ಇರುತ್ತಾನೆ. ಎಲ್ಲರ ಹೃದಯದಲ್ಲೂ ಒಬ್ಬ ಬಾಸ್ ಇರ್ತಾನೆ. ಮನೆಗೆ ಅವನೇ ಬಾಸ್. ನಾನೊಬ್ಬನೇ ಬಾಸ್ ಅಲ್ಲ’ ಎಂದಿದ್ದಾರೆ.
ಮೈಸೂರಿನ ರಿಫ್ರೆಶ್ಮೆಂಟ್ ಮಾಲೀಕ ವಿಶ್ವ ಎಂಬುವವರು ಈ ಕಾರ್ಯಕ್ರಮ ಆಯೋಜಿಸಿದ್ದರು. ಅಲ್ಲಿದ್ದ ಯುವಕನೋರ್ವ ‘ವಿಶ್ವ ಅವರನ್ನು ನಮ್ಮ ಬಾಸ್’ ಎಂದರು. ಯುವಕನಿಗೆ ಬಾಸ್ ಬಗ್ಗೆ ಶಿವಣ್ಣ ವಿವರಣೆ ನೀಡಿದ್ದಾರೆ. ಶಿವರಾಜ್ಕುಮಾರ್ ಮಾತಿಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕಳೆದ ವಾರವಷ್ಟೇ ತೆರೆಕಂಡ ಶಿವರಾಜ್ಕುಮಾರ್ ಅವರ ‘ವೇದ’ ಸಿನಿಮಾ ಗೆದ್ದು ವಿಮರ್ಶಕರ, ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


