'ಸಪ್ತಸಾಗರದಾಚೆ ಎಲ್ಲೋ’ ಚಿತ್ರ ತಂಡಕ್ಕೆ 'ಗಿಲ್ಕಿ' ನಟಿ ಚೈತ್ರಾ ಆಚಾರ್ ಸೇರ್ಪಡೆ
ಹೇಮಂತ್ ಎಂ. ರಾವ್ ನಿರ್ದೇಶನದ ಸಪ್ತಸಾಗರದಾಚೆ ಎಲ್ಲೋ ಚಿತ್ರಕ್ಕೆ ಹೊಸ ನಾಯಕಿಯ ಆಗಮನವಾಗಿದೆ. ರಕ್ಷಿತ್ ಶೆಟ್ಟಿ ನಟನೆಯ ಈ ಸಿನಿಮಾ ಸೆಪ್ಬಂಬರ್ ತಿಂಗಳಲ್ಲಿ ಪುನಾರಂಭವಾಗಲಿದೆ.

ಹೇಮಂತ್ ಎಂ. ರಾವ್ ನಿರ್ದೇಶನದ ಸಪ್ತಸಾಗರದಾಚೆ ಎಲ್ಲೋ ಚಿತ್ರಕ್ಕೆ ಹೊಸ ನಾಯಕಿಯ ಆಗಮನವಾಗಿದೆ. ರಕ್ಷಿತ್ ಶೆಟ್ಟಿ ನಟನೆಯ ಈ ಸಿನಿಮಾ ಸೆಪ್ಬಂಬರ್ ತಿಂಗಳಲ್ಲಿ ಪುನಾರಂಭವಾಗಲಿದೆ.
ಹೇಮಂತ್ ರಾವ್ ನಿರ್ದೇಶನದ ಈ ಚಿತ್ರದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜೋಡಿಯಾಗಿ ರುಕ್ಮಿಣಿ ವಸಂತ್ ಬಣ್ಣ ಹಚ್ಚಿದ್ದಾರೆ. ಇದೀಗ ಇವರ ಜತೆಗೆ ಮತ್ತೊಬ್ಬ ನಟಿಯ ಆಗಮನವಾಗಿದೆ. ಬೆಂಗಳೂರಿನ ಹುಡುಗಿ ನಾಯಕಿಯಾಗಿ ರಕ್ಷಿತ್ ಶೆಟ್ಟಿ ತಂಡಕ್ಕೆ ಆಗಮಿಸಿದ್ದಾರೆ. ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ಸುರಭಿ ಪಾತ್ರಕ್ಕೆ ಚೈತ್ರಾ ಜೆ. ಆಚಾರ್ ಆಯ್ಕೆ ಆಗಿದ್ದಾರೆ.
‘ಮಹೀರ’, ‘ಆ ದೃಶ್ಯ’, ‘ತಲೆತಂಡ’ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಈಗಾಗಲೇ ಚೈತ್ರಾ ನಟಿಸಿದ್ದಾರೆ. ಸೀರೆ ಉಟ್ಟು ಮಲ್ಲಿಗೆ ಮುಡಿದ ಸುರಭಿಯ ಫಸ್ಟ್ ಲುಕ್ ಪೋಸ್ಟರ್ ಕೂಡ ರಿವೀಲ್ ಆಗಿದೆ. ರಕ್ಷಿತ್ ಶೆಟ್ಟಿ ಎರಡು ವಿಭಿನ್ನ ಲುಕ್ಗಳನ್ನು ಹೊಂದಿರುವ ಈ ಚಿತ್ರದಲ್ಲಿ ಚೈತ್ರಾ ಸುರಭಿಯಾಗಿ ಕಾಣಿಸಿಕೊಳ್ಳಲಿದ್ದಾರೆ, ಅವರು ಕಥೆಯ ಎರಡನೇ ಭಾಗದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ.
ಅವರು ಉತ್ತಮ ಗಾಯಕಿ ಕೂಡ ಆಗಿದ್ದು, ಅವರ ಗಾಯನ ಪ್ರತಿಭೆಯನ್ನು ನಮ್ಮ ಸಿನಿಮಾದಲ್ಲಿ ಬಳಸಿಕೊಳ್ಳುತ್ತೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಜೋಡಿ ಮತ್ತೆ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ಮತ್ತೆ ಒಂದಾಗಿದೆ. ಪರಮಾವ್ ಸ್ಟುಡಿಯೋಸ್ನಿಂದ ನಿರ್ಮಾಣಗೊಂಡಿರುವ ಈ ರೋಮ್ಯಾಂಟಿಕ್ ಸಿನಿಮಾಗೆ ಚರಣ್ ರಾಜ್ ಸಂಗೀತ ನೀಡಲಿದ್ದಾರೆ. ಚಿತ್ರದ ಛಾಯಾಗ್ರಹಣವನ್ನು ಅಧ್ವೈತ ಗುರುಮೂರ್ತಿ ನಿರ್ವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


