ಸಿನಿಮಾ ಸುದ್ದಿ

ಬೇರೆ ಸಂಬಂಧ ಹಾಗೂ ಗರ್ಭಪಾತದ ಕುರಿತು ನಟಿ ಸಮಂತಾ ರುತ್ ಪ್ರಭು ಹೇಳಿದ್ದೇನು?

ನಟಿ ಸಮಂತಾ ರುತ್ ಪ್ರಭು ನಾಗ ಚೈತನ್ಯ ಜತೆಗೆ ವಿಚ್ಛೇದನ ಪಡೆದುಕೊಂಡ ಬಳಿಕ ತಮ್ಮ ಮೇಲಿನ ಆರೋಪ, ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಬೇರೆ ಸಂಬಂಧ ಹಾಗೂ ಗರ್ಭಪಾತದ ಕುರಿತು ನಟಿ ಸಮಂತಾ ರುತ್ ಪ್ರಭು ಹೇಳಿದ್ದೇನು?
ಸಮಂತಾ
Published On :

ಬೆಂಗಳೂರು: ನಟಿ ಸಮಂತಾ ರುತ್ ಪ್ರಭು ನಾಗ ಚೈತನ್ಯ ಜತೆಗೆ ವಿಚ್ಛೇದನ ಪಡೆದುಕೊಂಡ ಬಳಿಕ ತಮ್ಮ ಮೇಲಿನ ಆರೋಪ, ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 

Story image

ನನ್ನ ಮೇಲೆ ಗಂಭೀರ ಆರೋಪಗಳು ಇದ್ದವು. ನನಗೆ ಬೇರೆ ಸಂಬಂಧವಿತ್ತು. ಗರ್ಭಪಾತ ಮಾಡಿಸಿಕೊಂಡಿದ್ದೆ ಎಂದೆಲ್ಲ ವದಂತಿ ಹರಡಲಾಗಿತ್ತು. ಆದರೆ ಇದೆಲ್ಲವೂ ಸುಳ್ಳು ಎಂದು ಸಮಂತಾ ಹೇಳಿದ್ದಾರೆ. 

Story image

ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ಸಮಂತಾ, ಸಂಕಷ್ಟದ ಸಮಯದಲ್ಲಿ ನನ್ನ ಜೊತೆಗೆ ಇರುವವರಿಗೆ ಧನ್ಯವಾದ. ಇನ್ನು ನನ್ನ ಬಗ್ಗೆ ಹಲವು ಊಹಾಪೋಹಗಳು ಹರಡಿವೆ. ಬೇರೆಯವರೊಂದಿಗೆ ನಾನು ಸಂಬಂಧ ಇಟ್ಟುಕೊಂಡಿದ್ದೆ. ನಾನು ಅಬಾಶನ್ ಮಾಡಿಸಿಕೊಂಡಿದ್ದೆ ಹೀಗೆ ಹಲವು ವದಂತಿಗಳನ್ನು ಹಬ್ಬಿಸಲಾಗಿದ್ದು ಇವೆಲ್ಲವೂ ಸುಳ್ಳು ಎಂದು ಹೇಳಿದ್ದಾರೆ. 

Story image

ವಿಚ್ಛೇದನದ ವಿಚಾರವೇ ನನ್ನನ್ನು  ದೀರ್ಘಕಾಲ ದಂಡಿಸಲಿದೆ. ಇದರ ಜೊತೆಗೆ ಈ ರೀತಿಯ ವದಂತಿಗಳು ನನ್ನ ಮನಸ್ಸನ್ನು ಘಾಸಿಗೊಳಿಸಲಾಗುತ್ತಿದೆ. ಇದನ್ನು ಹೀಗೆ ಬಿಟ್ಟರೆ ನನ್ನ ವಿರುದ್ಧದ ವದಂತಿಗಳು ಕೊನೆಯಾಗುವುದಿಲ್ಲ. ಒಂದಲ್ಲ ಒಂದು ವದಂತಿಗಳನ್ನು ಹಬ್ಬಿಸುತ್ತಿರುತ್ತಾರೆ. ಇದನ್ನು ನಂಬಬೇಡಿ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.