ಸಿನಿಮಾ ಸುದ್ದಿ

ಯಶ್ ಮುಂದಿನ ಚಿತ್ರಕ್ಕೆ ತಾವೇ ಬಂಡವಾಳ; ಮಗಳು ಐರಾ ಹೆಸರಲ್ಲಿ ನಿರ್ಮಾಣ ಸಂಸ್ಥೆ?

ಕೆಜಿಎಫ್ ಭರ್ಜರಿ ಯಶಸ್ಸಿನ ಬಳಿಕ ಮುಂದಿನ ಯೋಜನೆಯಲ್ಲಿ ತಲ್ಲೀನರಾಗಿರುವ ರಾಕಿಂಗ್ ಸ್ಟಾರ್ ಯಶ್ ಇದೀಗ ನಟನೆಯೊಂದಿಗೆ ನಿರ್ಮಾಣಕ್ಕೂ ಧುಮುಕಲಿದ್ದಾರೆ ಎನ್ನಲಾಗಿದೆ.

ಯಶ್ ಮುಂದಿನ ಚಿತ್ರಕ್ಕೆ ತಾವೇ ಬಂಡವಾಳ; ಮಗಳು ಐರಾ ಹೆಸರಲ್ಲಿ ನಿರ್ಮಾಣ ಸಂಸ್ಥೆ?
ನಟ ಯಶ್
Published On :

ಬೆಂಗಳೂರು: ಕೆಜಿಎಫ್ ಭರ್ಜರಿ ಯಶಸ್ಸಿನ ಬಳಿಕ ಮುಂದಿನ ಯೋಜನೆಯಲ್ಲಿ ತಲ್ಲೀನರಾಗಿರುವ ರಾಕಿಂಗ್ ಸ್ಟಾರ್ ಯಶ್ ಇದೀಗ ನಟನೆಯೊಂದಿಗೆ ನಿರ್ಮಾಣಕ್ಕೂ ಧುಮುಕಲಿದ್ದಾರೆ ಎನ್ನಲಾಗಿದೆ.

ಹೌದು.. ಕೆಜಿಎಫ್ 2 ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಯಶ್ ಇದೀಗ ನಟನೆಯೊಂದಿಗೆ ಚಿತ್ರ ನಿರ್ಮಾಣಕ್ಕೂ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮ ನಟನೆಯ ಮುಂದಿನ ಚಿತ್ರಕ್ಕೆ ಯಶ್ ಅವರೇ ಬಂಡವಾಳ ಹೂಡುತ್ತಿದ್ದು, ಇದಕ್ಕಾಗಿ ತಮ್ಮ ಮಗಳಾದ ಐರಾ ಅವರ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ತೆರೆಯಲಿದ್ದಾರೆ ಎನ್ನಲಾಗಿದೆ.

ಐರಾ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ನಿರ್ಮಾಣ ಆಗಲಿದ್ದು, ಯಶ್‌ ಆ ಸಂಸ್ಥೆಯ ಬ್ಯಾನರ್‌ನಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಕೆಜಿಎಫ್‌ ಸಿನಿಮಾ ಸಕ್ಸೆಸ್‌ ಆದ ಬಳಿಕ ಯಶ್‌ ಅವರು ಯಾವ ಸಿನಿಮಾ ಮಾಡಬಹುದು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಈ ಮೊದಲು ನರ್ತನ್ ಜತೆ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇತ್ತೀಚೆಗಷ್ಟೇ ಸದ್ಯ ಆ ಸಿನಿಮಾ ಆಗುವುದಿಲ್ಲ ಎನ್ನುವ ಸುದ್ದಿ ಹರಡಿದೆ. ನರ್ತನ್ ಕೂಡ ಮತ್ತೊಂದು ಸಿನಿಮಾ ತಯಾರಿಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಿ ಎಂಟು ತಿಂಗಳುಗಳು ಕಳೆದಿವೆ, ನಟ ಯಶ್ ಇನ್ನೂ ಅಧಿಕೃತವಾಗಿ ತಮ್ಮ ಮುಂದಿನ ಚಿತ್ರ ಖಚಿತಪಡಿಸಿಲ್ಲ.

ಇದೀಗ ಯಶ್‌ ಸಿನಿಮಾಗೆ ಅವರ ಮಗಳೇ ನಿರ್ಮಾಪಕಿಯಾಗುತ್ತಿದ್ದು, ಸಂಸ್ಥೆಗೆ ಬೇಕಿರುವ ಕೆಲಸಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಯಶ್ ತಮ್ಮ ಮುಂದಿನ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್‌ನಲ್ಲಿ  ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಈ ಸುದ್ದಿಯ ಬೆನ್ನಲ್ಲೇ ಕೆಜಿಎಫ್ 3 ಸಿನಿಮಾ ವಿಷಯ ಹೊರ ಬಂದಿತ್ತು. ಇದಕ್ಕೆ ಇಂಬು ನೀಡುವಂತೆ ಈ ಹಿಂದೆ ನಟ ಯಶ್ ಹಾಲಿವುಡ್ ಸಾಹಸ ನಿರ್ದೇಶಕ ಮತ್ತು ಸ್ಟಂಟ್‌ಮ್ಯಾನ್ ಜೆಜೆ ಪೆರ್ರಿ ಅವರೊಂದಿಗೆ ಶೂಟಿಂಗ್ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದರು. ಇದು ಯಶ್ ಕೆಜಿಎಫ್ 3ಗೆ ಸಿದ್ಧರಾಗುತ್ತಿದ್ದಾರೆ ಎಂದು ಹೇಳಲಾಗಿತ್ತು.  

ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಕೆಜಿಎಫ್ ನಿರ್ಮಾಪಕರು ಮತ್ತು ಯಶ್ ಅವರು ಪ್ರಸ್ತುತ ಕೆಜಿಎಫ್ ಚಾಪ್ಟರ್ 3 ಮಾಡುವ ಯೋಜನೆ ಹೊಂದಿಲ್ಲ ಎಂದು ಹೇಳಿದ್ದಾರೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.