'ಹೊಸ ದಿನಚರಿ' ಬಿಡುಗಡೆಗೆ ಡೇಟ್ ಫಿಕ್ಸ್
ಹೊಸ ದಿನಚರಿ ಸಿನಿಮಾ ರಿಲೀಸ್ ಗೆ ಡೇಟ್ ಫಿಕ್ಸ್ ಆಗಿದೆ. ಶಿವರಾಜ್ ಕುಮಾರ್ ನಟನೆಯ ವೇದ ಸಿನಿಮಾ ಡಿಸೆಂಬರ್ 23 ರಂದು ರಿಲೀಸ್ ಆಗುತ್ತಿದ್ದು ಅದೇ ಹೊಸ ದಿನಚರಿ ಸಿನಿಮಾ ಕೂಡ ಬಿಡುಗಡೆಯಾಗುತ್ತಿದೆ.

ಹೊಸ ದಿನಚರಿ ಸಿನಿಮಾ ರಿಲೀಸ್ ಗೆ ಡೇಟ್ ಫಿಕ್ಸ್ ಆಗಿದೆ. ಶಿವರಾಜ್ ಕುಮಾರ್ ನಟನೆಯ ವೇದ ಸಿನಿಮಾ ಡಿಸೆಂಬರ್ 23 ರಂದು ರಿಲೀಸ್ ಆಗುತ್ತಿದ್ದು ಅದೇ ಹೊಸ ದಿನಚರಿ ಸಿನಿಮಾ ಕೂಡ ಬಿಡುಗಡೆಯಾಗುತ್ತಿದೆ.
ಶೂಲಿನ್ ಮೀಡಿಯಾ ಹೌಸ್ ಸಹಯೋಗದೊಂದಿಗೆ ಡೀಸ್ ಫಿಲ್ಮ್ಸ್ ಬೆಂಬಲಿತ ಈ ರೋಮ್ಯಾಂಟಿಕ್ ನಾಟಕವು ನಿರ್ದೇಶಕ ಜೋಡಿ ಕೀರ್ತಿ ಶೇಖರ್ ಮತ್ತು ವೈಶಾಕ್ ಪುಷ್ಪಲತಾ ಅವರ ಚೊಚ್ಚಲ ಚಿತ್ರವಾಗಿದೆ.
ಹೊಸ ಪ್ರತಿಭೆಗಳ ತಂಡವನ್ನೊಳಗೊಂಡಿರುವ ಹೊಸ ದಿನಚಾರಿ ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿ ಪ್ರೇಮದ ಬೆಸುಗೆಯ ಬಗ್ಗೆ ಚಿತ್ರವು ಹೆಣೆದುಕೊಂಡಿದೆ.
ನಾಲ್ಕು ಸಮಾನಾಂತರ ಕಥೆಗಳನ್ನು ಹೊಂದಿದೆ, ವಿವಿಧ ವಯಸ್ಸಿನ ಗುಂಪುಗಳಲ್ಲಿ ಪ್ರೀತಿಯನ್ನು ತಿಳಿಸುತ್ತದೆ ಎಂದು ಕೀರ್ತಿ ಶೇಖರ್ ಹೇಳಿದ್ದಾರೆ. ಇದನ್ನು ನೋಡುವ ಜನರು ಚಲನಚಿತ್ರದ ಅನೇಕ ಪಾತ್ರಗಳಲ್ಲಿ ಒಂದಕ್ಕಾದರೂ ಸಂಪರ್ಕ ಹೊಂದುತ್ತಾರೆ ಎಂದು ಅವರು ಹೇಳುತ್ತಾರೆ.
ತಾರಾಗಣದಲ್ಲಿ ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್, ದೀಪಕ್ ಸುಬ್ರಹ್ಮಣ್ಯ, ಚೇತನ್ ವಿಕ್ಕಿ, ಮಂದಾರ ಬಟ್ಟಲಹಳ್ಳಿ ಕವಿತಾ ಮತ್ತು ಬೇಬಿ ಮಾನಿನಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಕಿ ಛಾಯಾಗ್ರಹಣ ನಿರ್ವಹಿಸುತ್ತಿದ್ದು, ವೈಶಾಕ್ ವರ್ಮಾ ಹೊಸ ದಿನಚರಿಗೆ ಹಾಡುಗಳನ್ನು ಬರೆದು ಸಂಗೀತ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


