ಅಪ್ಪು ಬಗ್ಗೆ ಭಾವನಾತ್ಮಕ ವಿಷಯ ಹಂಚಿಕೊಂಡು, ಪುನೀತನಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಎಂದ ಜಗ್ಗೇಶ್
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಜೊತೆಗಿನ ದಿನಗಳನ್ನು ಎಲ್ಲಾ ನಟರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅವರನ್ನು ಸ್ಮರಿಸುತ್ತಿದ್ದಾರೆ. ಇದರ ಬೆನ್ನಲ್ಲೇ...

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಜೊತೆಗಿನ ದಿನಗಳನ್ನು ಎಲ್ಲಾ ನಟರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅವರನ್ನು ಸ್ಮರಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುವ ನಟ ಜಗ್ಗೇಶ್ ಕೂಡ ಭಾವನಾತ್ಮಕ ನೆನಪೊಂದನ್ನು ಹಂಚಿಕೊಂಡಿದ್ದಾರೆ.
ನನ್ನ ಪುಟ್ಟಗ್ರಾಮಕ್ಕೆ ನೀ ಬಂದು ಸಂಭ್ರಮಿಸಿದ ದಿನ ಹೇಗೆ ಮರೆಯಲಿ? ಮಾತು ಬಾರದ ನನ್ನ ತಮ್ಮನ ಕಂಡು ನೀ ಮರುಗಿದ್ದು ನೆನೆದು ನನ್ನ ಹೃದಯ ಛಿದ್ರವಾಗಿದೆ. ನೀ ಇಲ್ಲಾ ಎಂದರೆ ನಂಬಲಾಗುತ್ತಿಲ್ಲಾ. ಕರೆ ಮಾಡಿದರೆ, ‘ಅಣ್ಣ’ ಎಂದು ಕರೆ ಸ್ವೀಕರಿಸುವೆ ಎನ್ನುವಂತೆ ಭಾಸವಾಗುತ್ತಿದೆ,’ನೀ ಇಲ್ಲಾ ಎಂದರೆ ಮನ ನಂಬುತ್ತಿಲ್ಲಾ. ಎಂಥ ಸಾವು ಇದು. ಬದುಕಲ್ಲಿ ನಾನು ಪೂಜೆಯನ್ನೇ ಮಾಡದ ದಿನವಿದು’ ಎಂದು ಬರೆದುಕೊಂಡಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿಯನ್ನು ನಮ್ಮ ಪುನೀತನಿಗೆ ಮರಣೋತ್ತರ ಪ್ರಶಸ್ತಿಯಾಗಿ ನೀಡಿ ಮಾನ್ಯ ಮುಖ್ಯಮಂತ್ರಿಗಳೆ. ಈ ಮೂಲಕ ಕನ್ನಡಿಗರ ಪ್ರೀತಿ ಗೆದ್ದ ರಾಜಣ್ಣನ ಮಗನ ಆತ್ಮಕ್ಕೆ ಗೌರವಿಸಿದಂತೆ ಆಗುತ್ತದೆ ಎಂಬುದು ನನ್ನ ವಿನಂತಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.
ನನ್ನ ಪುಟ್ಟಗ್ರಾಮಕ್ಕೆ ನೀಬಂದು ಸಂಭ್ರಮಿಸಿದ ದಿನ ಹೇಗೆ ಮರೆಯಲಿ!ಮಾತು ಬರದ ನನ್ನ ತಮ್ಮನ ಕಂಡು ನೀ ಮರಗಿದ್ದು ನೆನೆದು ನನ್ನಹೃದಯ ಚಿದ್ರವಾಗಿದೆ!ನೀಇಲ್ಲಾ ಎಂದರೆ ನಂಬಲಾಗುತ್ತಿಲ್ಲಾ!ಕರೆ ಮಾಡಿದರೆ ಅಣ್ಣ ಎಂದು ಕರೆ ಸ್ವೀಕರಿಸುವೆ ಎನ್ನುವಂತೆ ಭಾವ!
ನೀ ಇಲ್ಲಾ ಎಂದರೆ ಮನ ನಂಬುತ್ತಿಲ್ಲಾ!ಎಂಥ ಸಾವು ಇದು!ಬದುಕಲ್ಲಿ ನಾ ಪೂಜೆ ಮಾಡದ ದಿನ ಇಂದು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


