ಅಮೋಘ ವರ್ಷ ಜೊತೆಗೆ ಪುನೀತ್ ಸಿನಿಮಾ! ಗಂಧದ ಗುಡಿ ಅಥವಾ ಒಂದು ಮುತ್ತಿನ ಕಥೆ ಟೈಟಲ್?
ನಟ ಪುನೀತ್ ರಾಜ್ ಕುಮಾರ್ ಇತ್ತೀಚೆಗೆ ಮಾಡಿದ ಟ್ವೀಟ್ ವೊಂದು ಬಾರಿ ಕುತೂಹಲ ಮೂಡಿಸಿದೆ. ತಮ್ಮ ಹೋಮ್ ಬ್ಯಾನರ್ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ಮುಂದಿನ ಸಿನಿಮಾ ತಯಾರಾಗಲಿದೆ.

ನಟ ಪುನೀತ್ ರಾಜ್ ಕುಮಾರ್ ಇತ್ತೀಚೆಗೆ ಮಾಡಿದ ಟ್ವೀಟ್ ವೊಂದು ಬಾರಿ ಕುತೂಹಲ ಮೂಡಿಸಿದೆ. ತಮ್ಮ ಹೋಮ್ ಬ್ಯಾನರ್ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ಮುಂದಿನ ಸಿನಿಮಾ ತಯಾರಾಗಲಿದೆ.
ಕಥೆ ಹುಟ್ಟಿದ್ದು ದಶಕಗಳ ಹಿಂದೆ. ನಮ್ಮ ಜನರು, ನಮ್ಮ ನೆಲದ ವೈಭವ. ನಮ್ಮ ತಳಸಮುದಾಯಗಳು ಪ್ರಪಂಚದಾದ್ಯಂತ ಹರಡಿಕೊಂಡಿವೆ. ಹಿಂದಿನ ಪೀಳಿಗೆಗೆ ಸ್ಫೂರ್ತಿ ಅದಮ್ಯವಾಗಿತ್ತು. ಆ ಇತಿಹಾಸವನ್ನು ಮೆಲುಕು ಹಾಕುವ ಸಮಯ ಬಂದಿದೆ.
ಮಡ್ ಸ್ಕಿಪ್ಪರ್ ಸಹಯೋಗದೊಂದಿಗೆ ಪಿಆರ್ ಕೆ ಪ್ರೊಡಕ್ಷನ್ ಸಿನಿಮಾ ನಿರ್ಮಿಸಲಿದೆ, ಪುನೀತ್ ಮುಂದಿನ ಸಿನಿಮಾ ಸಾಹಸ ಕುರಿತದ್ದಾಗಿದೆ, ವನ್ಯಜೀವಿ ಛಾಯಾಗ್ರಾಹಕ ಅಮೋಘ ವರ್ಷ ಪುನೀತ್ ಜೊತೆಯಾಗಲಿದ್ದಾರೆ. ಕೆಲವು ತಿಂಗಳ ಹಿಂದೆ ಪವರ್ ಸ್ಟಾರ್ ಪುನೀತ್ ಕರಾವಳಿ ಪ್ರದೇಶದಲ್ಲಿ ವ್ಯಾಪಕವಾಗಿ ಪ್ರಯಾಣಿಸಿದ್ದರು ಎಂದು ವರದಿಯಾಗಿತ್ತು. ಈ ಪ್ರವಾಸದ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಆಗಿದ್ದವು.
ಮತ್ತೊಂದು ಕುತೂಹಲಕಾರಿ ಸುದ್ದಿ ಏನೆಂದರೆ, ಚಿತ್ರಕ್ಕೆ ಗಂಧದ ಗುಡಿ ಅಥವಾ ಒಂದು ಮುತ್ತಿನ ಕಥೆ ಎಂದು ಹೆಸರಿಡಬಹುದು, ಇವೆರಡೂ ಡಾ ರಾಜ್‌ಕುಮಾರ್ ಅಭಿನಯದ ಕ್ಲಾಸಿಕ್ ಸಿನಿಮಾಗಲಾಗಿವೆ. ನವೆಂಬರ್ 1 ರ ಕನ್ನಡ ರಾಜ್ಯೋತ್ಸವದಂದು ಯೋಜನೆಯ ಅಧಿಕೃತ ಘೋಷಣೆ ಮಾಡಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


