ನಿರಂಜನ್ ಸುಧೀಂದ್ರ ನಟನೆಯ 'ಸೂಪರ್ ಸ್ಟಾರ್' ಬಹುಭಾಷಾ ಸಿನಿಮಾಗೆ ರಮಾಸ್ ಮೀಡಿಯಾ ಕ್ರಿಯೇಷನ್ಸ್ ಬಂಡವಾಳ!
ಸೂಪರ್ ಸ್ಟಾರ್ ಸಿನಿಮಾ ನಾಯಕ ಹಾಗೂ ಉಪೇಂದ್ರ ಅವರ ಸೋದರ ಸಂಬಂಧಿ ನಿರಂಜನ್ ಸುಧೀಂದ್ರ ಚಿತ್ರವನ್ನು ರಮೇಶ್ ವೆಂಕಟೇಶ್ ಬಾಬು ನಿರ್ದೇಶಿಸಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು.

ಸೂಪರ್ ಸ್ಟಾರ್ ಸಿನಿಮಾ ನಾಯಕ ಹಾಗೂ ಉಪೇಂದ್ರ ಅವರ ಸೋದರ ಸಂಬಂಧಿ ನಿರಂಜನ್ ಸುಧೀಂದ್ರ ಚಿತ್ರವನ್ನು ರಮೇಶ್ ವೆಂಕಟೇಶ್ ಬಾಬು ನಿರ್ದೇಶಿಸಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು.
ಆದರೆ ಇದೀಗ ರಮಾಸ್ ಮೀಡಿಯಾ ಕ್ರಿಯೇಷನ್ಸ್ ಬೆಂಬಲ ನೀಡಲಿದೆ ಎಂದು ಘೋಷಿಸಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ಸತ್ಯನಾರಾಯಣ ಹಾಗೂ ಅವರ ಮಗಳು ರಮಾ ಈ ಸಂಸ್ಥೆಯ ರುವಾರಿಗಳು. ಈ ಸಿನಿಮಾದ ಮೂಲಕ ತೆಲುಗಿನ 'ರಮಾಸ್ ಮೀಡಿಯಾ ಕ್ರಿಯೇಷನ್ಸ್' ಕನ್ನಡಕ್ಕೆ ಕಾಲಿಟ್ಟಿದೆ. ಈಚೆಗೆ ಈ ಸಂಸ್ಥೆಯ ಲೋಗೋವನ್ನು ಉಪೇಂದ್ರ ರಿಲೀಸ್ ಮಾಡಿದರು.
ನಾನು ತೆಲುಗಿನಲ್ಲಿ “ರಮಾಸ್ ಮೀಡಿಯಾ ಕ್ರಿಯೇಷನ್ಸ್” ಮೂಲಕ ಕೆಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದೇವೆ. “ಸೂಪರ್ ಸ್ಟಾರ್” ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದೇನೆ. ನಮ್ಮದು ಸಿನಿಮಾ ನಿರ್ಮಾಣವಲ್ಲದೆ ಸಾಕಷ್ಟು ಬೇರೆಬೇರೆ ಉದ್ಯಮಗಳು ಇದೆ. ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಾಗ ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು ಈ ಚಿತ್ರದ ಬಗ್ಗೆ ಹೇಳಿದರು. ಕೆಲವು ಸಮಯ ತೆಗೆದುಕೊಂಡು ನಂತರ ನಿರ್ಮಾಣ ಮಾಡೋಣ ಎಂದು ಹೇಳಿದೆ. ನಿರ್ದೇಶಕರು ಹೆಣೆದಿರುವ ಕಥೆ ನನ್ನನ್ನು ಆಕರ್ಷಿಸಿತ್ತು. ನಿರಂಜನ್ ಸುರದ್ರೂಪಿ ನಟ. ಚೆನ್ನಾಗಿ ಅಭಿನಯಿಸುತ್ತಿದ್ದಾರೆ. ನಿರ್ದೇಶಕ ಹಾಗೂ ನಾಯಕ ಕಾಂಬಿನೇಷನ್ ನಲ್ಲಿ ಉತ್ತಮ ಚಿತ್ರ ಬರುವುದಂತೂ ಖಚಿತ. ಈ ಚಿತ್ರದ ನಂತರ ಇವರಿಬ್ಬರ ಜೋಡಿಯಲ್ಲೇ ಮತ್ತೊಂದು ಚಿತ್ರ ನಿರ್ಮಾಣ ಮಾಡುತ್ತೇವೆ. ನಮ್ಮ ಸಂಸ್ಥೆಗೆ ನಿಮ್ಮ ಬೆಂಬಲವಿರಲಿ' ಎಂದು ನಿರ್ಮಾಪಕಿ ರಮಾ ತಿಳಿಸಿದರು.
