ಯೋಗರಾಜ್ ಭಟ್ ಗಾಳಿಪಟ-2 ಶೂಟಿಂಗ್ ಸೆಪ್ಟೆಂಬರ್ 18 ರಿಂದ ಮತ್ತೆ ಶುರು
ಸಿನಿಮಾದ ಶೇ.70 ಭಾಗದ ಶೂಟಿಂಗ್ ಈಗಾಗಲೇ ಪೂರ್ತಿಯಾಗಿದೆ. ಅನಂತ್ ನಾಗ್ ಈ ಸಿನಿಮಾದಲ್ಲಿ ಟೀಚರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವುದನ್ನು ಭಟ್ಟರು ಈ ಹಿಂದೆಯೇ ಬಹಿರಂಗಪಡಿಸಿದ್ದರು.

ಬೆಂಗಳೂರು: ಪ್ರೇಕ್ಷಕರು ನಿರೀಕ್ಷಿಸುತ್ತಿದ್ದ ಗಾಳಿಪಟ 2 ಸಿನಿಮಾ ಚಿತ್ರೀಕರಣ ಸೆಪ್ಟೆಂಬರ್ 18ರಿಂದ ಮತ್ತೆ ಶುರುವಾಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್ ನಿಲ್ಲಿಸಲಾಗಿತ್ತು. ಕಝಕಿಸ್ತಾನದಲ್ಲಿ ಶೂಟಿಂಗ್ ಮಾಡಲ್ಪಟ್ಟ ಮೊದಲ ಕನ್ನಡ ಸಿನಿಮಾ ಎನ್ನುವ ಹೆಗ್ಗಳಿಗೆ ಈ ಸಿನಿಮಾದ್ದು.
ಇದನ್ನೂ ಓದಿ: ಕಜಕಸ್ಥಾನಕ್ಕೆ ಹಾರಲು ಗಾಳಿಪಟ-2 ರೆಡಿ!
2008ರಲ್ಲಿ ಬಿಡುಗಡೆಯಾಗಿದ್ದ ಗಾಳಿಪಟ ಸಿನಿಮಾ ಹಿಟ್ ಆಗಿತ್ತು. ಆ ಚಿತ್ರದಲ್ಲಿ ಗಣೇಶ್, ದಿಗಂತ್ ಮತ್ತು ರಾಜೇಶ್ ಕೃಷ್ಣನ್ ಅಭಿನಯ ಪ್ರೇಕ್ಷಕರ ಮನಸೂರೆಗೊಂಡಿತ್ತು.
ಇದೀಗ ಗಾಳಿಪಟ-2ನಲ್ಲಿ ರಾಜೇಶ್ ಕೃಷ್ಣನ್ ಬದಲಿಗೆ ಲೂಸಿಯ ನಿರ್ದೇಶಕ ಪವನ್ ಕುಮಾರ್ ಅಭಿನಯಿಸುತ್ತಿದ್ದಾರೆ. ನಿರ್ದೇಶಕ ಪವನ್ ಕುಮಾರ್ ಈ ಹಿಂದೆ ಯೋಗರಾಜ್ ಭಟ್ಟರ ಮನಸಾರೆ ಮತ್ತು ಪಂಚರಂಗಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಿನಿಮಾದ ಶೇ.70 ಭಾಗದ ಶೂಟಿಂಗ್ ಈಗಾಗಲೇ ಪೂರ್ತಿಯಾಗಿದೆ. ಅನಂತ್ ನಾಗ್ ಈ ಸಿನಿಮಾದಲ್ಲಿ ಟೀಚರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವುದನ್ನು ಭಟ್ಟರು ಈ ಹಿಂದೆಯೇ ಬಹಿರಂಗಪಡಿಸಿದ್ದರು.
Related Article
ಹಿರಿದಾಗುತ್ತಿದೆ ಧನಂಜಯ್ ಬಳಗ: ಡಾಲಿಯ 'ಹೆಡ್ ಬುಷ್' ತಂಡ ಸೇರಿದ ರಘು ಮುಖರ್ಜಿ!
ಸ್ಯಾಂಡಲ್ ವುಡ್ ನ ಯುವ ಸಂಭಾಷಣೆ ಬರಹಗಾರ ಗುರು ಕಶ್ಯಪ್ ನಿಧನ, ಕಂಬನಿ ಮಿಡಿದ ಕಲಾವಿದರು
'ಅಂಬುಜಾ' ಸಿನಿಮಾದಲ್ಲಿ ಲಂಬಾಣಿ ಮಹಿಳೆಯಾಗಿ ಶುಭಾ ಪೂಂಜಾ!
ಮಾಯಾವಿಯ ರಹಸ್ಯ ಕೇಸಿನೊಂದಿಗೆ ಮತ್ತೆ ಬಂದ 'ಶಿವಾಜಿ ಸುರತ್ಕಲ್ 2'
ರಜನಿಕಾಂತ್ ನಟನೆಯ ಅಣ್ಣಾತ್ತೆ ಸಿನಿಮಾ ಫಸ್ಟ್ ಲುಕ್ ರಿಲೀಸ್: 'ತಲೈವಾ' ಸ್ಟೈಲ್ ಗೆ ಅಭಿಮಾನಿಗಳು ಫಿದಾ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


