ಸಿನಿಮಾ ಸುದ್ದಿ

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ‌ ಅಭಿನಯ‌ದ 'ಪುಷ್ಪ 2' ಚಿತ್ರೀಕರಣ ಆರಂಭ

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ತೆಲುಗಿನ 'ಪುಷ್ಪ' ಪ್ಯಾನ್ ಇಂಡಿಯಾ ಸಿನಿಮಾವಾಗಿ ಯಶಸ್ವಿಯಾದ ನಂತರ, ಇದೀಗ ಅದರ ಸ್ವಿಕೆಲ್ ಬರುತ್ತಿದೆ.

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ‌ ಅಭಿನಯ‌ದ 'ಪುಷ್ಪ 2' ಚಿತ್ರೀಕರಣ ಆರಂಭ
ಪುಷ್ಪ 2 ಪೂಜಾ ಕಾರ್ಯಕ್ರಮದ ಚಿತ್ರ
Published On :

ಹೈದ್ರಾಬಾದ್: ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ತೆಲುಗಿನ 'ಪುಷ್ಪ' ಪ್ಯಾನ್ ಇಂಡಿಯಾ ಸಿನಿಮಾವಾಗಿ ಯಶಸ್ವಿಯಾದ ನಂತರ, ಇದೀಗ ಅದರ ಸ್ವಿಕೆಲ್ ಬರುತ್ತಿದೆ.

ಸೋಮವಾರ ಚಿತ್ರದ ಪೂಜಾ ಕಾರ್ಯಕ್ರಮದೊಂದಿಗೆ ಚಿತ್ರೀಕರಣವನ್ನು ಆರಂಭಿಸಲಾಗಿದೆ. ಪೂಜಾ ಕಾರ್ಯಕ್ರಮದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ. ಅಲ್ಲು ಅರ್ಜುನ್ ಅಭಿಮಾನಿಗಳು ಟ್ವೀಟರ್ ನಲ್ಲಿಈ ಫೋಟೋಗಳನ್ನು ಹೆಚ್ಚಾಗಿ ಹಂಚಿಕೊಳ್ಳುತ್ತಿದ್ದಾರೆ.

ಕಾರ್ಯಕ್ರಮದ ವೇಳೆ ರಶ್ಮಿಕಾ ಮಂದಣ್ಣ ಸಾಂಪ್ರಾದಾಯಿಕ ಉಡುಪು ಧರಿಸಿ ಚಿತ್ರತಂಡದೊಂದಿಗೆ ಇರುವುದು ಕಂಡುಬಂದಿದೆ. ಆದರೆ, ಅಲ್ಲು ಅರ್ಜುನ್ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ಭಾರತದ ಸ್ವಾತಂತ್ರೋತ್ಸವ ಅಂಗವಾಗಿ ಪ್ರಸ್ತುತ ಅಲ್ಲು ಅರ್ಜುನ್ ಅಮೆರಿಕದಲ್ಲಿರುವುದರಿಂದ ಪೂಜಾ ಕಾರ್ಯಕ್ರಮ ಪಾಲ್ಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.