'ಸೂಪರ್ ಸ್ಟಾರ್' ಹೆಸರಿನ ಬಹುಭಾಷಾ ಸಿನಿಮಾದಲ್ಲಿ ನಿರಂಜನ್ ಸುಧೀಂದ್ರ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಕೊನೆಯ 2 ಶೆಡ್ಯೂಲ್‌ಗಳು ಮತ್ತು ಇಡೀ ಚಲನಚಿತ್ರವನ್ನು ಬೆಂಗಳೂರಿನ ವಿವಿಧ ಭಾಗಗಳಲ್ಲಿ ರಚಿಸಲಾದ ಸುಮಾರು 14 ಸೆಟ್‌ಗಳಲ್ಲಿ ಚಿತ್ರೀಕರಿಸಲಾಗಿದೆ.
'ನಾನು ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮವಹಿಸುತ್ತಿದ್ದೇನೆ. ಏಕೆಂದರೆ 'ಸೂಪರ್ ಸ್ಟಾರ್' ನನ್ನ ಚಿಕ್ಕಪ್ಪನ ಸಿನಿಮಾದ ಟೈಟಲ್. ಅವರಿಂದ ಅನುಮತಿ ಪಡೆದು ಶೀರ್ಷಿಕೆ ಇಟ್ಟಿದ್ದೇನೆ. ಆ ಹೆಸರಿಗೆ ಧಕ್ಕೆ ಬಾರದ ಹಾಗೆ ನೋಡಿಕೊಳ್ಳುವುದೇ ನನ್ನ ಮೊದಲ ಆದ್ಯತೆ. ನಮ್ಮ ಮೇಲೆ ನಂಬಿಕೆಯಿಟ್ಟು ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ರಮಾಸ್ ಮೀಡಿಯಾ ಕ್ರಿಯೇಷನ್ಸ್‌ಗೆ, ನಿರ್ದೇಶಕರಿಗೆ ಧನ್ಯವಾದಗಳು' ಎಂದು ನಿರಂಜನ್ ಸುಧೀಂದ್ರ ಹೇಳಿದ್ದಾರೆ.
ಈ ಚಿತ್ರಕ್ಕಾಗಿ ನಿರಂಜನ್ ತಮ್ಮ ಲುಕ್ ಬದಲಾಯಿಸಿಕೊಂಡಿದ್ದಾರೆ. ರೂಪದರ್ಶಿ-ನಟಿ, ಜಾರಾ ಯಾಸ್ಮಿನ್, ಸೂಪರ್ ಸ್ಟಾರ್ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ನೃತ್ಯ ಸಂಯೋಜಕ-ನಟ ಸುಂದರ್ ಮುಗೂರ್, ದೇವರಾಜ್, ಸಿತಾರಾ, ಅವಿನಾಶ್ ಮತ್ತು ಪವಿತ್ರಾ ಲೋಕೇಶ್ ನಟಿಸಿದ್ದಾರೆ. ಸೂಪರ್‌ಸ್ಟಾರ್ ಸಿನಿಮಾಗೆ ರಾಘವೇಂದ್ರ ಸಂಗೀತ ನೀಡಲಿದ್ದು, ವಿಲನ್ ಖ್ಯಾತಿಯ ವಿ ಗಿರಿ ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


