ಅನುಶ್ರೀ ಮದುವೆಯಾದ ನಂತರವೇ ನನ್ನ ವಿವಾಹ: ಧನಂಜಯ್
ಆ್ಯಂಕರ್ ಅನುಶ್ರೀ ವಿವಾಹವಾದ ನಂತರವೇ ನನ್ನ ಮದುವೆಯಾಗುವುದು ಎಂದು ನಟ ಡಾಲಿ ಧನಂಜಯ್ ಹೇಳಿದ್ದಾರೆ. ನಟ ಧನಂಜಯ್ ಹಾಗೂ ಅದಿತಿ ಪ್ರಭುದೇವ ‘ಒನ್ಸ್ ಅಪಾನ ಎ ಟೈಮ್ ಇನ್ ಜಮಾಲಿ ಗುಡ್ಡ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಆ್ಯಂಕರ್ ಅನುಶ್ರೀ ವಿವಾಹವಾದ ನಂತರವೇ ನನ್ನ ಮದುವೆಯಾಗುವುದು ಎಂದು ನಟ ಡಾಲಿ ಧನಂಜಯ್ ಹೇಳಿದ್ದಾರೆ. ನಟ ಧನಂಜಯ್ ಹಾಗೂ ಅದಿತಿ ಪ್ರಭುದೇವ ‘ಒನ್ಸ್ ಅಪಾನ ಎ ಟೈಮ್ ಇನ್ ಜಮಾಲಿ ಗುಡ್ಡ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಈ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಹಿಂದೆಂದೂ ಮಾಡಿರದ ಪಾತ್ರದಲ್ಲಿ ಧನಂಜಯ್ ಅವರು ಕಾಣಿಸಿಕೊಂಡಿದ್ದಾರೆ ಎಂಬುದಕ್ಕೆ ಟ್ರೇಲರ್ ಸಾಕ್ಷ್ಯ ನೀಡಿದೆ. ಸದಾ ವಿಭಿನ್ನ ಪಾತ್ರಗಳ ಮೂಲಕ ಧನಂಜಯ್ ಅವರು ಗುರುತಿಸಿಕೊಳ್ಳುತ್ತಾರೆ. ಈಗ ಈ ಸಿನಿಮಾ ಮೂಲಕ ಅವರು ಮತ್ತೊಂದು ಪ್ರಯೋಗಾತ್ಮಕ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ಧನಂಜಯ್ ಅವರಿಗೆ ಅನುಶ್ರೀ ಅವರು ಮದುವೆ ಬಗ್ಗೆ ಪ್ರಶ್ನೆ ಮಾಡಿದರು.
ನಿಮ್ಮ ಗೆಳೆಯ ವಸಿಷ್ಠ ಸಿಂಹ ಇತ್ತೀಚೆಗೆ ಎಂಗೇಜ್ ಆದರು. ನಿಮ್ಮ ಮದುವೆ ಯಾವಾಗ’ ಎಂದು ಧನಂಜಯ್ಗೆ ವೇದಿಕೆ ಮೇಲೆ ಅನುಶ್ರೀ ಪ್ರಶ್ನೆ ಮಾಡಿದರು. ಈ ಪ್ರಶ್ನೆಗೆ ಧನಂಜಯ್ಗೆ ಏನು ಉತ್ತರಿಸಬೇಕು ಎಂಬುದು ತಿಳಿಯಲಿಲ್ಲ. ‘ಮದುವೆ ಆಗಬೇಕಾ?’ ಎಂದು ಫ್ಯಾನ್ಸ್ ಬಳಿ ಪ್ರಶ್ನೆ ಮಾಡಿದರು. ಬಳಿಕ ‘ಫ್ಯಾನ್ಸ್ ಬೇಡ ಎನ್ನುತ್ತಿದ್ದಾರೆ’ ಎಂದು ಧನಂಜಯ್ ಉತ್ತರಿಸಿದರು.
ಅನುಶ್ರೀ ಅವರೂ ಮದುವೆ ಆಗಿಲ್ಲ. ಅವರಿಗೂ ಈ ಬಗ್ಗೆ ಆಗಾಗ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಧನಂಜಯ್ ಅವರಿಗೂ ಇದು ನೆನಪಾಗಿದೆ. ‘ಅನುಶ್ರೀ ಮದುವೆ ಆಗುವ ಘೋಷಣೆ ಮಾಡಿದ ಬೆನ್ನಲ್ಲೇ ನಾನು ಮದುವೆ ಆಗುತ್ತೇನೆ’ ಎಂದು ಘೋಷಣೆ ಮಾಡಿದರು. ‘ನೀವು ತುಂಬಾ ಸಮಯ ಕಾಯಬೇಕಾಗುತ್ತದೆ’ ಎಂದು ಅನುಶ್ರೀ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


