'ಪೃಥ್ವಿ' ನಂತರ ಪುನೀತ್- ಜಾಕೋಬ್ ವರ್ಗೀಸ್ ಜೋಡಿಯ ಮತ್ತೊಂದು ಸಿನಿಮಾ
2010 ರಲ್ಲಿ ತೆರೆಕಂಡ ಪೃಥ್ವಿ ಸಿನಿಮಾವನ್ನು ಜಾಕೋಬ್ ವರ್ಗೀಸ್ ನಿರ್ದೇಶಿಸಿದ್ದು, ಪವರ್ ಸ್ಟಾರ್ ಪುನೀತ್ ರಾಜ ಕುಮಾರ್ ನಟಿಸಿದ್ದರು.

2010 ರಲ್ಲಿ ತೆರೆಕಂಡ ಪೃಥ್ವಿ ಸಿನಿಮಾವನ್ನು ಜಾಕೋಬ್ ವರ್ಗೀಸ್ ನಿರ್ದೇಶಿಸಿದ್ದು, ಪವರ್ ಸ್ಟಾರ್ ಪುನೀತ್ ರಾಜ ಕುಮಾರ್ ನಟಿಸಿದ್ದರು.
ಪುನೀತ್ ನಟನೆಯ ಸಿನಿಮಾಗಳಲ್ಲಿ ಪೃಥ್ವಿ ಅತ್ಯುತ್ತಮ ಸಿನಿಮಾವಾಗಿತ್ತು, 11 ವರ್ಷಗಳ ನಂತರ ಮತ್ತೆ ಪುನೀತ್ ಮತ್ತು ಜಾಕೋಬ್ ವರ್ಗೀಸ್ ಮತ್ತೆ ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಬ್ಯಾನರ್ ನಲ್ಲಿ ಸಿನಿಮಾ ತಯಾರಾಗಲಿದೆ ಎಂದು ತಿಳಿದು ಬಂದಿದೆ, ಪುನೀತ್ ಅವರ ಕೈಯ್ಯಲ್ಲಿರುವ ಎಲ್ಲಾ ಸಿನಿಮಾಗಳ ಶೂಟಿಂಗ್ ಮುಗಿದ ನಂತರ ಹೊಸ ಸಿನಿಮಾಗೆ ಕೈ ಹಾಕಲಿದ್ದಾರೆ.
ಇಬ್ಬರು ಈ ಸಂಬಂಧ ಈಗಾಗಲೇ ಚರ್ಚಿಸಿದ್ದು ಕಥೆ ಲಾಕ್ ಆಗಿದೆ, ನಿರ್ದೇಶಕ ಜಾಕೋಬ್ ವರ್ಗೀಸ್ ಕಲಾವಿದರು ಮತ್ತು ತಾಂತ್ರಿಕ ಸಿಬ್ಬಂದಿ ಆಯ್ಕೆಯಲ್ಲಿ ನಿರತರಾಗಿದ್ದಾರೆ. 2022ರ ಫೆಬ್ರವರಿಯಲ್ಲಿ ಶೂಟಿಂಗ್ ಆರಂಭಿಸಲು ಚಿತ್ರತಂಡ ಯೋಜಿಸಿದೆ, ಶೀಘ್ರದಲ್ಲೇ ಟೈಟಲ್ ಘೋಷಿಸಲಾಗುವುದು.
ಪುನೀತ್ ಸದ್ಯ ಚೇತನ್ ಕುಮಾರ್ ಅವರ ಜೇಮ್ಸ್, ಪವನ್ ಕುಮಾರ್ ನಿರ್ದೇಶನದ ದ್ವಿತ್ವದಲ್ಲಿ ನಟಿಸುತ್ತಿದ್ದಾರೆ. ದಿನಕರ್ ತೂಗುದೀಪ್ ಮತ್ತಿ ಸಂತೋಷ್ ಆನಂದರಾಮ್ ನಿರ್ದೇಶನದ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


