ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಹೊಸ ಸಿನಿಮಾ ಪೋಸ್ಟರ್ ಆನ್ ಲೈನಲ್ಲಿ ಲೀಕ್
ವಿಭಿನ್ನ, ವಿಕ್ಷಿಪ್ತ ಸ್ಕ್ರಿಪ್ಟ್ ಹೆಣೆಯುವುದಕ್ಕೆ ಹೆಸರಾದ ಉಪೇಂದ್ರ ಅವರ ಹೊಸ ಪೋಸ್ಟರ್ ನಲ್ಲಿ ದೊಡ್ಡ ನಾಮದ ಚಿತ್ರವಿದೆ. ಅಲ್ಲದೆ ಕಥೆ- ಚಿತ್ರಕತೆ- ಸಂಭಾಷಣೆ- ನಿರ್ದೇಶನ ಉಪೇಂದ್ರ ಎಂದು ಬರೆಯಲಾಗಿದೆ.

ಬೆಂಗಳೂರು: ಈ ಹಿಂದೆ ಸಂದರ್ಶನದಲ್ಲಿ ನಟ, ನಿರ್ದೇಶಕ ಉಪೇಂದ್ರ ಅವರು ಶೀಘ್ರದಲ್ಲಿ ತಮ್ಮ ನಿರ್ದೇಶನದ ಸಿನಿಮಾ ಬಗ್ಗೆ ಘೋಷಿಸುವುದಾಗಿ ಹೇಳಿದ್ದರು. ಉಪೇಂದ್ರ ಅವರು ತಮ್ಮ ಜನ್ಮದಿನವಾದ ಸೆ.18ರಂದು ತಮ್ಮ ನಿರ್ದೇಶನದಲ್ಲಿ ಮೂಡಿಬರಲಿರುವ ಚಿತ್ರವನ್ನು ಘೋಷಣೆ ಮಾಡಲಿದ್ದಾರೆ ಎಂದೇ ಹೇಳಲಾಗಿತ್ತು.
ಅಷ್ಟರೊಳಗೆ ಉಪೇಂದ್ರ ನಿರ್ದೇಶನದ ಹೊಸ ಸಿನಿಮಾ ಪೋಸ್ಟರ್ ಆನ್ ಲೈನಿನಲ್ಲಿ ಲೀಕ್ ಆಗಿರುವ ಸುದ್ದಿ ಹೊರಬಿದ್ದಿದೆ. ಇದೀಗ ಈ ಪೋಸ್ಟರ್ ವೈರಲ್ ಆಗಿದ್ದು ಅಭಿಮಾನಿಗಳ ಕುತೂಹಲವನ್ನು ಕೆರಳಿಸಿದೆ.
ವಿಭಿನ್ನ, ವಿಕ್ಷಿಪ್ತ ಸ್ಕ್ರಿಪ್ಟ್ ಹೆಣೆಯುವುದಕ್ಕೆ ಹೆಸರಾದ ಉಪೇಂದ್ರ ಅವರ ಹೊಸ ಪೋಸ್ಟರ್ ನಲ್ಲಿ ದೊಡ್ಡ ನಾಮದ ಚಿತ್ರವಿದೆ. ಅಲ್ಲದೆ ಕಥೆ- ಚಿತ್ರಕತೆ- ಸಂಭಾಷಣೆ- ನಿರ್ದೇಶನ ಉಪೇಂದ್ರ ಎಂದು ಬರೆಯಲಾಗಿದೆ.
ಈ ಸಿನಿಮಾ ಹಲವು ಭಾಷೆಗಳಲ್ಲಿ ಮೂಡಿ ಬರಲಿದೆ. ಉಪೇಂದ್ರ ಅವರ ಪ್ರೊಡಕ್ಷನ್ ನಲ್ಲೇ ತಯಾರಾಗುತ್ತಿರುವ ಈ ಸಿನಿಮಾ ಕನ್ನಡ, ತಮಿಳು ತೆಲುಗು ಮಲಯಾಳಂ ಮತ್ತು ಹಿಂದಿಯಲ್ಲಿ ತೆರೆಕಾಣಲಿದೆ ಎನ್ನಲಾಗಿದೆ. ಉಪೇಂದ್ರ ಅಭಿನಯದ ಕಬ್ಜಾ ಚಿತ್ರದ ಚಿತ್ರೀಕರನ ಬಾಕಿಯಿದ್ದು, ಸೆ.೨೧ರಿಂದ ಮುಂದುವರಿಯಲಿದೆ.
Related Article
ಕಲಬುರಗಿಯಲ್ಲಿ ನಡೆದ ನೈಜ ಘಟನೆಯನ್ನಾಧರಿಸಿದ ಹಳ್ಳಿ ಸೊಗಡಿನ ಸಿನಿಮಾ 'ಕುಂತಿ ಪುತ್ರ'
ಪಿಆರ್ ಕೆ ಬ್ಯಾನರ್ ನ ಮೆಡಿಕಲ್ ಥ್ರಿಲ್ಲರ್ 'O2' ನಲ್ಲಿ ಆಶಿಕಾ ರಂಗನಾಥ್!
'ದಿ ಕಲರ್ ಆಫ್ ಟೊಮೆಟೋ' ನನಗೆ ಹೊಸ ಪ್ರಕಾರದ ಸಿನಿಮಾ: ಪ್ರತಾಪ್ ನಾರಾಯಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


