ಎರಡು ದಶಕಗಳ ನಂತರ ಮಾರ್ಷಲ್ ಆರ್ಟ್ಸ್ ಅಭ್ಯಾಸ ಮಾಡುತ್ತಿದ್ದಾರೆ ಪವನ್ ಕಲ್ಯಾಣ್
'ಹರಿ ಹರ ವೀರಮಲ್ಲು' ಚಿತ್ರದಲ್ಲಿ ಬ್ಯುಸಿಯಾಗಿರುವ ತೆಲುಗಿನ ಸೂಪರ್ ಸ್ಟಾರ್ ಮತ್ತು ರಾಜಕಾರಣಿ ಪವನ್ ಕಲ್ಯಾಣ್ ಎರಡು ದಶಕಗಳ ನಂತರ ಸಮರ ಕಲೆಯನ್ನು ಅಭ್ಯಾಸ ಮಾಡಲು ಪ್ರಾರಂಭಿಸಿರುವುದಾಗಿ ಹೇಳಿದ್ದಾರೆ.

ಹೈದರಾಬಾದ್: 'ಹರಿ ಹರ ವೀರಮಲ್ಲು' ಚಿತ್ರದಲ್ಲಿ ಬ್ಯುಸಿಯಾಗಿರುವ ತೆಲುಗಿನ ಸೂಪರ್ ಸ್ಟಾರ್ ಮತ್ತು ರಾಜಕಾರಣಿ ಪವನ್ ಕಲ್ಯಾಣ್ ಎರಡು ದಶಕಗಳ ನಂತರ ಸಮರ ಕಲೆಯನ್ನು ಅಭ್ಯಾಸ ಮಾಡಲು ಪ್ರಾರಂಭಿಸಿರುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಪವನ್ ಟ್ವೀಟ್ ಮಾಡಿದ್ದು, ಅಲ್ಲಿ ಅವರು ಸಮರ ಕಲೆಗಳನ್ನು ಅಭ್ಯಾಸ ಮಾಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ, ಅವರು ಚೂರಿ ಹಿಡಿದಿರುವುದನ್ನು ಕಾಣಬಹುದು.
'ಎರಡು ದಶಕಗಳ ನಂತರ ನಾನು ನನ್ನ ಮಾರ್ಷಲ್ ಆರ್ಟ್ಸ್ ಅಭ್ಯಾಸಕ್ಕೆ ಬಂದೆ' ಎಂದು ಅವರು ಚಿತ್ರಕ್ಕೆ ಶೀರ್ಷಿಕೆ ನೀಡಿದ್ದಾರೆ. ಆದರೆ, ಕಾರಣವನ್ನು ಬಹಿರಂಗಪಡಿಸಿಲ್ಲ.
ಸಿನಿಮಾದಲ್ಲಿ ನಿಧಿ ಅಗರ್ವಾಲ್, ಅರ್ಜುನ್ ರಾಂಪಾಲ್ ಮತ್ತು ನರ್ಗೀಸ್ ಫಕ್ರಿ ಕೂಡ ನಟಿಸಿದ್ದಾರೆ. ಪವನ್ 900 ಜನರ ತಂಡದೊಂದಿಗೆ ಚಿತ್ರೀಕರಣ ನಡೆಸಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು.
‘ಹರಿ ಹರ ವೀರಮಲ್ಲು’ ಚಿತ್ರಕ್ಕೆ ಕ್ರಿಶ್ ಎಂದು ಜನಪ್ರಿಯವಾಗಿರುವ ರಾಧಾ ಕೃಷ್ಣ ಜಗರ್ಲಮುಡಿ ಮಾಡುತ್ತಿದ್ದು, ದಯಾಕರ್ ರಾವ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಪವನ್ ಕಲ್ಯಾಣ್ ಅವರ ಹುಟ್ಟುಹಬ್ಬದ ಮರುದಿನವೇ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿತ್ತು. ಒಂದು ನಿಮಿಷದ ಟೀಸರ್ ಸಂಪೂರ್ಣ ಮಾಸ್ ಆಗಿದ್ದು, ಪವನ್ ಕಲ್ಯಾಣ್ ತೊಡೆ ತಟ್ಟಿ ಮಿಂಚಿದ್ದಾರೆ. ಎಂ.ಎಂ. ಕೀರವಾಣಿ ಅವರ ಸಂಗೀತ ಗಮನ ಸೆಳೆದಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


