'ಗುರು-ಶಿಷ್ಯರು' ಸಿನಿಮಾದ 'ಗುರುಗಳು ನಮ್ಮ ಗುರುಗಳು' ಟ್ರ್ಯಾಕ್ ಮೂಲಕ ಶಿಕ್ಷಕರಿಗೆ ಗೌರವ ಸಮರ್ಪಣೆ!
ಗುರು ಶಿಷ್ಯರು ಚಿತ್ರದ ಮೊದಲ ಆಣೆ ಮಾಡಿ ಹೇಳುತೇನಿ ಹಾಡು ಕೇಳುಗರಿಗೆ ಪ್ರಿಯವಾಗುತ್ತಿರುವಂತೆಯೇ, ನಿರ್ಮಾಪಕರು ಚಿತ್ರದ ಎರಡನೇ ಟ್ರ್ಯಾಕ್ ರಿಲೀಸ್ ಮಾಡಿದ್ದಾರೆ.

ಗುರು ಶಿಷ್ಯರು ಚಿತ್ರದ ಮೊದಲ ಆಣೆ ಮಾಡಿ ಹೇಳುತೇನಿ ಹಾಡು ಕೇಳುಗರಿಗೆ ಪ್ರಿಯವಾಗುತ್ತಿರುವಂತೆಯೇ, ನಿರ್ಮಾಪಕರು ಚಿತ್ರದ ಎರಡನೇ ಟ್ರ್ಯಾಕ್ ರಿಲೀಸ್ ಮಾಡಿದ್ದಾರೆ.
ಗುರುಗಳು ನಮ್ಮ ಗುರುಗಳು ಎಂಬ ಈ ಹಾಡು ಶಿಕ್ಷಕರಿಗೆ ಸಲ್ಲಿಸುತ್ತಿರುವ ಗೌರವವಾಗಿದೆ. ನಟರಾದ ದತ್ತಣ್ಣ ಮತ್ತು ಶರಣ್ ಜೊತೆಗೆ ಕರ್ನಾಟಕದ ಹಲವು ಶಿಕ್ಷಕರು ನಟಿಸಿದ್ದಾರೆ.
ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಈ ಹಾಡಿಗೆ ವಿಜಯ್ ಪ್ರಕಾಶ್ ಹಿನ್ನೆಲೆ ಧ್ವನಿ ನೀಡಿದ್ದಾರೆ.
ಸಿನಿಮಾದಲ್ಲಿ 13 ಯುವನಟರು ಅಭಿನಯಿಸಿದ್ದಾರೆ, ವಿದ್ಯಾರ್ಥಿಗಳು ಖೋ ಖೋ ತಂಡದ ಸದಸ್ಯರ ಪಾತ್ರ ನಿರ್ವಹಿಸಿದ್ದಾರೆ. . ಏಕಾಂತ್ (ನೆನಪಿರಲಿ ಪ್ರೇಮ್ ಅವರ ಮಗ), ರಕ್ಷಕ (ದಿವಂಗತ ಹಾಸ್ಯನಟ ಬುಲೆಟ್ ಪ್ರಕಾಶ್ ಅವರ ಮಗ), ಮಣಿಕಂಠ ನಾಯಕ್ (ಶಾಸಕ ರಾಜುಗೌಡ ಅವರ ಮಗ), ಸೂರ್ಯ (ರವಿ ಶಂಕರ್ ಗೌಡ ಅವರ ಮಗ), ಮತ್ತು ಹರ್ಷಿತ್ (ನವೀನ್ ಕೃಷ್ಣ ಅವರ ಮಗ) ಚಿತ್ರದ ಭಾಗವಾಗಿದ್ದಾರೆ. ಸುಧಾಕರ್ ಶೆಟ್ಟಿ ಅವರ ಛಾಯಾಗ್ರಹಣದೊಂದಿಗೆ, ಗುರು ಶಿಷ್ಯರು ಚಿತ್ರ ಸದ್ಯಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


