ಕನ್ನಡದ ನಟಸೌರ್ವಭೌಮ ಚಿತ್ರದಲ್ಲಿ ನಟಿಸಿದ್ದ ನಟಿ ಅನುಪಮಾ ಪರಮೇಶ್ವರನ್‌ಗೆ ಕೋವಿಡ್ ದೃಢ!
ನಿಖಿಲ್ ಸಿದ್ಧಾರ್ಥ ಮತ್ತು ಅನುಪಮಾ ಪರಮೇಶ್ವರನ್ ಅಭಿನಯದ ಕಾರ್ತಿಕೇಯ 2 ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತಿದೆ. ಹೀಗಾಗಿ ಇಡೀ ಚಿತ್ರತಂಡ ಚಿತ್ರದ ಯಶಸ್ಸನ್ನು ಆಚರಿಸುವ ಗುಂಗಿನಲ್ಲಿದ್ದರೆ, ನಟಿ ಅನುಪಮಾ ಪರಮೇಶ್ವರನ್ ಅವರಿಗೆ ದುರದೃಷ್ಟವಶಾತ್ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮುಂಬೈ: ನಿಖಿಲ್ ಸಿದ್ಧಾರ್ಥ ಮತ್ತು ಅನುಪಮಾ ಪರಮೇಶ್ವರನ್ ಅಭಿನಯದ ಕಾರ್ತಿಕೇಯ 2 ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತಿದೆ. ಹೀಗಾಗಿ ಇಡೀ ಚಿತ್ರತಂಡ ಚಿತ್ರದ ಯಶಸ್ಸನ್ನು ಆಚರಿಸುವ ಗುಂಗಿನಲ್ಲಿದ್ದರೆ, ನಟಿ ಅನುಪಮಾ ಪರಮೇಶ್ವರನ್ ಅವರಿಗೆ ದುರದೃಷ್ಟವಶಾತ್ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಅನುಪಮಾ ಅವರು ಕಾರ್ತಿಕೇಯ 2ರ ಪ್ರಚಾರದ ಭಾಗವಾಗಿ ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಸುದೀರ್ಘ ಪ್ರವಾಸದಲ್ಲಿ ತೊಡಗಿದ್ದರು. ಆದಾಗ್ಯೂ, ಅವರು ತಮ್ಮ ಪ್ರಚಾರಗಳನ್ನು ಮುಗಿಸಿದ ಸುಮಾರು ಒಂದು ವಾರದ ನಂತರ, ಶೀತ ಮತ್ತು ಕೆಮ್ಮಿನಂತಹ ರೋಗಲಕ್ಷಣಗಳನ್ನು ಹೊಂದಲು ಪ್ರಾರಂಭಿಸಿದ್ದರು.
ಹೀಗಾಗಿ ಪರೀಕ್ಷೆಗೆ ಒಳಪಡಿಸಿದಾಗ ಆಕೆಗೆ ಕೊರೊನಾವೈರಸ್ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ.
ಪ್ರಚಾರದ ಸಮಯದಲ್ಲಿ ನಿಯಮಿತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಪಾಲ್ಗೊಂಡಿದ್ದಾಗ ಅವರಿಗೆ ವೈರಸ್ ತಗುಲಿದೆ ಎಂದು ವರದಿಯಾಗಿದೆ. ಸದ್ಯ ಅನುಪಮಾ ಮನೆಯಲ್ಲಿಯೇ ಪ್ರತ್ಯೇಕವಾಸದಲ್ಲಿದ್ದು, ಇತ್ತೀಚಿನ ವರದಿಗಳ ಪ್ರಕಾರ, ಅವರು ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಅನುಪಮಾ ಪರಮೇಶ್ವರನ್ ತೆಲುಗು ಚಿತ್ರರಂಗದಲ್ಲಿ ಶತಮಾನಂ ಭವತಿ ಮತ್ತು ಪ್ರೇಮಂನಂತಹ ಚಲನಚಿತ್ರಗಳ ಮೂಲಕ ಸ್ಟಾರ್‌ಗಿರಿ ದಕ್ಕಿಸಿಕೊಂಡವರು. ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಬಟರ್‌ಫ್ಲೈನಲ್ಲಿ, ಸತೀಶ್ ಕಾಸೆಟ್ಟಿ ನಿರ್ದೇಶನದ ಮರೀಚಿಕಾ ಮತ್ತು ನಿಖಿಲ್ ಜೊತೆಗಿನ 18 ಪೇಜಸ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


