ಸಿನಿಮಾ ಸುದ್ದಿ

ಮಂಸೋರೆ ನಿರ್ದೇಶನದ ಮುಂದಿನ '19.20.21' ಚಿತ್ರದ ಹೊಸ ಫೋಸ್ಟರ್ ಬಿಡುಗಡೆ 

ಹರಿವು, ನಾತಿಚರಾಮಿ ಮತ್ತು ಆಕ್ಟ್ 1978 ಸಿನಿಮಾಗಳ ನಿರ್ದೇಶಕ ಮಂಸೋರೆ ಅವರ ಮುಂದಿನ ಸಿನಿಮಾ 19. 20.21 ರ ಫೋಸ್ಟರ್ ವೊಂದು ಸ್ವಾತಂತ್ರೋತ್ಸವ ದಿನದಂದು ಬಿಡುಗಡೆಯಾಗಿದೆ.

ಮಂಸೋರೆ ನಿರ್ದೇಶನದ ಮುಂದಿನ '19.20.21' ಚಿತ್ರದ ಹೊಸ ಫೋಸ್ಟರ್ ಬಿಡುಗಡೆ 
19. 20.21 ಚಿತ್ರದ ಸ್ಟಿಲ್
Published On :

ಹರಿವು, ನಾತಿಚರಾಮಿ ಮತ್ತು ಆಕ್ಟ್ 1978 ಸಿನಿಮಾಗಳ ನಿರ್ದೇಶಕ ಮಂಸೋರೆ ಅವರ ಮುಂದಿನ ಸಿನಿಮಾ 19. 20.21 ರ ಫೋಸ್ಟರ್ ವೊಂದು ಸ್ವಾತಂತ್ರೋತ್ಸವ ದಿನದಂದು ಬಿಡುಗಡೆಯಾಗಿದೆ.

ಮಾನವ ಹಕ್ಕುಗಳ ಉಲ್ಲಂಘನೆ ಕುರಿತ ಚಿತ್ರದಲ್ಲಿ ವ್ಯಕ್ತಿಯೊಬ್ಬ ( ಸಂಪತ್ ಮೈತ್ರೇಯ) ಹಲ್ಲೆಗೊಳಗಾಗಿ, ರಕ್ತದ ಮಡುವಿನಲ್ಲಿ ನೆಲದ ಮೇಲೆ ಬಿದ್ದಿರುವುದನ್ನು ಈ ಫೋಸ್ಟರ್ ಅನಾವರಣಗೊಳಿಸಿದೆ.  ಈ ಚಿತ್ರ ಸೂರ್ಯ ಅವರ ಜೈಭೀಮ್ ನಂತೆ  ಸತ್ಯ ಘಟನೆಯಾಧಾರಿತವಾದದ್ದು ಎಂದು ಚಿತ್ರ ತಂಡ ಹೇಳಿದೆ.

Story image

19.20. 21 ಸಿನಿಮಾದಲ್ಲಿ ಬಾಲಾಜಿ ಮನೋಹರ್, ಎಂ ಡಿ ಪಲ್ಲವಿ, ಶೃಂಗಾ, ಸಂಪತ್ ಮೈತ್ರೇಯಾ, ಅವಿನಾಶ್, ಕೃಷ್ಣ ಹೆಬ್ಬಾಳೆ ಮತ್ತಿತರರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೇವರಾಜ್ ಬ್ಯಾನರ್ ಡಿ ಕ್ರಿಯೇಷನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಬಿಂದು ಮಾಲಿನಿ ಸಂಗೀತ ಸಂಯೋಜಿಸುತ್ತಿದ್ದಾರೆ.

 ಬುಕ್ಕೇಶ್ ಅವರ ಬ್ಯಾಂಕ್ ಗ್ರೌಂಡ್ ಸ್ಕೂರ್ ಇದೆ. ಶಿವು ಬಿಕೆ ಕುಮಾರ್ ಅವರ ಛಾಯಾಗ್ರಹಣವಿರಲಿದೆ. ಮಂಸೋರೆ ಮತ್ತು ವಿರೇಂದ್ರ ಮಲ್ಲಣ್ಣ ಚಿತ್ರಕಥೆ ಬರೆದಿದ್ದು ವಿರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ ಅವರ ಸಂಭಾಷಣೆ ಇದೆ. ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇದೀಗ ಪೋಸ್ಟ್ ಪ್ರೊಢಕ್ಷನ್ ಕಾರ್ಯದಲ್ಲಿ ನಿರತವಾಗಿದೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.