ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್ ನಲ್ಲಿ 'ಸಲಗ' ಸಿನಿಮಾ ನನಗೆ ಫ್ರೆಶ್ ಸ್ಟಾರ್ಟ್ ನೀಡಲಿದೆ: ನಟಿ ಸಂಜನಾ ಆನಂದ್

ಅಕ್ಟೋಬರ್ 14 ರಂದು ಬಿಡುಗಡೆಯಾಗುತ್ತಿರುವ ಕೆ.ಪಿ ಶ್ರೀಕಾಂತ್ ನಿರ್ಮಾಣದ ಈ ಸಿನಿಮಾ, ತಮಗೆ ಮೊದಲ ಕಮರ್ಷಿಯಲ್ ಬ್ರೇಕ್ ನೀಡುವ ವಿಶ್ವಾಸ ಸಂಜನಾ ಅವರದು. ಈ ಸಿನಿಮಾ ಅವರನ್ನು ನೆಕ್ಸ್ಟ್ ಲೆವೆಲ್ ಗೆ ಕರೆದೊಯ್ಯಲಿದೆ ಎಂದು ಅವರು ನಂಬಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ 'ಸಲಗ' ಸಿನಿಮಾ ನನಗೆ ಫ್ರೆಶ್ ಸ್ಟಾರ್ಟ್ ನೀಡಲಿದೆ: ನಟಿ ಸಂಜನಾ ಆನಂದ್
ಸಂಜನಾ ಆನಂದ್
Published On :

ಬೆಂಗಳೂರು: ಈ ಹಿಂದೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದ ನಾಯಕಿಯಾಗಿ ನಟಿಸಿದ್ದ ಸಂಜನಾ ಆನಂದ್ ಅಕ್ಟೋಬರ್ 14ರಂದು ಬಿಡುಗಡೆಯಾಗುತ್ತಿರುವ ಸಲಗ ಸಿನಿಮಾ ತಮಗೆ ಫ್ರೆಶ್ ಸ್ಟಾರ್ಟ್ ನೀಡಲಿದೆ ಎನ್ನುವ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. 

ಅವರು ಒಟ್ಟು 4 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಲಾಸ್ಟ್ ಸಿನಿಮಾ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಬಿಡುಗಡೆಯಾಗಿ ಎರಡೂವರೆ ವರ್ಷಗಳು ಕಳೆದುಹೋಗಿವೆ. ಇಷ್ಟು ದೀರ್ಘ ಸಮಯದ ನಂತರ ತಮ್ಮ ಸಿನಿಮಾ ಸಲಗ ಬಿಡುಗಡೆಯಾಗುತ್ತಿರುವುದರಿಂದ ಫ್ರೆಶ್ ಸ್ಟಾರ್ಟ್ ಅನ್ನಿಸುತ್ತಿದೆ ಎಂದು ಸಂಜನಾ ಅಭಿಪ್ರಾಯ ಹಂಚಿಕೊಂಡಿದ್ದಾರೆ. 

ಕೆ.ಪಿ ಶ್ರೀಕಾಂತ್ ನಿರ್ಮಾಣದ ಈ ಸಿನಿಮಾ ತಮಗೆ ಮೊದಲ ಕಮರ್ಷಿಯಲ್ ಬ್ರೇಕ್ ನೀಡುವ ವಿಶ್ವಾಸ ಸಂಜನಾ ಅವರದು. ಈ ಸಿನಿಮಾ ಅವರನ್ನು ನೆಕ್ಸ್ಟ್ ಲೆವೆಲ್ ಗೆ ಕರೆದೊಯ್ಯಲಿದೆ ಎಂದು ಅವರು ನಂಬಿದ್ದಾರೆ.

ಕಮರ್ಷಿಯಲ್ ಸಿನಿಮಾಗಳಲ್ಲಿ ನಾಯಕಿಯರಿಗೆ ಕಡಿಮೆ ಪ್ರಾಧಾನ್ಯತೆ ನೀಡಲಾಗುತ್ತಿರುವುದರ ಕುರಿತು ಕೇಳಿದಾಗ ಆ ವಿಷಯದಲ್ಲಿ ನಾಯಕ ನಟ ಹಾಗೂ ಸಲಗ ನಿರ್ದೇಶಕರೂ ಆಗಿರುವ ದುನಿಯಾ ವಿಜಯ್ ತಮ್ಮ ಪಾತ್ರಕ್ಕೆ ಪ್ರಾಮುಖ್ಯತೆ ಕೊಟ್ಟಿದ್ದಾರೆ ಎಂದರು.

Related Article

ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ಕಬ್ಜ'ಗೆ ಬಹುಭಾಷಾ ನಟ ನವಾಬ್ ಶಾ ಎಂಟ್ರಿ!

ಉತ್ತರಾಖಂಡದ ಹಿಮಚ್ಛಾದಿತ ಶಿಖರ ಪ್ರಾಂತ್ಯದಲ್ಲಿ ನಟ ಶರಣ್ ಹಾರರ್ ಸಿನಿಮಾ ಚಿತ್ರೀಕರಣ

ಅನಿತಾ ಭಟ್ ನಿರ್ಮಾಣದ 'ಇಂದಿರಾ' ಮೋಷನ್ ಫೋಸ್ಟರ್ ಬಿಡುಗಡೆ ಮಾಡಿದ ಪುನೀತ್ ರಾಜ್ ಕುಮಾರ್

ಬೇರೆ ಸಂಬಂಧ ಹಾಗೂ ಗರ್ಭಪಾತದ ಕುರಿತು ನಟಿ ಸಮಂತಾ ರುತ್ ಪ್ರಭು ಹೇಳಿದ್ದೇನು?

ಸೆಕ್ಸ್ ಸೀನ್ ಶೂಟಿಂಗ್ ವೇಳೆ ಸಹನಟನಿಗೆ ಹಾಲಿವುಡ್ ನಟಿ ಜೆನಿಫರ್ ಆನಿಸ್ಟನ್ ತಲೆದಿಂಬು ಕೊಟ್ಟಿದ್ದೇಕೆ?: ಜೇಕ್ ಬಹಿರಂಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.